ಚಿತ್ರದುರ್ಗ: ಪ್ರೀತಿಗಾಗಿ ಜೀವಬಿಟ್ಟ ಅಮರ ಪ್ರೇಮಿಗಳನ್ನು ನೋಡಿದ್ದೇವೆ. ಆದ್ರೆ, ಚಿತ್ರದುರ್ಗದ ವಿದ್ಯಾರ್ಥಿನಿ (Chitradurga Stundet) ವರ್ಷಿತಾ ಕೊಲೆಕೇಸಲ್ಲಿ ಪ್ರಿಯತಮನೇ ವಿಲನ್ ಆಗಿದ್ದು, ಕಿರಾತಕ ಚೇತನ್ ಪ್ರೀ ಪ್ಲ್ಯಾನ್ ಮರ್ಡರ್ ರಹಸ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆಗಸ್ಟ್ 14 ರಂದು ಪ್ರಕರಣನಡೆದಿದ್ದು, ಆಗಸ್ಟ್ 19 ರಂದು ಅರೆಬರೆ ಸುಟ್ಟ ಸ್ಥಿತಿಯಲ್ಲಿ ವರ್ಷಿತಾ (19)ಳ ಮೃತದೇಹ ಚಿತ್ರದುರ್ಗ ತಾಲ್ಲೂಕಿನ ಗೋನೂರುಬಳಿ ಪತ್ತೆಯಾಗಿತ್ತು. ಇದಕ್ಕೂ ಮುನ್ನ ರಸ್ತೆ ಬದಿಯ ಖಾಸಗಿ ಹೋಟೆಲ್‌ಗೆ (Private Hotel) ಆಗಮಿಸಿದ್ದ ಪ್ರಯಾಣಿಕರು, ಮೂತ್ರವಿಸರ್ಜನೆಗೆ ರಸ್ತೆಬದಿಗೆ ಬಂದಿದ್ದರು. ಈ ವೇಳೆ ಮೃತದೇಹ ಕಂಡು ಹೋಟೆಲ್ ವ್ಯವಸ್ಥಾಪಕರಿಗೆ ತಿಳಿಸಿದ್ದರು. ಇದನ್ನೂ ಓದಿ: ಚಿತ್ರದುರ್ಗ | ಅಪರಿಚಿತ ಶವ ಪತ್ತೆ ಕೇಸ್ – ಯುವತಿಯ ಗುರುತು ಪತ್ತೆ, ಅತ್ಯಾಚಾರ ಎಸಗಿ ಕೊಲೆ ಶಂಕೆ
ಆಗ ಎಚ್ಚೆತ್ತ ಹೋಟೆಲ್ ವ್ಯವಸ್ಥಾಪಕರು, ಚಿತ್ರದುರ್ಗ ಗ್ರಾಮಾಂತರ ಠಾಣೆಗೆ (Chitradurga Rural Police) ದೂರು ನೀಡಿದ್ದು, ಈ ಪ್ರಕರಣದ ಬೆನ್ನತ್ತಿದ ಪೊಲೀಸರು ಪ್ರಿಯತಮ ಚೇತನ್ ಅನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ನಿನ್ನೆಯೇ ಚೇತನ್ ತನ್ನ ತಪ್ಪನ್ನು ಪೊಲೀಸರ ಬಳಿ ಒಪ್ಪಿಕೊಂಡಿದ್ದನು. ಈ ಬಗ್ಗೆ ʻಪಬ್ಲಿಕ್ ಟಿವಿʼ ಮೊದಲು ವರದಿ ಬಿತ್ತರಗೊಳಿಸಿತ್ತು. ಇದನ್ನೂ ಓದಿ: ದರ್ಶನ್ ಜಾಮೀನು ರದ್ದು; ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ: ರೇಣುಕಾಸ್ವಾಮಿ ಪತ್ನಿ
ಈಗ ಕೊಲೆಯಾಗಿರೊ ವಿದ್ಯಾರ್ಥಿನಿ ವರ್ಷಿತಾ ಜೊತೆ ಚೇತನ್ ಇದ್ದಂತಹ ಕೊನೇ ಕ್ಷಣದ ಸಿಸಿಟಿವಿ ದೃಶ್ಯ ಕೂಡ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ವರ್ಷಿತಾಳನ್ನ ಕೊಲ್ಲಲು ಸ್ಕೆಚ್ ಹಾಕಿದ್ದ ಚೇತನ್ ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿನ ಖಾಸಗಿ ಪೆಟ್ರೋಲ್ ಬಂಕ್‌ನಲ್ಲಿ 2 ಬಾರಿ ಪೆಟ್ರೋಲ್ ಖರೀದಿಸಿದ್ದು, ಬಳಿಕ ವರ್ಷಿತಾಳನ್ನ ಕರೆದೊಯ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ನ್ಯಾಯಾಂಗ, ಸರ್ಕಾರದ ಬಗ್ಗೆ ವಿಶ್ವಾಸ ಮೂಡಿದೆ: ಸುಪ್ರೀಂ ತೀರ್ಪಿಗೆ ರೇಣುಕಾಸ್ವಾಮಿ ತಂದೆ ಸಂತಸ
ಇನ್ನೂ ಪ್ರಿಯಕರ ಪೆಟ್ರೋಲ್ ಬಾಟಲಿಯನ್ನ ತನ್ನ ಪ್ಯಾಂಟ್ ಜೇಬಿನಲ್ಲೇ ಇರಿಸಿಕೊಂಡಿದ್ದ, ಇದರ ಮರ್ಮ ಅರಿಯದ ಮುಗ್ಧೆ ವರ್ಷಿತಾ, ಅವನ ಬಣ್ಣದ ಮಾತಿಗೆ ಮರಳಾಗಿ, ಹಿಂಬಾಲಿಸುತ್ತಾ ನಡೆದುಕೊಂಡೇ ಹೋಗಿದ್ದಾಳೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದಾದ ಬಳಿಕ ಆಗಸ್ಟ್ 18ರಂದು ಸಂಜೆ 4 ಗಂಟೆ ಸುಮಾರಿಗೆ ಆಕೆಯನ್ನ ಚಿತ್ರದುರ್ಗ ತಾಲ್ಲೂಕಿನ ಗೋನೂರು ಬಳಿಯ ನಿರ್ಜನ ಪ್ರದೇಶಕ್ಕೆ ಕಿರಾತಕ ಚೇತನ್ ಕರೆದೊಯ್ದಿದ್ದಾನೆ. ಆಕೆಯನ್ನ ಮನಬಂದಂತೆ ಥಳಿಸಿದ್ದಾನೆ. ಉಸಿರುಗಟ್ಟಿಸಿ ವರ್ಷಿತಾಳನ್ನ ಹತ್ಯೆಗೈದು, ಪೆಟ್ರೋಲ್ ಸುರಿದು ಸುಟ್ಟಿದ್ದಾನೆ ಎಂದು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
ಹೀಗಾಗಿ ಆರೋಪಿ ಚೇತನ್‌ನ ಜಾಡು ಹಿಡಿದು ಖಾಕಿಯಿಂದ ತನಿಖೆ ಮುಂದುವರೆದಿದೆ. ಚಿತ್ರದುರ್ಗ ಡಿವೈಎಸ್ಪಿ ಪಿ.ದಿನಕರ್, ಗ್ರಾಮಾಂತರ ಠಾಣೆ ಸಿಪಿಐ ಮುದ್ದುರಾಜ್, ಪಿಎಸ್ ಐ ಸುರೇಶ್ ನೇತೃತ್ವದಲ್ಲಿ ತನಿಖೆ ಚುರುಕುಗೊಂಡಿದೆ. ಇದನ್ನೂ ಓದಿ: Chitradurga | ಕೆಆರ್ ಹಳ್ಳಿ ಗೇಟ್ ಬಳಿ ಟ್ರಾಫಿಕ್ ಜಾಮ್ – 5 ಕಿ.ಮೀ ದೂರದವರೆಗೂ ನಿಂತ ವಾಹನಗಳು