ಭುವನೇಶ್ವರ: ವಿಶ್ವದೆಲ್ಲೆಡೆ ಇಂದು ಕ್ರಿಸ್‌ಮಸ್ ಸಂಭ್ರಮ ಮನೆಮಾಡಿದೆ. ಈ ನಡುವೆ ಕಲಾವಿದರೊಬ್ಬರು ತಮ್ಮ ವಿಶಿಷ್ಟ ಕಲೆಯ ಮೂಲಕ ಕ್ರೈಸ್ತ ಬಾಂಧವರಿಗೆ ಕ್ರಿಸ್‌ಮಸ್ ಶುಭಾಶಯ ತಿಳಿಸಿದ್ದಾರೆ.
ಹೌದು, ಅಂತಾರಾಷ್ಟ್ರೀಯ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಾಟ್ನಾಯಕ್ ಅವರು, ಪುರಿ ಕಡಲ ತೀರದಲ್ಲಿ ಸುಮಾರು 5,400 ಗುಲಾಬಿಗಳನ್ನು ಬಳಸಿ ಸಂತಾ ಕ್ಲಾಸ್ ಅವರ ಕಲಾಕೃತಿ ರೂಪಿಸಿ ಗಮನ ಸೆಳೆದಿದ್ದಾರೆ. ಆ ಮೂಲಕ ಕ್ರೈಸ್ತ ಬಾಂಧವರಿಗೆ ವಿಶಿಷ್ಟ ರೀತಿಯಲ್ಲಿ ಕ್ರಿಸ್‌ಮಸ್ ಶುಭಕೋರಿದ್ದಾರೆ. ಇದನ್ನೂ ಓದಿ: ಕೊರೊನಾ ಟೈಮ್ ನಲ್ಲಿ ನೀವು ಮಾಡಿದ ಕೆಲಸಕ್ಕೆ ಹ್ಯಾಂಡ್ ಸಾಫ್ ಎಂದ ರಚಿತಾ
Advertisement
Advertisement
ಕೆಂಪು ಹಾಗೂ ಬಿಳಿ ಗುಲಾಬಿ ಹೂಗಳನ್ನು ಬಳಸಿಕೊಂಡು ಸಮುದ್ರ ತೀರದ ಮರಳಿನಲ್ಲಿ ಸಂತಾ ಕ್ಲಾಸ್ ಕಲಾಕೃತಿ ಮೂಡಿಸಿದ್ದಾರೆ. ಜೊತೆಗೆ ʼಕ್ರಿಸ್‌ಮಸ್ ಶುಭಾಶಯಗಳು, ಕೋವಿಡ್ ನಿಯಮಗಳನ್ನು ಪಾಲಿಸಿ ಕ್ರಿಸ್‌ಮಸ್ ಆಚರಿಸಿʼ ಎಂಬ ಸಾಲುಗಳನ್ನು ಬರೆದು ವಿಶ್ ಮಾಡಿದ್ದಾರೆ.
Advertisement
On #ChristmasEve My Biggest Sand with Rose installation Art of #SantaClaus using 5400 Roses at Puri beach with the message “Enjoy your #Christmas with #COVID19 guidelines”. pic.twitter.com/QMv9LGXx7l
— Sudarsan Pattnaik (@sudarsansand) December 24, 2021
Advertisement
ಸುಮಾರು 28 ಅಡಿ ಅಗಲ ಮತ್ತು 50 ಅಡಿ ಉದ್ದದಲ್ಲಿ ಸಂತಾ ಕ್ಲಾಸ್ ಅವರ ಕಲಾಕೃತಿ ಮೂಡಿಬಂದಿದೆ. ಈ ಕಲಾಕೃತಿಯನ್ನು ರೂಪಿಸಲು ಸುದರ್ಶನ್ ಅವರು ಸುಮಾರು 8 ಗಂಟೆಗಳ ಸಮಯ ತೆಗೆದುಕೊಂಡಿದ್ದಾರೆ. ಇದಕ್ಕಾಗಿ ಮರಳು ಶಿಲ್ಪ ಕಲಾಸಂಸ್ಥೆಯ ಸಹಕಾರವನ್ನೂ ಪಡೆದಿದ್ದಾರೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ಮಿಗ್-21 ವಿಮಾನ ಪತನ – ಪೈಲಟ್ ಹುತಾತ್ಮ
ಕೊರೊನಾ ಸಾಂಕ್ರಾಮಿಕ ಇಡೀ ವಿಶ್ವವನ್ನು ವ್ಯಾಪಿಸಿ ಸಂಕಷ್ಟ ಉಂಟುಮಾಡಿರುವುದು ನಮಗೆಲ್ಲರಿಗೂ ತಿಳಿದಿದೆ. ಆದರೂ ನಾವು ಹಬ್ಬ ಆಚರಣೆಗಳನ್ನು ಮಾಡುತ್ತಿದ್ದೇವೆ. ಕೋವಿಡ್ ನಿಯಮಗಳನ್ನು ಪಾಲಿಸಿ ಕ್ರಿಸ್‌ಮಸ್ ಆಚರಿಸುವಂತೆ ಕಲಾಕೃತಿ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದೇವೆ. ಈ ಕಲಾಕೃತಿಯು ದಾಖಲೆ ಪುಸ್ತಕದಲ್ಲಿ ಹೆಸರಾಗುತ್ತದೆ ಎಂದು ಕಲಾವಿದ ಸುದರ್ಶನ್ ಪ್ರತಿಕ್ರಿಯಿಸಿದ್ದಾರೆ.