‘ಪಾಪಾ ಪಾಂಡು’ ಖ್ಯಾತಿಯ ವಿಕ್ರಮ್ ಸೂರಿ (Vikram Suri) ನಿರ್ದೇಶನದ ‘ಚೌಕಬಾರ’ (Chowkabara) ಸಿನಿಮಾ ದೋಹಾ ನಗರದಲ್ಲಿ ಮೇ 25 ರಂದು ಯಶಸ್ವಿಯಾಗಿ ಪ್ರದರ್ಶನಗೊಂಡಿತು. ದೋಹಾ ನಗರದ ಕನ್ನಡಿಗರು ಸಿನಿಮಾ ಮೆಚ್ಚಿಕೊಂಡು ಕಲಾವಿದರನ್ನು ಗೌರವಿಸಿದರು. ಚಿತ್ರದ ನಿರ್ದೇಶಕರಾದ ವಿಕ್ರಮ್ ಸೂರಿ, ನಟಿ ನಮಿತಾ ರಾವ್ (Namita Rao), ನಟ ವಿಹಾನ್ ಹಾಗೂ ಚಿತ್ರದ ಸಂಗೀತ ನಿರ್ದೇಶಕ ಅಶ್ವಿನ್ ಕುಮಾರ್ ಅವರೊಟ್ಟಿಗೆ ಕತಾರ್ ಕನ್ನಡಿಗರು ಚಿತ್ರವನ್ನು ನೋಡಿ ಆನಂದಿಸಿದರು.
ಇದು ಕಾದಂಬರಿ ಆಧಾರಿತ ಚಿತ್ರವಾಗಿದ್ದು ವಿಶಿಷ್ಟ ಪ್ರೇಮಕಥೆಯನ್ನು ಹೊಂದಿದೆ. ಎಲ್ಲ ಕಲಾವಿದರು ಮನ ಮುಟ್ಟುವಂತೆ ಅಭಿನಯಿಸಿದ್ದಾರೆ. ಈ ಚಿತ್ರದ ಯಶಸ್ವಿ ಪ್ರದರ್ಶನಕ್ಕೆ ಸುಬ್ರಮಣ್ಯ ಹೆಬ್ಬಾಗಿಲು ಮತ್ತು ಅವರ ತಂಡ ಸಾಕಷ್ಟು ಪರಿಶ್ರಮ ಪಟ್ಟಿದೆ. ಕತಾರ್ (Qatar) ನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನವಾಗಲು ಸುಬ್ರಮಣ್ಯ ಹೆಬ್ಬಾಗಿಲು ಸಾಕಷ್ಟು ಶ್ರಮಿಸುತ್ತಿದ್ದಾರೆ. ಇದನ್ನೂ ಓದಿ:ಶಕುನಿ ಪಾತ್ರಧಾರಿ ಗೂಫಿ ಆರೋಗ್ಯ ಸ್ಥಿತಿ ಗಂಭೀರ
ಈಗಾಗಲೇ ಕರ್ನಾಟಕದಲ್ಲೂ ಚಿತ್ರ ರಿಲೀಸ್ ಆಗಿದ್ದು, ಪ್ರೇಕ್ಷಕರು ಮೆಚ್ಚಿದ್ದರು. ವಿಕ್ರಮ್ ಸೂರಿ ನಿರ್ದೇಶನ ಮತ್ತು ಅವರ ಪತ್ನಿ ನಿಮಿತಾ ಅವರ ಅಭಿನಯವನ್ನು ಮೆಚ್ಚಿ ಮಾತನಾಡಿದ್ದರು. ಇದೀಗ ವಿದೇಶದಲ್ಲೂ ಚೌಕಬಾರ ರಿಲೀಸ್ ಆಗಿ, ವಿದೇಶಿಗರನ್ನು ರಂಜಿಸುತ್ತಿದೆ.