ಧಾರವಾಡ: ಬಸದಿ ಜಾಗದಲ್ಲಿ ಮುನಿ ನಿವಾಸ ನಿರ್ಮಾಣಕ್ಕೆ ಅಗೆಯುವ ಸಮಯದಲ್ಲಿ ಚೌವೀಸ ತೀರ್ಥಂಕರರ ಪುರಾತನ ಕಾಲದ ವಿಗ್ರಹ ಪತ್ತೆಯಾಗಿದೆ.
ಜಿಲ್ಲೆಯ ಕೊಟಬಾಗಿ ಗ್ರಾಮದಲ್ಲಿ ಹಳೆಯ ಬಸದಿ ಜಾಗದಲ್ಲಿ ಮುನಿ ನಿವಾಸಕ್ಕಾಗಿ ಜಾಗವನ್ನು ಅಗೆಯಲಾಗುತ್ತಿತ್ತು. ಈ ವೇಳೆ ಸುಮಾರು 10 ಅಡಿ ಆಳದಲ್ಲಿ ಚೌವೀಸ ತೀರ್ಥಂಕರರ ಪುರಾತನ ಮೂರ್ತಿಯು ದೊರೆತಿದೆ. ಈ ಮೂರ್ತಿ 8ನೇ ಶತಮಾನಕ್ಕಿಂತ ಹಳೆಯದಾಗಿರಬಹುದೆಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ದಸರಾ ಉದ್ಘಾಟನೆ- ಎಸ್.ಎಂ.ಕೃಷ್ಣಾರನ್ನು ಅಧಿಕೃತವಾಗಿ ಆಹ್ವಾನಿಸಿದ ಸರ್ಕಾರ
ಇದೇ ಜಾಗದಲ್ಲಿ ಕೆಲವು ವರ್ಷಗಳ ಹಿಂದೆ ಭಗವಾನ ಆದಿನಾಥರ ಹಾಗೂ ಭಗವಾನ ವಿಮಲನಾಥ ತೀರ್ಥಂಕರರ ಮೂರ್ತಿಗಳು ದೊರೆತಿದ್ದವು. ಅಲ್ಲದೆ ಹಳೆಗನ್ನಡದಲ್ಲಿರುವ ಶಾಸನಗಳು ದೊರೆತಿವೆ. ಶ್ರೀ ಪ್ರಸಂಗಸಾಗರ ಮಹಾರಾಜರು ಕೊಟಬಾಗಿ ಗ್ರಾಮದಲ್ಲಿ ಚಾತುರ್ಮಾಸವನ್ನು ಆಚರಿಸುತ್ತಿದ್ದಾರೆ. ಜಿನಬಿಂಬ ನೋಡಲು ಗ್ರಾಮದ ಹಳೆಯ ಬಸದಿ ಕಡೆ ಜನಸಾಗರ ಹರಿದುಬರುತ್ತಿದೆ.