ಬೆಂಗಳೂರು: ಕ್ರಿಸ್‍ಮಸ್ ಅಂದ್ರೆನೇ ಕಲರ್ ಫುಲ್. ಸಿಲಿಕಾನ್ ಸಿಟಿ ಸೇರಿದಂತೆ ನಾಡಿನ ಚರ್ಚ್, ಕ್ರೈಸ್ತ ಬಾಂಧವರ ಮನೆಗಳು ಕಲರ್ ಫುಲ್ ಲೈಟಿಂಗ್ಸ್ ನಿಂದ ಜಗಮಗಿಸುತ್ತಿದೆ. ನಾಡಿನೆಲ್ಲೆಡೆ ಕ್ರಿಸ್‍ಮಸ್ ಸಂಭ್ರಮ ಜೋರಾಗಿದೆ.
ಬೆಂಗಳೂರಿನಲ್ಲಿ ರಾತ್ರಿಯೇ ಕ್ರಿಸ್‍ಮಸ್ ಸಂಭ್ರಮ ಮುಗಿಲು ಮುಟ್ಟಿತ್ತು. ಶಿವಾಜಿನಗರದ ಸೇಂಟ್ ಮೇರಿಸ್ ಬಸೆಲಿಕಾ, ಶಾಂತಿ ನಗರದ ಸೇಂಟ್ ಪ್ಯಾಟ್ರಿಕ್ಸ್ ಚರ್ಚ್, ರಿಚ್ ಮಂಡ್ ರಸ್ತೆಯ ಸ್ಯಾಕ್ರೇಡ್ ಹಾರ್ಟ್ ಚರ್ಚ್ ಸೇರಿದಂತೆ ನಗರದಲ್ಲಿ 80 ರಿಂದ 85 ಚರ್ಚ್ ಗಳಿದ್ದು, ಬಣ್ಣ ಬಣ್ಣದ ಬೆಳಕುಗಳಿಂದ ಕಂಗೊಳಿಸುತ್ತಿವೆ.
ಶಿವಾಜಿನಗರದ ಸೇಂಟ್ ಮರಿಯಾ ಚರ್ಚ್ ನಲ್ಲಿಯೂ ಕೂಡ ಕ್ರಿಸ್ ಮಸ್ ಸಡಗರ ತುಸು ಜೋರಾಗೆ ಇತ್ತು. ಶಾಂತಿ, ಸೌಹಾರ್ದತೆಗೆ ಸಂಕೇತವಾಗಿ ಕ್ರಿಸ್‍ಮಸ್ ಅನ್ನು ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಪಟಾಕಿ ಸಿಡಿಸುವ ಮೂಲಕ ಕ್ರೈಸ್ತ ಬಾಂಧವರು ಬರಮಾಡಿಕೊಂಡ್ರು.
ಚರ್ಚ್ ನಲ್ಲಿ ಕ್ರೈಸ್ತಬಾಂಧವರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿ ಯೇಸುವಿಗೆ ನಮನ ಸಲ್ಲಿಸಿದ್ರು. ಜೊತೆಗೆ ಈ ಕ್ರಿಸ್ ಮಸ್ ಹಬ್ಬದಲ್ಲಿ ಬೇರೆ ಧರ್ಮದವರೂ ಭಾಗಿಯಾಗಿ ಕ್ರಿಸ್ ಮಸ್ ಹಬ್ಬವನ್ನ ಸಂಭ್ರಮಿಸಿದ್ದು, ಸಾವಿರಾರು ಜನ ತಡ ರಾತ್ರಿಯೇ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಹಬ್ಬದ ವಿಶೇಷವಾಗಿ ಚರ್ಚ್ ನಲ್ಲಿ ಇಟ್ಟಿದ್ದ ಸ್ಯಾಂತ ಹಾಗೂ ಆತನ ಕುದುರೆಗಳು, ಕರ್ತನಾದ ಯೇಸು, ತಾಯಿ ಮೇರಿ ಸೇರಿದಂತೆ ಹಲವಾರು ಗೊಂಬೆಗಳಿದ್ದು ಬಂದವರ ಕಣ್ಮನ ಸೆಳೆಯಿತು.