ಐಸ್ ಕ್ಯಾಂಡಿ ಇಡ್ಲಿ ಆಯ್ತು ಈಗ ಸ್ಟ್ರಾಬೆರಿ ಸಮೋಸ ವೀಡಿಯೋ ವೈರಲ್

Public TV
1 Min Read
samosa 3

ತ್ತೀಚೆಗಷ್ಟೇ ಐಸ್ ಕ್ಯಾಂಡಿ ಇಡ್ಲಿ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಕೈಗಾರಿಕೋದ್ಯಮಿ ಹರ್ಷ ಗೋಯೆಂಕಾ ಟ್ಟಿಟ್ಟರ್‌ನಲ್ಲಿ ಸ್ಟ್ರಾಬೆರಿ ಮತ್ತು ಚಾಕಲೇಟ್‍ನಿಂದ ತಯಾರಿಸಿದ ರುಚಿಕರವಾದ ಸಮೋಸ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

samosa

18 ಸೆಕೆಂಡ್ ಇರುವ ಈ ವೀಡಿಯೋದಲ್ಲಿ ವ್ಯಕ್ತಿಯೊಬ್ಬರು ವೆರೈಟಿ ಸಮೋಸವನ್ನು ತೋರಿಸುವುದನ್ನು ಕಾಣಬಹುದಾಗಿದೆ. ರಸ್ತೆ ಬದಿಯ ಅಂಗಡಿಯಲ್ಲಿ ವ್ಯಕ್ತಿ ಮೊದಲಿಗೆ ಚಾಕಲೇಟ್ ಸಮೋಸವನ್ನು ತೋರಿಸುತ್ತಾರೆ. ಇದನ್ನೂ ಓದಿ:  ಟ್ರೆಂಡಿಂಗ್ ಆಯ್ತು ಬೆಂಗಳೂರು ಹೋಟೆಲಿನ ಐಸ್ ಕ್ಯಾಂಡಿ ಇಡ್ಲಿ

samosa

ಬಳಿಕ ಸ್ಟ್ರಾಬೆರಿ ತುಂಬಿದ ಸಮೋಸವನ್ನು ಒಡೆದು ತೋರಿಸುತ್ತಾರೆ. ನಂತರ ತಂದೂರಿ ಪನ್ನೀರ್ ಸಮೋಸವನ್ನು ತೋರಿಸಿದ್ದಾರೆ. ಇದನ್ನೂ ಓದಿ: ಹೈ ಪ್ರೊಫೈಲ್ ಡ್ರಗ್ಸ್ ಕೇಸ್- ಶಾರುಖ್ ಖಾನ್ ಪುತ್ರನಿಗೆ ಬಂಧನ ಭೀತಿ

ಸದ್ಯ ವೈರಲ್ ಆಗುತ್ತಿರುವ ಈ ವೀಡಿಯೋವನ್ನು ಇಲ್ಲಿಯವರೆಗೂ 24 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಕಾಮೆಂಟ್‍ಗಳ ಸುರಿಮಳೆಯೇ ಹರಿದು ಬರುತ್ತಿದೆ. ಕೆಲವರು ಚಾಕಲೇಟ್ ಹಾಗೂ ಸ್ಟ್ರಾಬೆರಿಯಲ್ಲಿ ತಯಾರಿಸಿರುವ ಸಮೋಸ ಅಷ್ಟು ರುಚಿಕರವಾಗಿರುವುದಿಲ್ಲ ಎಂದು ಕಾಮೆಂಟ್ ಮಾಡುವ ಮೂಲಕ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಪಿತೃಪಕ್ಷ ಹಿನ್ನೆಲೆ ಗಗನಕ್ಕೇರಿದ ಹೂವಿನ ಬೆಲೆ – ಹೂ, ಹಣ್ಣು ಖರೀದಿಗೆ ಮುಗಿಬಿದ್ದ ಜನ

Share This Article
Leave a Comment

Leave a Reply

Your email address will not be published. Required fields are marked *