ಮುಂಬೈ: ಬೆಂಗಳೂರು ಮೂಲದ ಡ್ಯಾನ್ಸರ್, ನೃತ್ಯ ಸಂಯೋಜಕ ಸಲ್ಮಾನ್ ಯೂಸುಫ್ ಖಾನ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. ಈ ಸಂಬಂಧ ಮುಂಬೈನ ಅಂಧೇರಿಯ ಓಶಿವರಾ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದಾರೆ.
ಜನವರಿ 30ರಂದ ಸಂತ್ರಸ್ತೆ ದೂರು ದಾಖಲಿಸಿದ್ದು, ಸಲ್ಮಾನ್ ಮತ್ತು ಆತನ ಸೋದರ ಸಂಬಂಧಿ ನನ್ನ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಹೇಳಿದ್ದಾರೆ. ಇಬ್ಬರು ಬೇರೆ ಬೇರೆ ಸ್ಥಳಗಳಲ್ಲಿ ನನಗೆ ಲೈಂಗಿಕವಾಗಿ ಕಿರುಕುಳ ನೀಡಿದ್ದು, ಸಿನಿಮಾ ಉದ್ಯಮದಲ್ಲಿ ಇದೆಲ್ಲ ಸಾಮಾನ್ಯ ಅಂತಾ ಸಲ್ಮಾನ್ ಹೇಳಿದ್ದರು. ಆಷ್ಟೇ ಅಲ್ಲದೇ ವಿಷಯವನ್ನು ಬಹಿರಂಗಗೊಳಿಸದಂತೆ ಬೆದರಿಕೆಯನ್ನು ಸಲ್ಮಾನ್ ಹಾಕಿದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
Advertisement
Advertisement
ದೂರಿನಲ್ಲಿ ಏನಿದೆ?
ನಾನು ಸಹ ನೃತ್ಯಗಾರ್ತಿಯಾಗಿದ್ದು, 2018 ಆಗಸ್ಟ್ ನಲ್ಲಿ ಸಲ್ಮಾನ್ ಮ್ಯಾನೇಜರ್ ಅವರನ್ನು ನಾನು ಸಂಪರ್ಕಿಸಿದೆ. ಈ ಸಮಯದಲ್ಲಿ ನಾನು ಲಂಡನ್ ನಲ್ಲಿದ್ದೆ. ಕೆಲ ದಿನಗಳ ನಂತರ ಅಂಧೇರಿಯ ಕಾಫಿ ಶಾಪ್ ನಲ್ಲಿ ಸಲ್ಮಾನ್ ಮತ್ತು ನಾನು ಭೇಟಿಯಾಗಿದ್ದೆ. ಇದಾದ ಬಳಿಕ ಸಲ್ಮಾನ್ ಬಾಲಿವುಡ್ ಪಾರ್ಕ್, ದುಬೈನಲ್ಲಿ ತಮ್ಮೊಂದಿಗೆ ನರ್ತಿಸುವ ಅವಕಾಶ ನೀಡಿದ್ದರು. ಒಂದು ದಿನ ಸಲ್ಮಾನ್ ಡ್ಯಾನ್ಸ್ ಮಾಡುವ ವೇಳೆ ನನ್ನನ್ನು ಅಸಭ್ಯವಾಗಿ ಸ್ಪರ್ಶಿಸಿದರು. ಇದನ್ನು ಪ್ರಶ್ನಿಸಿದ್ದಕ್ಕೆ ಬಾಲಿವುಡ್ ನಲ್ಲಿ ಇದೆಲ್ಲಾ ಕಾಮನ್ ಅಂತ ಹೇಳಿದ್ದರು. ಈ ಘಟನೆ ಬಳಿಕ ಮತ್ತೊಮ್ಮೆ ಸಲ್ಮಾನ್ ಮ್ಯಾನೇಜರ್ ಕರೆ ಮಾಡಿ ದುಬೈ ಕಾರ್ಯಕ್ರಮದ ಅವಕಾಶ ನೀಡಿದ್ದರು. ಆಗಸ್ಟ್ 30ರಂದು ಮತ್ತೊಂದು ಶೋಗಾಗಿ ನಮ್ಮ ಡ್ಯಾನ್ಸ್ ತಂಡವನ್ನು ಬಹರೈನ್ ಗೆ ಕಳುಹಿಸಲಾಯ್ತು.
Advertisement
ವಿಮಾನ ನಿಲ್ದಾಣದಲ್ಲಿ ಸಲ್ಮಾನ್ ತಮ್ಮ ಓರ್ವ ಸೋದರನನ್ನು ಪರಿಚಯಿಸಿದರು. ಪ್ರಯಾಣದ ವೇಳೆ ಸಲ್ಮಾನ್ ಸೋದರ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದರು. ಈ ಘಟನೆ ನಂತರ ಸಲ್ಮಾನ್ ನನಗೆ ಹಲವು ಬಾರಿ ಕಿರುಕುಳ ನೀಡಿದ್ದಾರೆ. ಒಂದು ವೇಳೆ ಈ ವಿಷಯವನ್ನು ಬಹಿರಂಗಗೊಳಿಸಿದ್ರೆ ಪರಿಣಾಮ ಸರಿಯಾಗಿರಲ್ಲ ಎಂದು ಬೆದರಿಕೆ ಹಾಕಿದ್ದರು ಎಂದು ಸಂತ್ರಸ್ತೆ ದೂರು ನೀಡಿದ್ದು ಎಫ್‍ಐಆರ್ ದಾಖಲಾಗಿದೆ.
Advertisement
ಖಾಸಗಿ ವಾಹಿನಿಯ ಡ್ಯಾನ್ಸ್ ರಿಯಾಲಿಟಿ ಶೋ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ ಸಲ್ಮಾನ್ ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಬಾಲಿವುಡ್‍ನಲ್ಲಿ ಕೆಲ ಚಿತ್ರಗಳಿಗೂ ನೃತ್ಯ ಸಂಯೋಜನೆ ಮಾಡಿದ್ದಾರೆ. ಕನ್ನಡದ ಖಾಸಗಿ ವಾಹಿನಿಯ ಡ್ಯಾನ್ಸ್ ರಿಯಾಲಿಟಿ ಶೋವೊಂದರ ತೀರ್ಪುಗಾರರಾಗಿ ಕೆಲಸ ಮಾಡಿದ್ದಾರೆ. ಮಹಿಳೆಯ ಆರೋಪಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv