ಲಂಡನ್: ತಮ್ಮ ಬಿರುಸಿನ ಹೊಡೆತಗಳ ಮೂಲಕವೇ ಕ್ರಿಕೆಟ್ ಅಂಗಳದಲ್ಲಿ ಗುರುತಿಸಿಕೊಂಡಿರುವ ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಆಟಗಾರ ಕ್ರಿಸ್ ಗೇಲ್ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಲಿದ್ದಾರೆ. ಆಗಸ್ಟ್-ಸೆಪ್ಟೆಂಬರ್ ನಲ್ಲಿ ಭಾರತ ವಿರುದ್ಧ ನಡೆಯಲಿರುವ ಸರಣಿ ಗೇಲ್ ಅವರ ಅಂತಿಮ ಪಂದ್ಯವಾಗಲಿದೆ. ಭಾರತ ವಿರುದ್ಧದ ಸರಣಿ ಬಳಿಕ ಗೇಲ್ ನಿವೃತ್ತಿ ಪಡೆಯೋದು ಬಹುತೇಕ ಖಚಿತವಾಗಿದೆ.
Advertisement
ಈ ಮೊದಲು ಗೇಲ್ ವಿಶ್ವಕಪ್ ಪಂದ್ಯಗಳಲ್ಲಿ ಕೊನೆಯದಾಗಿ ಆಡಲಿದ್ದೇನೆ ಎಂದು ತಿಳಿಸಿದ್ದರು. ಬುಧವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ರಿಸ್ ಗೇಲ್, ಇದೇ ಅಂತ್ಯವೇನಲ್ಲ. ನಾನು ಇನ್ನೂ ಕೆಲ ಪಂದ್ಯ ಆಡಲು ಸಮರ್ಥನಿದ್ದು, ಮುಂದಿನ ದಿನಗಳಲ್ಲಿಯೂ ಆಡಲಿದ್ದೇನೆ. ಬಹುಶಃ ಒಂದೇ ಸರಣಿ ಆಡಬಹುದು. ಭವಿಷ್ಯದಲ್ಲಿ ಏನಾಗುತ್ತೆ ಎಂಬುದನ್ನು ಯಾರು ತಿಳಿಯಲಾರರು. ಭಾರತ ವಿರುದ್ಧ ಟೆಸ್ಟ್ ಮತ್ತು ಏಕದಿನ ಪಂದ್ಯ ಮಾತ್ರ ಆಡಲಿದ್ದು, ಟಿ20 ಸಿರೀಸ್ ನಲ್ಲಿ ಆಡಲ್ಲ. ವಿಶ್ವಕಪ್ ಬಳಿಕ ನನ್ನ ಮುಂದಿನ ನಿರ್ಧಾರ ತಿಳಿಸಲಿದ್ದೇನೆ ಎಂದು ಹೇಳಿದ್ದಾರೆ.
Advertisement
Advertisement
ಇದೇ ವೇಳೆ ಮಾತನಾಡಿದ ವೆಸ್ಟ್ ಇಂಡೀಸ್ ಮಾಧ್ಯಮ ವ್ಯವಸ್ಥಾಪಕ ಫಿಲಿಪ್ ಸ್ಪೂನರ್, ಭಾರತದ ವಿರುದ್ಧದ ಸರಣಿಯೇ ಗೇಲ್ ಅವರ ಕೊನೆಯ ಪಂದ್ಯವಾಗಲಿದೆ ಎಂಬುದನ್ನು ಖಚಿತಪಡಿಸಿದ್ದಾರೆ. ಭಾರತ ಮತ್ತು ವೆಸ್ಟ್ ಇಂಡೀಸ್ ಸರಣಿ ಆಗಸ್ಟ್ ನಿಂದ ಸೆಪ್ಟೆಂಬರ್ ವರೆಗೆ ನಡೆಯಲಿದೆ. ಸರಣಿ ಆಗಸ್ಟ್ 3ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 3ಕ್ಕೆ ಅಂತ್ಯವಾಗಲಿದೆ.
Advertisement
1999ರಲ್ಲಿ ಮೊದಲ ಬಾರಿಗೆ ಭಾರತದ ವಿರುದ್ಧವೇ ಗೇಲ್ ಕಣಕ್ಕಿಳಿದಿದ್ದರು. 39 ವರ್ಷದ ಎಡಗೈ ಬ್ಯಾಟ್ಸ್‍ಮ್ಯಾನ್ ಕ್ರಿಸ್ ಗೇಲ್ 103 ಟೆಸ್ಟ್ ಪಂದ್ಯಗಳನ್ನಾಡಿದ್ದು, 42.19ರ ಸರಾಸರಿಯಲ್ಲಿ 7,215 ರನ್ (3 ದ್ವಿಶತಕ, 15 ಶತಕ, 37 ಅರ್ಧಶತಕ) ಕಲೆಹಾಕಿದ್ದಾರೆ. 294 ಏಕದಿನ ಪಂದ್ಯದಲ್ಲಿ 10,345 ರನ್ (ದ್ವಿಶತಕ 1, 25 ಶತಕ, 53 ಅರ್ಧ ಶತಕ), 58 ಟಿಟ್ವೆಂಟಿ ಮ್ಯಾಚ್ ಗಳಲ್ಲಿ 1627 ರನ್ (2 ಶತಕ, 13 ಅರ್ಧ ಶತಕ) ಹೊಡೆದಿದ್ದಾರೆ.