‘ಪೊನ್ನಿಯನ್ ಸೆಲ್ವನ್ 2′ (Ponniyin Selvan 2) ಸಿನಿಮಾ ಸಕ್ಸಸ್ ನಂತರ ಚಿಯಾನ್ ವಿಕ್ರಮ್‌ಗೆ (Chiyan Vikram) ಬೇಡಿಕೆ ಹೆಚ್ಚಾಗಿದೆ. ಇದೀಗ ವಿಕ್ರಮ್‌ಗೆ ಮತ್ತೊಂದು ಬಂಪರ್ ಅವಕಾಶವೊಂದು ಸಿಕ್ಕಿದೆ. ರಜನಿಕಾಂತ್‌ಗೆ (Rajanikanth) ಮುಂದೆ ಚಿಯಾನ್ ವಿಕ್ರಮ್ ನಟಿಸುವ ಅವಕಾಶ ಬಾಚಿಕೊಂಡಿದ್ದಾರೆ. ಅದಕ್ಕಾಗಿ ಭರ್ಜರಿ ಸಂಭಾವನೆ ಕೂಡ ಪಡೆದುಕೊಂಡಿದ್ದಾರೆ.
ಎಂತಹ ಸೂಪರ್ ಸ್ಟಾರ್ ಆಗಿದ್ರೂ ವಿಲನ್ ಖಡಕ್ ಆಗಿದ್ರೇನೇ ಹೀರೋಗೂ ಒಂದು ತೂಕ. ಕಾಲಿವುಡ್ ಸೂಪರ್ ಸ್ಟಾರ್ ತಲೈವಾ ಮುಂದೆ ಅಬ್ಬರಿಸಲು ಸ್ಟಾರ್ ನಟನಿಗೆ ಮಣೆ ಹಾಕಿದ್ದಾರೆ. ರಜನಿ 170ನೇ ಚಿತ್ರಕ್ಕೆ ಚಿಯಾನ್ ವಿಕ್ರಮ್ ಎಂಟ್ರಿ ಕೊಡುತ್ತಿದ್ದಾರೆ. ತಲೈವಾಗೆ ವಿಲನ್ ಆಗಿ ಖಡಕ್ ಆಗಿ ನಟಿಸಲಿದ್ದಾರೆ.
ವಿಕ್ರಮ್ ಅವರು ಕಾಲಿವುಡ್‌ನ ಬೇಡಿಕೆಯ ಹೀರೋ. ವೃತ್ತಿ ಜೀವನದಲ್ಲಿ ಅವರು ಹಲವು ಡಿಫರೆಂಟ್ ರೋಲ್‌ಗಳನ್ನು ಮಾಡಿ ಭೇಷ್ ಎನಿಸಿಕೊಂಡಿದ್ದಾರೆ. ಹಾಗಾಗಿ ವಿಲನ್ (Villain) ಪಾತ್ರ ಮಾಡಲು ತಲೈವಾ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದಕ್ಕಾಗಿ 50 ಕೋಟಿ ರೂಪಾಯಿ ಪೇಮೆಂಟ್ ಪಡೆದಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಆರ್‌ಸಿಬಿ ಗೆಲುವಿಗೆ ಸಂಭ್ರಮಿಸಿದ ರಿಷಬ್ ಶೆಟ್ಟಿ ಪುತ್ರಿ
‘ತಲೈವರ್ 170’ನೇ ಚಿತ್ರಕ್ಕೆ ಟಿಜಿ ಜ್ಞಾನವೇಲ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಲೈಕಾ ಪ್ರೊಡಕ್ಷನ್ (Lyca Productions) ಬಂಡವಾಳ ಹೂಡುತ್ತಿದೆ. ತಮಿಳುನಾಡಿನಲ್ಲಿ ಹಲವು ಬಿಗ್ ಬಜೆಟ್ ಚಿತ್ರಗಳನ್ನು ನಿರ್ಮಿಸಿದ ಖ್ಯಾತಿ ಲೈಕಾ ಈಗ ರಜನಿಕಾಂತ್ 170ನೇ ಚಿತ್ರ ನಿರ್ಮಾಣ¨ ಮಾಡ್ತಿದ್ದಾರೆ.