ಬೆಂಗಳೂರು: ಚಾಕ್ಲೇಟ್ ಅಂದ್ರೆ ಯಾರಿಗೆ ತಾನೇ ಇಷ್ಟ ಆಗಲ್ಲ. ಹಾಲು ಹಲ್ಲಿನ ಕಂದನಿಂದ ಹಿಡಿದು ಹಲ್ಲು ಬಿದ್ದ ಅಜ್ಜಿವರೆಗೂ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಹೀಗಾಗಿಯೇ ಕ್ರಿಸ್ ಮಸ್ ಹಾಗೂ ಹೊಸ ವರ್ಷಕ್ಕೆ ವೆರೈಟಿ ವೆರೈಟಿ ಚಾಕ್ಲೇಟ್ ಗಳು ಸಿಲಿಕಾನ್ ಸಿಟಿಗೆ ಲಗ್ಗೆಯಿಟ್ಟಿವೆ.
ಹೌದು. ಹಲಸೂರು ಹತ್ತಿರದ ಚಾಕಲೇಟ್ ಜಂಕ್ಷನ್‍ನಲ್ಲಿ ಪ್ಲೇನ್ ಚಾಕ್ಲೆಟ್, ಆರೆಂಜ್ ಫ್ಲೇವರ್, ನೆಟ್ಸ್, ಬಟರ್ ಸ್ಕಾಚ್, ಡಾರ್ಕ್, ಕಾಫಿ ಸೇರಿ 70 ಬಗೆಯ ಚಾಕ್ಲೇಟ್ಸ್ ಗಳನ್ನು ಕಾಣಬಹುದಾಗಿದೆ.
Advertisement
Advertisement
ಚಾಕ್ಲೇಟ್ ನಿಂದ ತಯಾರಾಗಿರೋ ಸಾಂತಾಕ್ಲಾಸ್ ಕಲರ್ ಪುಲ್ ಆಗಿ ಮಿಂಚುತ್ತಿದೆ. ತೊಟ್ಟಿಲ ಬುಟ್ಟಿಯಲ್ಲಿ ಅರಳಿನಿಂತ ಜೋಡಿಗಳು, ಅಲ್ಲಲ್ಲಿ ಕಂಡು ಬರೋ ಪುಟ್ ಪುಟಾಣಿ ಗೊಂಬೆಗಳು, ಕಣ್ ಮಿಟುಕಿಸುತ್ತಿರೋ ಪಪ್ಪಿಸ್. ಇವೆಲ್ಲವೂ ಒಂದಕ್ಕಿಂತ ಒಂದು ಡಿಫರೆಂಟ್ ಆಗಿದ್ದು ಟೇಸ್ಟೂ ಕೂಡ ಬೊಂಬಾಟ್ ಆಗಿದೆ.
Advertisement
ಕ್ರಿಸ್ ಮಸ್ ಹಬ್ಬ ಆರಂಭವಾಗುತ್ತಿದೆ. ಹೀಗಾಗಿ 100 ರೂ. ನಿಂದ 1,700 ರೂ. ವರೆಗಿನ ಎಲ್ಲಾ ವಿಧದ ಚಾಕ್ಲೇಟ್ ಗಳು ಲಭ್ಯವಿದೆ. ಕ್ರಿಸ್ ಕೇಕ್ ಕೂಡ ಮಾಡಿದ್ದೇವೆ ಅಂತ ಮಾಲೀಕರಾದ ಅನುಪಮಾ ಅಮರನಾಥ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.
Advertisement
ಈ ಬಾರಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸ್ಪೆಷಲ್ ಆಗಿ ಸಂತಾಕ್ಲಾಸ್, ಟೆಡ್ಡಿ ಬಿಯರ್, ಪಪ್ಪಿಸ್, ಜೀಸೆಸ್ ಚಾಕ್ಲೇಟ್ ತಯಾರಿಸಲಾಗಿದೆ. ಹಾಗೇ ಚಾಕ್ಲೇಟ್ ಫೋಟೋ ಪ್ರೇಮ್‍ಗಳು ಕಣ್ಣಿಗೆ ಮುದ ನೀಡ್ತಿವೆ. ಭರ್ಜರಿ ವ್ಯಾಪಾರ ನಡೆಯುತ್ತಿದೆ ಅಂತ ಗ್ರಾಹಕಿ ಪುಷ್ಪಾ ತಿಳಿಸಿದ್ದಾರೆ.
ಒಟ್ಟಿನಲ್ಲಿ ಚಾಕ್ಲೇಟ್ ಕರಾಮತ್ತೆ ಹಾಗೆ. ಡಿಸೈನೂ ಡಿಫೆರೆಂಟ್, ಟೆಸ್ಟೂ ಬೊಂಬಾಟ್ ಆಗಿರುತ್ತದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv