ನವದೆಹಲಿ: ಅಗಸ್ತಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣ ಸಂಬಂಧ ಇಡಿ ತನಿಖೆ ತೀವ್ರಗೊಂಡಿದ್ದು, ಇದೀಗ ತನಿಖೆಯ ಉರುಳು ಕಾಂಗ್ರೆಸ್ ಹೈಕಮಾಂಡ್ ಬುಡಕ್ಕೆ ಸುತ್ತಿಕೊಳ್ಳುತ್ತಿದೆ.
ಕಾಂಗ್ರೆಸ್‍ನ ಪಕ್ಷದ ಶ್ರೀಮತಿ ಗಾಂಧಿ ಹಾಗೂ ಇಟಾಲಿಯನ್ ಮಹಿಳೆಯ ಪುತ್ರನ ಹೆಸರು ಪ್ರಕರಣದಲ್ಲಿ ಕೇಳಿ ಬಂದಿದ್ದು. ಸೋನಿಯಾ ಗಾಂಧಿ ಹೆಸರನ್ನು ಹಗರಣದ ಪ್ರಮುಖ ದಲ್ಲಾಳಿ ಕ್ರಿಶ್ಚಿಯನ್ ಮೈಕಲ್ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದ್ದು, ಈ ಬೆಳವಣಿಗೆ ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
Advertisement
Michel’s lawyer Aljo K Joseph to court: Michel Christian had query regarding something&how legal response needs to be given.He tried to give us something, we didn’t see what it was,It was immediately pointed out that he was slipping us a paper&paper was taken away #AgustaWestland
— ANI (@ANI) December 29, 2018
Advertisement
ಸದ್ಯ ಈ ಸಂಗತಿ ಖಚಿತವಾಗ ಬೇಕಿದ್ದು, ಆದರೆ ಕಾಂಗ್ರೆಸ್‍ಗೆ ತೀವ್ರ ಮುಜುಗರ ತಂದಿದೆ. ಅಲ್ಲದೇ ಹೆಚ್ಚಿನ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ ಶಸ್ತ್ರಾಸ್ತ್ರ ದಲ್ಲಾಳಿ ಕ್ರಿಶ್ಚಿಯನ್ ಮೈಕಲ್ ರನ್ನು ಮತ್ತೆ ವಶಕ್ಕೆ ಪಡೆದಿದೆ. ಶೀಘ್ರವೇ ಸೋನಿಯಾ-ರಾಹುಲ್ ವಿಚಾರಣೆ ನಡೆಸುವ ಸಾಧ್ಯತೆಯೂ ಇದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
Advertisement
Advertisement
ವಿಚಾರಣೆ ವೇಳೆ ಮೈಕಲ್ ನೀಡಿರುವ ಮಾಹಿತಿ ಅನ್ವಯ, ಹಗರಣದಲ್ಲಿ ಇಟಾಲಿಯನ್ ಮಹಿಳೆಯ ಪುತ್ರನ ಹೆಸರು ಹೇಳಿದ್ದಾನೆ. ಅಲ್ಲದೇ ಮುಂದೇ ಆತನೇ ದೇಶದ ಪ್ರಧಾನಿಯಾಗಲಿದ್ದಾರೆ ಎಂದು ತಿಳಿಸಿದ್ದಾಗಿ ಡಿಲ್ಲಿ ಪಟಿಯಾಲಾ ಕೋರ್ಟ್ ಗೆ ಇಡಿ ಮಾಹಿತಿ ನೀಡಿದೆ. ಇತ್ತ ನ್ಯಾಯಾಲಯ ಮೈಕಲ್ ರನ್ನು 7 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲಾಗಿದೆ. ಅಲ್ಲದೇ ಮೈಕಲ್ ನನ್ನು ನೋಡಲು ಬೆಳಗ್ಗೆ ಸಂಜೆ 15 ನಿಮಿಷ ಮಾತ್ರ ಸಮಯ ನೀಡಿದೆ.
RPN Singh Congress on ED says Christian Michel has taken the name of "Mrs Gandhi": There is pressure on Michel to name a particular family, why is the chowkidaar trying to pressurize the govt agencies to name a family? BJP script writers are working over time. #Agustawestland pic.twitter.com/qCxYeObJYN
— ANI (@ANI) December 29, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv