ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder case) ಬೇಲ್ ಕೋರಿ ಹೈಕೋರ್ಟ್‌ಗೆ ದರ್ಶನ್ (Darshan) ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ಮಂಗಳವಾರಕ್ಕೆ (ಅ.29) ಮುಂದೂಡಿಕೆಯಾಗಿದೆ.
ದರ್ಶನ್ ಬೆನ್ನು ನೋವಿನ ವೈದ್ಯಕೀಯ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಬಳ್ಳಾರಿ ಜೈಲಾಧಿಕಾರಿಗಳು ಸಲ್ಲಿಸಿದರು. ಆರೋಗ್ಯ ಕಾರಣವೊಡ್ಡಿ ದರ್ಶನ್ ಪರ ವಕೀಲರಾದ ಸಿವಿ ನಾಗೇಶ್ (CV Nagesh) ವಾದ ಮಂಡಿಸಿದರು. ಸಿಟಿ ಸ್ಕ್ಯಾನ್, ಎಂಆರ್‌ಐ ರಿಪೋರ್ಟ್‌ಗಳನ್ನು ಮಾಡಿಸಲಾಗಿದೆ. ವರದಿಯಲ್ಲಿ ದರ್ಶನ್‌ಗೆ ಈ ಕೂಡಲೇ ಸರ್ಜರಿ ಮಾಡಬೇಕು ಅಂತಿದೆ. ಹಾಗಾಗಿ ಮಧ್ಯಂತರ ಜಾಮೀನು ನೀಡಬೇಕು ಅಂತ ನಾಗೇಶ್ ವಾದ ಮಂಡಿಸಿದರು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಬಿಜೆಪಿಗೆ 160-170 ಸೀಟ್ ಖಚಿತ, ಬಹುಮತ ನಿಶ್ಚಿತ – ರಮೇಶ್ ಜಾರಕಿಹೊಳಿ
ಇದಕ್ಕೆ ಜಡ್ಜ್ ಪ್ರತಿಕ್ರಿಯಿಸಿ, ಈಗಷ್ಟೇ ಮೆಡಿಕಲ್ ರಿಪೋರ್ಟ್ (Medical Report) ಸಿಕ್ಕಿದೆ. ಹಾಗಾಗಿ 2 ಕಡೆ ವಾದಕ್ಕೆ ಅವಕಾಶ ನೀಡಬೇಕಿದೆ. ಆದರೆ, ಬಳ್ಳಾರಿಯಲ್ಲಿ ಅಪರೇಷನ್ ಮಾಡಿಸಬೇಕಾ? ಬೆಂಗಳೂರಿನಲ್ಲಿ ಮಾಡಿಸಬೇಕಾ? ಅಂತ ಜಡ್ಜ್ ವಿಶ್ವಜೀತ್ ಶೆಟ್ಟಿ ಪ್ರಶ್ನಿಸಿದ್ರು. ವೈದ್ಯಕೀಯ ವರದಿ ಓದಿ.. ಬಳ್ಳಾರಿ ಮತ್ತು ಬೆಂಗಳೂರು ಎರಡು ಕಡೆಗಳಲ್ಲೂ ಚಿಕಿತ್ಸೆ ಕೊಡಿಸಬಹುದು ಅಂತಿದೆ ಅಂದ್ರು. ಆದರೆ, ಬಳ್ಳಾರಿ ಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲ. ಹಾಗಾಗಿ ಬೆಂಗಳೂರಿನ ಖಾಸಗಿ ಚಿಕಿತ್ಸೆಗೆ ಅವಕಾಶ ಕೊಡಿ ಅಂತ ಸಿ.ವಿ ನಾಗೇಶ್ ಮನವಿ ಮಾಡಿದ್ರು. ಈ ವೇಳೆ ವಾದ-ಪ್ರತಿವಾದಕ್ಕೆ ಅವಕಾಶ ಕೊಡೋಣ ಅಂದ ಜಡ್ಜ್ ಮಂಗಳವಾರ ಬೆಳಗ್ಗೆಗೆ ವಿಚಾರಣೆ ಮುಂದೂಡಿದರು.
ಈ ಮಧ್ಯೆ, ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ಪ್ರಕರಣದಲ್ಲಿ ಪ್ರಕರಣದ ತನಿಖಾಧಿಕಾ, ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಚಂದ್ರಗುಪ್ತ ಬಳ್ಳಾರಿ ಜೈಲಿನಲ್ಲಿ ದರ್ಶನ್ ವಿಚಾರಣೆ ನಡೆಸಿದ್ರು. ಸಿಗರೇಟ್, ಕಾಫಿ ಕೊಟ್ಟಿದ್ಯಾರು..? ಮೊಬೈಲ್ ಯಾರದ್ದು..? ಫೋಟೋ ಯಾರು ತೆಗೆದ್ರು..? ಅನ್ನೋ ಪ್ರಶ್ನೆಗೆ ನನಗೆ ಯಾವುದೂ ಗೊತ್ತಿಲ್ಲ ಅಂತ ದರ್ಶನ್ ಉತ್ತರ ಕೊಟ್ಟಿದ್ದಾರೆ ಅಂತ ತಿಳಿದು ಬಂದಿದೆ. ಇದನ್ನೂ ಓದಿ: `ಕರಿಮಣಿ ಮಾಲೀಕ ನೀನಲ್ಲ’ ಅಂತ ಆಸ್ತಿಗಾಗಿ ಗಂಡನ ಕೊಲೆ – ಇಬ್ಬರು ಪ್ರಿಯಕರರು ಸೇರಿ ಪತ್ನಿಯೂ ಅಂದರ್