ಜೋಹಾನ್ಸ್ ಬರ್ಗ್: ಆರ್ಸಿಬಿ ತಂಡದ ಮಾಜಿ ಆಟಗಾರ ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ಆಲ್‍ರೌಂಡರ್ ಕ್ರೀಸ್ ಮೋರಿಸ್ ಎಲ್ಲಾ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದಾರೆ.
34 ವರ್ಷ ಪ್ರಾಯದ ಮೋರಿಸ್, 12 ವರ್ಷಗಳ ತಮ್ಮ ಕ್ರಿಕೆಟ್ ಕೆರಿಯರ್‌ಗೆ ಇಂದು ಗುಡ್‍ಬೈ ಹೇಳಿದ್ದಾರೆ. 2009ರ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಸದ್ದು ಮಾಡಲು ಆರಂಭಿಸಿದ ಮೋರಿಸ್, 2012ರಲ್ಲಿ ರಾಷ್ಟ್ರೀಯ ತಂಡ ದಕ್ಷಿಣ ಆಫ್ರಿಕಾ ಪರ ಕಣಕ್ಕಿಳಿದು ಈವರೆಗೇ 4 ಟೆಸ್ಟ್, 42 ಏಕದಿನ ಪಂದ್ಯ ಮತ್ತು 23 ಟಿ20 ಪಂದ್ಯಗಳನ್ನಾಡಿರುವ ಮೋರಿಸ್ ಕ್ರಮವಾಗಿ 12, 48 ಮತ್ತು 34 ವಿಕೆಟ್ ಮತ್ತು 3 ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಇದನ್ನೂ ಓದಿ: ವಿವೋ ಐಪಿಎಲ್ ಅಂತ್ಯ ಇನ್ಮುಂದೆ ಟಾಟಾ ಐಪಿಎಲ್
ಮೋರಿಸ್ ರಾಷ್ಟ್ರೀಯ ತಂಡಕ್ಕಿಂತಲು ಹೆಚ್ಚಾಗಿ ವಿಶ್ವದ ಹಲವು ಭಾಗಗಳಲ್ಲಿ ನಡೆಯುವ ಟಿ20 ಲೀಗ್‍ಗಳಲ್ಲಿ ಮಿಂಚುಹರಿಸಿ ಬೇಡಿಕೆಯ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಐಪಿಎಲ್‍ನಲ್ಲೂ ಕೂಡ ಸದ್ದು ಮಾಡಿದ್ದ ಮೋರಿಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು. ಅಲ್ಲದೆ 2021ರಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ದುಬಾರಿ ಬೆಲೆಗೆ ಬಿಡ್ ಆಗಿದ್ದರು. ಬರೋಬ್ಬರಿ 16.25 ಕೋಟಿ ರೂ. ನೀಡಿ ರಾಜಸ್ಥಾನ ರಾಯಲ್ಸ್ ಅವರನ್ನು ಖರೀದಿಸಿತ್ತು. ಇದನ್ನೂ ಓದಿ: 16.25 ಕೋಟಿಗೆ ಸಿಕ್ತು ಫಲ – ಕೊನೆಯಲ್ಲಿ ಮೋರಿಸ್ ಸಿಕ್ಸರ್ ಆಟ, ರಾಜಸ್ಥಾನಕ್ಕೆ ಜಯ
View this post on Instagram
ಮೋರಿಸ್ ತಮ್ಮ ನಿವೃತ್ತಿ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ಘೊಷಿಸಿದ್ದು, ನಾನು ಇಂದು ಎಲ್ಲಾ ಮಾದರಿ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ನನ್ನ ಕ್ರಿಕೆಟ್ ಜರ್ನಿಯಲ್ಲಿ ಜೊತೆಯಾದ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ.