ನಿವೃತ್ತಿ ಘೋಷಣೆ ಬಳಿಕ ಮತ್ತೆ ಐಪಿಎಲ್‍ನಲ್ಲಿ ಬ್ಯಾಟ್ ಬೀಸುವ ಸೂಚನೆ ಕೊಟ್ಟ ಗೇಲ್

Public TV
2 Min Read
Virat Kohli Chris Gayle

ಬೆಂಗಳೂರು: ಐಪಿಎಲ್ (IPL) ನಿವೃತ್ತಿ ಘೋಷಿಸಿದ್ದ ಕ್ರಿಸ್ ಗೇಲ್ (Chris Gayle) ಮತ್ತೆ ಐಪಿಎಲ್‍ಗೆ ಮರಳುವ ಮಾತಾಡಿದ್ದಾರೆ. ಹೌದು, ವಿರಾಟ್ ಕೊಹ್ಲಿಯ (Virat Kohli) ದಾಖಲೆಯಿಂದ ನಿದ್ರೆ ಕಳೆದುಕೊಂಡಿರುವ ಗೇಲ್ ಮುಂಬರುವ ಐಪಿಎಲ್‍ನಲ್ಲಿ ಬ್ಯಾಟ್ ಬೀಸುವ ಸೂಚನೆ ನೀಡಿದ್ದಾರೆ.

16ನೇ ಆವೃತ್ತಿಯ ಐಪಿಎಲ್‍ನಲ್ಲಿ ಎರಡನೇ ಶತಕ ಸಿಡಿಸಿದ ಕೊಹ್ಲಿ ದಾಖಲೆ ಬರೆದಿದ್ದಾರೆ. ಈ ಮೂಲಕ ಕೊಹ್ಲಿ ಶತಕ 7ಕ್ಕೆ ಏರಿದೆ. ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಶತಕಗಳಿಸಿದ ಆಟಗಾರ ಎಂಬ ಪಟ್ಟವನ್ನು ವಿರಾಟ್ ಈಗ ಅಲಂಕರಿಸಿದ್ದಾರೆ. ಹೈದರಾಬಾದ್ ವಿರುದ್ಧ ಶತಕ ಬಾರಿಸಿ ಅತಿ ಹೆಚ್ಚು ಸೆಂಚುರಿ ಸಿಡಿಸಿದ್ದ ಕ್ರಿಸ್ ಗೇಲ್ ಜೊತೆ ಕೊಹ್ಲಿ ಜಂಟಿ ದಾಖಲೆ ಹೊಂದಿದ್ದರು. ಗೇಲ್ 6 ಶತಕ ಬಾರಿಸಿ ಐಪಿಎಲ್‍ನಲ್ಲಿ ದಾಖಲೆ ಮಾಡಿದ್ದರು. ಇದೀಗ ಕೊಹ್ಲಿ ಗೇಲ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಇದನ್ನೂ ಓದಿ: RCB ಔಟ್, ಮುಂಬೈಗೆ ಪ್ಲೇ ಆಫ್ ಗಿಫ್ಟ್ – ಪಂದ್ಯ ಸೋತಿದ್ದಕ್ಕೆ ಕಣ್ಣೀರಿಟ್ಟ ಕೊಹ್ಲಿ

ಈ ಬಗ್ಗೆ ಕ್ರಿಸ್ ಗೇಲ್, ಕೊಹ್ಲಿ ಕಡೆಯಿಂದ ಅದ್ಭುತ ಆಟಗಾರಿಕೆ ಮೂಡಿಬಂದಿದೆ. ಅವರು ನನ್ನ ದಾಖಲೆಯನ್ನು ಹಿಂದಿಕ್ಕಿದ್ದಾರೆ. ನಿವೃತ್ತಿ ಹಿಂಪಡೆದು ಐಪಿಎಲ್‍ಗೆ ಮರಳುತ್ತೇನೆ. ಕೊಹ್ಲಿ ಅತ್ಯುತ್ತಮ ಆಟಗಾರ, ತಂಡವನ್ನು ಗೆಲ್ಲಿಸಲು ಸಾಕಷ್ಟು ಶ್ರಮವಹಿಸುತ್ತಾರೆ. ಫಾಫ್ ಡುಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಆಟ ಅದ್ಭುತವಾಗಿರುತ್ತದೆ ಎಂದಿದ್ದಾರೆ.

Chris Gayle 1

ಆರ್‌ಸಿಬಿ (RCB) ಪರ ಐಪಿಎಲ್‍ನಲ್ಲಿ ಸತತ ಎರಡು ಪಂದ್ಯಗಳಲ್ಲಿ ಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆ ಕೂಡ ವಿರಾಟ್ ಕೊಹ್ಲಿಯ ಪಾಲಾಗಿದೆ. ಜೊತೆಗೆ ಟೀಮ್ ಇಂಡಿಯಾ ಪರ ಟಿ20 ಪಂದ್ಯದಲ್ಲಿ ಅತ್ಯಧಿಕ ಶತಕ ಬಾರಿಸಿದ ಆಟಗಾರರಾಗಿದ್ದಾರೆ. ಐಪಿಎಲ್ 2023 ರಲ್ಲಿ 14 ಪಂದ್ಯಗಳನ್ನು ಆಡಿದ ವಿರಾಟ್ ಕೊಹ್ಲಿ, 639 ರನ್ ಗಳಿಸಿದರು. 53.25 ಸರಾಸರಿ ಜೊತೆಗೆ 139.82 ಸ್ಟ್ರೈಕ್‍ರೇಟ್ ಕಾಪಾಡಿಕೊಂಡಿದ್ದಾರೆ. ಫಾಪ್, ಶುಭ್‍ಮನ್ ಗಿಲ್ ಬಳಿಕ ಈ ಬಾರಿಯ ಸೀಸನ್‍ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿದ್ದಾರೆ.

ಕೊಹ್ಲಿಯ ದಾಖಲೆ ನಡುವೆಯು, ಐಪಿಎಲ್ 2023 ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊರ ನಡೆದಿದೆ. ಈ ಮೂಲಕ ಇಷ್ಟು ವರ್ಷಗಳಂತೆ ಈ ವರ್ಷವೂ ಆರ್‌ಸಿಬಿ ಐಪಿಎಲ್ ಕಪ್ ಗೆಲ್ಲುವ ನಿರೀಕ್ಷೆ ಹುಸಿಯಾಗಿದೆ. ಇದನ್ನೂ ಓದಿ: IPL 2023 Playoffs: ಮೇ 23ಕ್ಕೆ CSK vs GT ಹೈವೋಲ್ಟೇಜ್‌ ಕದನ – ಮಹಿ ಮೇಲೆ ಎಲ್ಲರ ಕಣ್ಣು

Share This Article