ಬೆಂಗಳೂರು: ಬೆಳಕಿನ ಹಬ್ಬ ಬಂತೆಂದರೆ ಎಲ್ಲೆಲ್ಲೂ ಪಟಾಕಿಗಳ ಸದ್ದು ಜೋರಾಗಿ ಇರುತ್ತೆ. ಆದರೆ ಈ ಬಾರಿ ದೀಪಾವಳಿಗೆ ಚಾಕಲೇಟ್ ಪಟಾಕಿಗಳನ್ನು ತಯಾರಿಸಲಾಗಿದೆ.
ದೀಪಾವಳಿ ಎಂದು ಹೇಳಿದ ತಕ್ಷಣ ಎಲ್ಲರ ಕಣ್ಮುಂದೆ ಬರುವುದು ಪಟಾಕಿಗಳು. ಅದರಲ್ಲೂ ಮಕ್ಕಳು ಪಟಾಕಿ ಹೊಡೆದು ಸಂಭ್ರಮಿಸುವ ಪರಿಯೇ ಬೇರೆ. ಆದರೆ ಸುಪ್ರೀಂ ಕೋರ್ಟ್ ಪರಿಸರಕ್ಕೆ ಹಾನಿಕಾರಕವಾದ ಪಟಾಕಿಗಳನ್ನು ಬಳಸಬಾರದು ಎಂದು ಆದೇಶ ನೀಡಿದೆ. ಇದನ್ನೂ ಓದಿ: ದೀಪಾವಳಿಗೆ ಸ್ವೀಟ್ ಪಟಾಕಿ ತಯಾರಿಸಿದ ವ್ಯಾಪಾರಿಗಳು
Advertisement
Advertisement
ಇದೇ ಮೊದಲ ಬಾರಿಗೆ ಬೆಂಗಳೂರಿನ ಆಬ್ರಿ ಸಂಸ್ಥೆಯೊಂದು ಚಾಕಲೇಟ್ ಪಟಾಕಿಗಳನ್ನು ತಯಾರು ಮಾಡಿದೆ. ಪಟಾಕಿ ಹೊಡೆದು ಪರಿಸರಕ್ಕೆ ಹಾನಿ ಮಾಡುವ ಬದಲು ಚಾಕಲೇಟ್ ಮಾದರಿಯ ಪಟಾಕಿಯಿಂದ ಹಬ್ಬ ಮಾಡಿ ಎಂದು ಹೇಳಿದೆ. ಚಾಕಲೇಟ್ ಎಂದರೆ ಎಲ್ಲರಿಗೂ ಇಷ್ಟವಾಗುತ್ತೆ.
Advertisement
Advertisement
ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಇಷ್ಟಪಡುವ ಚಾಕಲೇಟ್ ಈಗ ಪಟಾಕಿ ಮಾದರಿಯಲ್ಲಿ ಲಗ್ಗೆ ಇಟ್ಟಿದ್ದು, ಎಲ್ಲರೂ ಫಿದಾ ಆಗಿದ್ದಾರೆ. ಗ್ರಾಹಕರು ಕೂಡ ಹಬ್ಬಕ್ಕೆ ತಮ್ಮ ಪ್ರೀತಿ ಪಾತ್ರರಿಗೆ ಈ ಚಾಕಲೇಟ್ ಅನ್ನು ಉಡುಗೊರೆಯಾಗಿ ಕೊಟ್ಟು ಪರಿಸರ ಸ್ನೇಹಿ ಹಬ್ಬ ಆಚರಿಸಿ ಎಂದು ಸಂದೇಶ ನೀಡುತ್ತಿದ್ದಾರೆ.
ಪರಿಸರ ಸ್ನೇಹಿ ಚಾಕಲೇಟ್ ಪಟಾಕಿಯಿಂದ ವಾಯು ಮಾಲಿನ್ಯವಾಗಲಿ, ಶಬ್ದ ಮಾಲಿನ್ಯವಾಗಲಿ ಆಗುವುದಿಲ್ಲ.