ಹೈದರಾಬಾದ್: 19 ವರ್ಷದ ಯುವಕನ ದೇಹವನ್ನು ಪೀಸ್ ಪೀಸ್ ಮಾಡಿ ಕ್ರೂರವಾಗಿ ಕೊಲೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಪುತ್ತೂರು ಮಂಡಲ್ ನ ಡಿಜಿವಾಪುಡಿ ಗ್ರಾಮದಲ್ಲಿ ನಡೆದಿದೆ.
ವಂಶಿ (19) ಮೃತ ದುರ್ದೈವಿ. ಗೋವಿಂದರಾಜುಲು ಮತ್ತು ಮುನಿಚಂದ್ರಮ್ಮ ಅವರ ಎರಡನೇ ಮಗ ವಂಶಿ ಜೆಸಿಬಿಯಲ್ಲಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದನು. ಗುರುವಾರ ಬೆಳಗ್ಗೆ ವಂಶಿ ಮರಕ್ಕಾಗಿ ಅರಣ್ಯದೊಳಗೆ ಹೋಗಿದ್ದಾನೆ. ಆದರೆ ಸಂಜೆಯಾದರೂ ಮನಗೆ ಹಿಂದಿರುಗಲಿಲ್ಲ. ಬಳಿಕ ಕುಟುಂಬದವರು ಎಲ್ಲಕಡೆ ಹುಡುಕಾಡಿದ್ದಾರೆ. ಆದರೆ ಎಲ್ಲೂ ವಂಶಿ ಪತ್ತೆಯಾಗಿಲ್ಲ.
ಎರಡು ದಿನದ ನಂತರ ಕಾಡಿನಿಂದ ಕೆಟ್ಟವಾಸನೆ ಬಂದಿದೆ. ಹೀಗಾಗಿ ಸ್ಥಳೀಯರು ಪರಿಶೀಲನೆ ನಡೆಸಿದಾಗ ಕತ್ತರಿಸಿದ ಸ್ಥಿತಿಯಲ್ಲಿ ದೇಹದ ಭಾಗಗಳು ಕಂಡು ಬಂದಿದೆ. ಅಲ್ಲೇ ಪಕ್ಕದಲ್ಲಿ ಸೆಲ್ ಫೋನ್ ಮತ್ತು ಕೈಗೆ ಕಟ್ಟಿದ ದಾರದಿಂದ ಪೀಸ್ ಪೀಸ್ ದೇಹ ವಂಶಿಯದ್ದು ಎಂದು ಗುರುತಿಸಲಾಗಿದೆ. ತಕ್ಷಣ ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ಮಾಹಿತಿ ತಿಳಿದು ಪುತ್ತೂರು ಡಿಎಸ್‍ಪಿ ಸೌಮ್ಯಲತಾ, ಸಿಐ ದಾವಪ್ರಸಾದ್, ನಾರಾಯಣನಂ ಸಿಐ ದಸ್ತಿಗಿರಿ ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸರು ಮತ್ತು ಸ್ಥಳೀಯರು ಸತತ 5 ಗಂಟೆಯ ಕಾಲ ಶೋಧ ಕಾರ್ಯ ನಡೆಸಿದ ಬಳಿಕ ಸುಮಾರು 40 ಮೀಟರ್ ದೂರದಲ್ಲಿ ದೇಹದಿಂದ ಬೇರ್ಪಟ್ಟಿದ್ದ ತಲೆ ಕಂಡುಬಂದಿದೆ. ಎರಡು ದಿನಗಳ ಹಿಂದೆ ವಂಶಿಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ನಂತರ ಗ್ರಾಮಸ್ಥರ ಸಹಾಯದಿಂದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶ್ರೀಕಾಲಹಸ್ತಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಮೃತ ವಂಶಿ ತಾಯಿ ಸಲ್ಲಿಸಿದ ದೂರನ್ನು ಆಧರಿಸಿ ಈ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ವಂಶಿ ಅದೇ ಗ್ರಾಮದ ಮಹಿಳೆಯೊಬ್ಬಳ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು. ಈ ಕಾರಣದಿಂದಾಗಿ ಅವನನ್ನು ಕ್ರೂರವಾಗಿ ಕೊಲೆ ಮಾಡಲಾಗಿದೆ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಈ ಕುರಿತು ಎಲ್ಲಾ ಆಯಾಮಗಳಿಂದಲೂ ತನಿಖೆ ಮಾಡುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv