– ಎಜಿ ಶಶಿಕಿರಣ ಶೆಟ್ಟಿ ನೇತೃತ್ವದಲ್ಲಿ ಸಭೆ
ಕಲಬುರಗಿ: ಚಿತ್ತಾಪುರದಲ್ಲಿ ಇತ್ತೀಚೆಗೆ ನಡೆದ ಆರ್‌ಎಸ್‌ಎಸ್‌ನ ಪಥಸಂಚಲನ (Chittapur RSS Route March) ಮತ್ತು ಭೀಮ್ ಆರ್ಮಿ ನಡುವಿನ ಜಟಾಪಟಿ ವಿಚಾರಕ್ಕೆ ಸಂಬಂಧಿಸಿದಂತೆ, ರಾಜ್ಯ ಹೈಕೋರ್ಟ್ ಸೂಚನೆಯಂತೆ ನವೆಂಬರ್ 5 ರಂದು (ಇಂದು) ಬೆಂಗಳೂರಿನಲ್ಲಿ (Bengaluru) 2ನೇ ಹಂತದ ಶಾಂತಿ ಸಭೆ ನಡೆಯಲಿದೆ.

ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಅನುಮತಿ ನೀಡುವ ಕುರಿತು ನಿರ್ಧಾರ ತೆಗೆದುಕೊಳ್ಳುವ ನಿಟ್ಟಿನಲ್ಲಿ ಈ ಸಭೆ ಅತ್ಯಂತ ಮಹತ್ವ ಪಡೆದಿದೆ. ಹೈಕೋರ್ಟ್ ಆದೇಶದಂತೆ, ರಾಜ್ಯದ ಅಡ್ವೋಕೇಟ್ ಜನರಲ್ (AG) ಶಶಿಕಿರಣ ಶೆಟ್ಟಿ ಅವರ ನೇತೃತ್ವದಲ್ಲಿ ಈ ಶಾಂತಿ ಸಭೆ ನಡೆಯಲಿದೆ. ಆರ್‌ಎಸ್‌ಎಸ್ ಪರವಾಗಿ ಅರ್ಜಿದಾರರಾದ ಅಶೋಕ ಪಾಟೀಲ್ ಸೇರಿ ಐದು ಜನರಿಗೆ ಮಾತ್ರ ಸಭೆಯಲ್ಲಿ ಭಾಗವಹಿಸಲು ಜಿಲ್ಲಾಡಳಿತದಿಂದ ಆಹ್ವಾನ ನೀಡಲಾಗಿದೆ. ಇದನ್ನೂ ಓದಿ: ಇ-ಸ್ವತ್ತು ಸಮರ್ಪಕ ಅನುಷ್ಠಾನಕ್ಕಾಗಿ ಗ್ರಾ.ಪಂ ಮಟ್ಟದಲ್ಲಿ ಅಧಿಕಾರಿಗಳನ್ನು ಸಜ್ಜುಗೊಳಿಸಿ: ಪ್ರಿಯಾಂಕ್ ಖರ್ಗೆ
ಅರ್ಜಿದಾರ ಅಶೋಕ ಪಾಟೀಲ್, ಕೃಷ್ಣಾ ಜೋಶಿ, ಪ್ರಹ್ಲಾದ್ ವಿಶ್ವಕರ್ಮ ಹಾಗೂ ಆರ್‌ಎಸ್‌ಎಸ್ ಪರ ವಕೀಲ ಅರುಣ್ ಶ್ಯಾಮ್ ಮತ್ತು ವಾದಿರಾಜ್ ಕಾಡ್ಲೂರು ಅವರು ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿವೆ.
ಇತರ ಸಂಘಟನೆಗಳಿಗಿಲ್ಲ ಬುಲಾವ್:
ಸಭೆಯಲ್ಲಿ ಶಾಂತಿ ಭಂಗ ಉಂಟಾಗಬಹುದು ಎಂಬ ಕಾರಣದಿಂದ ಹಾಗೂ ಉಳಿದ ಸಂಘಟನೆಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸದ ಹಿನ್ನೆಲೆಯಲ್ಲಿ, ಭೀಮ್ ಆರ್ಮಿ ಸೇರಿದಂತೆ ಇತರ 9 ಸಂಘಟನೆಗಳಿಗೂ ಆಹ್ವಾನ ನೀಡಲಾಗಿಲ್ಲ. ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಆರ್‌ಎಸ್‌ಎಸ್ ಮುಖಂಡರಿಗೆ ಮಾತ್ರ ಹಾಜರಾಗುವಂತೆ ತಿಳಿಸಲಾಗಿದೆ. ಸಭೆಯಲ್ಲಿ ಆರ್‌ಎಸ್‌ಎಸ್ ಮುಖಂಡರ ಮತ್ತು ವಕೀಲರ ಲಿಖಿತ ಹೇಳಿಕೆಗಳನ್ನ ಎಜಿ ಮತ್ತು ಜಿಲ್ಲಾಡಳಿತ ಪಡೆದುಕೊಳ್ಳಲಿದೆ. ಇದನ್ನೂ ಓದಿ: ಅಕ್ಕ ಪಡೆ ರಚನೆ: NCC ‘C’ ಪ್ರಮಾಣ ಪತ್ರ ಹೊಂದಿರುವ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ನವಂಬರ್ 7ಕ್ಕೆ ಮುಂದಿನ ವಿಚಾರಣೆ
ಶಾಂತಿ ಸಭೆಯ ನಂತರ, ನವೆಂಬರ್ 7 ರಂದು ಕಲಬುರಗಿ ಹೈಕೋರ್ಟ್ ಪೀಠದಲ್ಲಿ ಪಥಸಂಚಲನಕ್ಕೆ ಅನುಮತಿ ನೀಡುವ ಕುರಿತು ಅರ್ಜಿಯ ಅಂತಿಮ ವಿಚಾರಣೆ ನಡೆಯಲಿದೆ. ಈ ಸಭೆಯ ವರದಿಯನ್ನ ಕೋರ್ಟ್‌ಗೆ ಸಲ್ಲಿಸಿದ ನಂತರ ಅನುಮತಿ ಸಿಗುತ್ತದೆಯೇ ಎಂಬುದು ಈಗ ರಾಜ್ಯದಲ್ಲಿ ಕುತೂಹಲ ಕೆರಳಿಸಿದೆ. ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ | ಬೆಂಗಳೂರು ಶಿಕ್ಷಕರ ಕ್ಷೇತ್ರದ ಬಗ್ಗೆ ಜೆಡಿಎಸ್ ಸಭೆ- ಹೆಚ್ಚು ಶಿಕ್ಷಕರ ನೋಂದಣಿಗೆ ನಿರ್ಧಾರ

