DistrictsBidarKarnatakaLatestMain Post

ಸ್ನಾನ ಮಾಡಲೆಂದು ಚುಳಕಿ ನಾಲಾ ಜಲಾಶಯಕ್ಕೆ ಇಳಿದ ಕಾರ್ಮಿಕ ನೀರುಪಾಲು

ಬೀದರ್: ಸ್ನಾನ ಮಾಡಲೆಂದು ಚುಳಕಿ ನಾಲಾ ಜಲಾಶಯಕ್ಕೆ ಇಳಿದ ಕಾರ್ಮಿಕ ನೀರುಪಾಲಾದ ಘಟನೆ ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಚುಳುಕಿನಾಲಾ ಜಲಾಶಯದಲ್ಲಿ ಇಂದು ನಡೆದಿದೆ.

worker at bidar 4

38 ವರ್ಷದ ವಿಲಾಶ್ ಜಾಧವ್ ನೀರು ಪಾಲಾದ ಕಾರ್ಮಿಕ. ವಿಲಾಶ್ ಬಸವಕಲ್ಯಾಣ ತಾಲೂಕಿನ ಘಾಟಭೊರಾಳ ಗ್ರಾಮದ ಮೂಲ ನಿವಾಸಿಯಾಗಿದ್ದು, ಗುತ್ತಿಗೆ ಆಧಾರದ ಮೇಲೆ ಚುಳಕಿ ನಾಲಾ ಜಲಾಶಯದಲ್ಲಿ ಕೆಲಸ ಮಾಡುತ್ತಿದ್ದರು. ವಿಲಾಶ್ ಇಂದು ಬೆಳಗ್ಗೆ ನೀರು ಪಾಲಾಗಿದ್ದು, ಅಗ್ನಿಶಾಮಕ ದಳದವರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಇದನ್ನೂ ಓದಿ: ಹೆಬ್ಬೆಟ್‍ಗಿರಾಕಿ ಮೋದಿ ತನ್ನ ಹೆಸರನ್ನು ‘ಮೌನೇಂದ್ರ ಮೋದಿ’ ಎಂದು ಬದಲಿಸಿಕೊಳ್ಳಲಿ: ಕಾಂಗ್ರೆಸ್

worker at bidar 3

ಸ್ಥಳಕ್ಕೆ ಬಸವಕಲ್ಯಾಣ ಶಾಸಕ ಶರಣು ಸಲಗಾರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದಾರೆ. ಜೊತೆಗೆ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‍ಐ ಕಿರಣ್ ಹಾಗೂ ಹುಲಸೂರು ತಾಲೂಕಿನ ತಹಸಿಲ್ದಾರ್ ಶಿವಾನಂದ ಮೆತ್ರೆ ಮತ್ತು ಬಸವಕಲ್ಯಾಣದ ತಹಸಿಲ್ದಾರ್ ಸಾವಿತ್ರಿ ಸಲಗರ್ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.

worker at bidar 2

Related Articles

Leave a Reply

Your email address will not be published. Required fields are marked *