ವಾಷಿಂಗ್ಟನ್: ಅಮೆರಿಕದಲ್ಲಿ ಕ್ರಿಸ್‍ಮಸ್ ತಯಾರಿ ಜೋರಾಗಿ ನಡೆಯುತ್ತಿದ್ದು, ಮಾಜಿ ಅಧ್ಯಕ್ಷರಾದ ಬರಾಕ್ ಒಬಾಮ್ ಸಾಂತಾ ಕ್ಲಾಸ್ ವೇಷ ಧರಿಸಿ, ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಎಲ್ಲರಿಗೂ ಆಶ್ಚರ್ಯ ಚಕಿತರನ್ನಾಗುವಂತೆ ಮಾಡಿದ್ದಾರೆ.
ಬರಾಕ್ ಒಬಾಮಾ ತಮ್ಮ ಸರಳತೆಯಿಂದ ಹೆಸರಾದವರು. ಕ್ರಿಸ್‍ಮಸ್ ನಿಮಿತ್ತ ಅವರು ಸಾಂತಾ ಕ್ಲಾಸ್‍ನಂತೆ ಕೆಂಪು ಟೋಪಿ ಧರಿಸಿ, ಕೈಯಲ್ಲಿ ಉಡುಗೊರೆಗಳ ಜೋಳಿಗೆ ಹಿಡಿದು ವಾಷಿಂಗ್ಟನ್ ಡಿಸಿಯಲ್ಲಿರುವ ನ್ಯಾಷನಲ್ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ್ದರು. ಆಸ್ಪತ್ರೆಯಲ್ಲಿ ಸಾಮಾನ್ಯ ವ್ಯಕ್ತಿಯಂತೆ ಓಡಾಡಿ, ಕಾಯಿಲೆಯಿಂದ ದಾಖಲಾಗಿರುವ ಮಕ್ಕಳಿಗೆ ಅಪ್ಪುಗೆ ನೀಡಿ, ಶುಭಾಶಯ ಕೋರಿ ಜೊತೆಗೆ ಉಡುಗೊರೆಗಳನ್ನು ನೀಡಿ ಸಂತಸ ಹಂಚಿಕೊಂಡಿದ್ದಾರೆ.
Advertisement
Thank you @BarackObama for making our patients’ day so much brighter. Your surprise warmed our hallways and put smiles on everyone’s faces! Our patients loved your company…and your gifts! https://t.co/bswxSrA4sQ ❤️ #HolidaysAtChildrens #ObamaAndKids pic.twitter.com/qii53UbSRS
— Children's National Hospital ???? (@ChildrensNatl) December 19, 2018
Advertisement
ಒಬಾಮರವರ ಭೇಟಿಯಿಂದಾಗಿ ಆಸ್ಪತ್ರೆಯಲ್ಲಿದ್ದ ಮಕ್ಕಳ ಖುಷಿಯಿಂದ ಕೇಕೆ ಹಾಕುತ್ತಾ ಜೋರಾಗಿ ಕೂಗಿಕೊಂಡಿದ್ದಾರೆ. ಇವನ್ನೆಲ್ಲಾ ಅವರ ಸಹಾಯಕರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದರು. ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಈಗಾಗಲೇ 2.6 ಮಿಲಿಯನ್ ಜನ ವೀಕ್ಷಿಸಿದ್ದಾರೆ. ಅಲ್ಲದೇ ಒಬಾಮಾರವರ ಕರುಣೆ ತುಂಬಿದ ಕಾರ್ಯಕ್ಕೆ ಮೆಚ್ಚುಗೆಯ ಸುರಿಮಳೆಯೇ ಬಂದಿದೆ.
Advertisement
Advertisement
ನ್ಯಾಷನಲ್ ಆಸ್ಪತ್ರೆ ಕೂಡ ವಿಡಿಯೋವನ್ನು ಶೇರ್ ಮಾಡಿ, ಬರಾಕ್ ಒಬಾಮಾ ಅವರಿಗೆ ಕೃತಜ್ಞತೆ ಸಲ್ಲಿಸಿದೆ. ನಮ್ಮಲ್ಲಿನ ರೋಗಪೀಡಿತ ಮಕ್ಕಳಲ್ಲಿ ಉತ್ಸಾಹ ಮೂಡಿಸಿದ್ದೀರಿ. ನಿಮ್ಮೊಂದಿಗೆ ಕಳೆದ ಕ್ಷಣಗಳು ಅವರಿಗೆ ಸದಾ ಸ್ಮರಣೀಯ. ನಿಮ್ಮ ಉಡುಗೊರೆಗಳಿಂದ ತುಂಬ ಸಂತೋಷ ಹೊಂದಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
Merry Christmas and happy holidays to the extraordinary kids, families, and staff at Children’s National. And thanks for humoring me as your stand-in Santa. https://t.co/mFmYCVk7cr
— Barack Obama (@BarackObama) December 19, 2018
ಇನ್ನು ಆಸ್ಪತ್ರೆಯಲ್ಲಿ ಮಾತನಾಡಿದ ಒಬಾಮಾ ಅವರು, ನನಗೆ ಇಲ್ಲಿನ ಮಕ್ಕಳು ಹಾಗೂ ಅವರ ಕುಟುಂಬದೊಂದಿಗೆ ಸಮಯ ಕಳೆಯಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು. ಎರಡು ಹೆಣ್ಣು ಮಕ್ಕಳ ತಂದೆಯಾಗಿ ಈ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳ ಪಾಲಕರ ಕಷ್ಟವನ್ನು ಅರ್ಥ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv