ಕ್ರಿಸ್‍ಮಸ್ ಬಂದ್ರೆ ಮನೆಯಲ್ಲಿ ಕೇಕ್ ಇರಲೇಬೇಕು. ಅಂಗಡಿಗಳಲ್ಲಿ ಸಿಗುವ ಕೇಕ್ ಹೇಗಿರುತ್ತೋ? ಆರೋಗ್ಯಕರವಾಗಿರುತ್ತೋ ಎಂಬಿತ್ಯಾದಿ ಪ್ರಶ್ನೆಗಳು ಗೃಹಿಣಿಯರ ಮನದಲ್ಲಿ ಹುಟ್ಟಿಕೊಳ್ಳುತ್ತವೆ. ಕೆಲಸದ ನಿಮಿತ್ತ ಕುಟುಂಬದಿಂದ ದೂರ ಇರುವವರು ಬೇಕರಿಯಲ್ಲಿ ಸಿಗುವ ಕೇಕ್ ತಿಂದು ಸಾಕಾಗಿದೆ ಎಂಬ ಮನಸ್ಥಿತಿಗೆ ಬಂದಿರುತ್ತಾರೆ. ಕೇಕ್ ಮಾಡಬೇಕೆಂದ್ರೆ ಓವನ್ ಇರಬೇಕು ಮತ್ತಿತ್ತರ ಸಾಮಾಗ್ರಿಗಳು ನಮ್ಮಲ್ಲಿ ಇಲ್ಲ ಎಂದು ಪೇಚಾಡುವರರೂ ಇರುತ್ತಾರೆ. ಓವನ್ ಇಲ್ಲದೇ ಸರಳವಾಗಿ ಕೇಕ್ ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು
Advertisement
ಜೋಳದ ಹಿಟ್ಟು – 1 ಕಪ್
ಗಟ್ಟಿ ಹಾಲು – 1 ಕಪ್
ಪಚ್ಚೆ ಬಾಳೆಹಣ್ಣು – 1
ಅಡುಗೆ ಸೋಡಾ – ಅರ್ಧ ಸ್ಪೂನ್
ಬೆಲ್ಲ – ಸ್ವಲ್ಪ
ತುಪ್ಪ – 2 ಸ್ಪೂನ್
ಡ್ರೈಫ್ರೂಟ್ಸ್ ಅಥವಾ ಟೂಟಿ ಫ್ರೂಟಿ
Advertisement
Advertisement
Advertisement
ಮಾಡುವ ವಿಧಾನ
* ಮೊದಲು ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಚೆನ್ನಾಗಿ ಮಾಗಿದ ಪಚ್ಚೆ ಬಾಳೆಹಣ್ಣನ್ನು ಸಿಪ್ಪೆ ಸುಲಿದು ಹಾಕಿ ಚೆನ್ನಾಗಿ ಮ್ಯಾಶ್ ಮಾಡಿ.
* ನಂತರ ಅದೇ ಬೌಲ್‍ಗೆ ಪುಡಿ ಮಾಡಿದ ಬೆಲ್ಲ, ತುಪ್ಪ, ಸೋಡಾ ಹಾಕಿ ಚೆನ್ನಾಗಿ ಗಂಟು ಬಾರದಂತೆ ಮಿಕ್ಸ್ ಮಾಡಿ.
* ಬಳಿಕ ಅದೇ ಮಿಶ್ರಣಕ್ಕೆ ಗಟ್ಟಿ ಹಾಲು, ಜೋಳದ ಹಿಟ್ಟು ಸೇರಿಸಿ ಚೆನ್ನಾಗಿ ಗಂಟು ಇಲ್ಲದಂತೆ ಮಿಕ್ಸ್ ಮಾಡಿ
* ಈಗ ಕೇಕ್‍ನ ಮಿಶ್ರಣ ರೆಡಿ.
* ಇತ್ತ ಒಂದು ತುಪ್ಪ ಸವರಿದ ಕೇಕ್ ಪ್ಯಾನ್ ಅಥವಾ ಅಗಲವಾದ ಪಾತ್ರೆಗೆ ಈ ಮಿಶ್ರಣವನ್ನು ಹಾಕಿ.
* ಪಾತ್ರೆಯಲ್ಲಿ ಸಮ ಪ್ರಮಾಣದಲ್ಲಿ ಮಿಶ್ರಣವನ್ನು ಕೂರಿಸಲು ಸ್ವಲ್ಪ ನೆಲಕ್ಕೆ ಕುಟ್ಟಿ. ಬಳಿಕ ಮಿಶ್ರಣದ ಮೇಲೆ ಸಣ್ಣಗೆ ಹೆಚ್ಚಿದ ಡ್ರೈಫ್ರೂಟ್ಸ್ ಅಥವಾ ಟೂಟಿ ಫ್ರೂಟಿ ಹಾಕಿ.
* ಈಗ ಈ ಪ್ಯಾನ್ ಅನ್ನು ಕುಕ್ಕರ್‍ಗೆ ನೀರು ಹಾಕಿ ಕುದಿ ಬಂದ ಮೇಲೆ ಪ್ಯಾನ್ ಸ್ಟ್ಯಾಂಡ್ ಇಟ್ಟು ಅದರ ಮೇಲೆ ಕೇಕ್ ಮಿಶ್ರಣ ಇಟ್ಟು 15 ನಿಮಿಷ ಬೇಯಿಸಬೇಕು.
* ಕುಕ್ಕರ್ ಬಿಸಿ ಕಡಿಮೆ ಆದ ಮೇಲೆ ತೆಗೆದು ಮಿಶ್ರಣವನ್ನು ಚಾಕುವಿನಿಂದ ಕತ್ತರಿಸಿ
* ನಿಮಗೆ ಬೇಕಾದ ಶೇಪ್‍ಗೆ ಕತ್ತರಿಸಿ ಸವಿಯಿರಿ.