ಚಿತ್ರದುರ್ಗ: ಮಹಿಳೆಯರು ಅಂದ್ರೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ಕುಟುಂಬ ನಿರ್ವಹಣೆ ಮಾಡುತ್ತಾ, ಅಡುಗೆ ಮನೆಗಷ್ಟೇ ಸೀಮಿತ ಎಂಬ ಕಾಲವೊಂದಿತ್ತು. ಆದರೆ ಈಗ ಒನಕೆ ಓಬವ್ವನ ನಾಡು ಚಿತ್ರದುರ್ಗದಲ್ಲಿ ಮಹಿಳೆಯರ ಕೈಯಲ್ಲೇ ಆಡಳಿತದ ಚುಕ್ಕಾಣಿ ಇದೆ.
ಹೌದು. ಚಿತ್ರದುರ್ಗದ ನೂತನ ಎಸ್‍ಪಿಯಾಗಿ ರಾಧಿಕಾ ವರ್ಗಾವಣೆಯಾದ ಬೆನ್ನಲ್ಲೇ ಸಾಮಾಜಿಕ ಜಾಲಾತಾಣಗಳಲ್ಲಿ ಮಹಿಳೆಯರ ದರ್ಬಾರ್ ಎಂಬ ಮಾತುಗಳು ಹರಿದಾಡುತ್ತಿದ್ದು ಭಾರೀ ಚರ್ಚೆ ಶುರುವಾಗಿದೆ.
Advertisement
Advertisement
ಕಳೆದ ಎರಡು ವರ್ಷಗಳಿಂದ ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿ ವಿನೋತ್ ಪ್ರಿಯಾ, ಜಿ.ಪಂ ಸಿಇಓ ಸತ್ಯಭಾಮಾ ಹಾಗೂ ಜಿ.ಪಂ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್ ಮಾತ್ರ ಪ್ರಮುಖ ಹುದ್ದೆಗಳಲ್ಲಿ ಆಡಳಿತ ನಡೆಸುತ್ತಿದ್ದರು. ಆದರೆ ಎಸ್‍ಪಿಯಾಗಿ ರಾಧಿಕಾ ಕೂಡ ವರ್ಗಾವಣೆಯಾಗಿ ಚಿತ್ರದುರ್ಗಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಪ್ರಮುಖ ಆಡಳಿತಾತ್ಮಕ ಹುದ್ದೆಗಳಲ್ಲಿ ಮಹಿಳೆಯರೇ ಚುಕ್ಕಾಣಿ ಹಿಡಿದಿರೋದು ಒನಕೆ ಓಬವ್ಬನ ಕೋಟೆನಾಡಲ್ಲಿ ವಿಶೇಷ ಅನ್ನಿಸಿದೆ.
Advertisement
Advertisement
ಜಿಲ್ಲೆಯ ಅಭಿವೃದ್ಧಿ ಹಾಗೂ ಪ್ರಮುಖ ನಿರ್ಧಾರ ಕೈಗೊಳ್ಳುವ ನಿರ್ಣಾಯಕ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಿಸಿ ವಿನೋತ್ ಪ್ರಿಯ, ಜಿಲ್ಲಾಪಂಚಾಯ್ತಿ ಸಿಇಓ ಸತ್ಯಭಾಮ ಸಹ ಪುರುಷ ಅಧಿಕಾರಿಗಳಿಗಿಂತ ನಾವೇನೂ ಕಡಿಮೆ ಇಲ್ಲವೆಂಬಂತೆ ಕಾರ್ಯ ನಿರ್ವಹಿಸುತ್ತಾ, ಖಡಕ್ ಆಫೀಸರ್ಸ್ ಎನಿಸಿದ್ದಾರೆ. ಇದೀಗ ಅವರೊಂದಿಗೆ ಜಿಲ್ಲೆಯ ಲಾ ಅಂಡ್ ಆರ್ಡರ್ ನಲ್ಲೂ ಭಾರೀ ಬದಲಾವಣೆ ತರಬೇಕೆಂಬ ನಿಟ್ಟಿನಲ್ಲಿ ಚಿತ್ರದುರ್ಗ ಜಿಲ್ಲೆಗೆ ವರ್ಗಾವಣೆ ಆಗಿ ಬಂದಿರುವ ನೂತನ ಮಹಿಳಾ ಎಸ್‍ಪಿ ರಾಧಿಕಾ ಅವರ ಮೇಲೆಯೂ ಜಿಲ್ಲೆಯ ಜನರು ಭಾರೀ ನಿರೀಕ್ಷೆ ಹೊಂದಿದ್ದಾರೆ.
ಹೀಗಾಗಿ ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಯಾರೊಂದಿಗೂ ರಾಜಿಯಾಗದೇ ಈವರೆಗೆ ಹಲವು ಬದಲಾವಣೆಗಳನ್ನು ತಂದು ಸ್ಟ್ರಿಕ್ಟ್ ಆಫೀಸರ್ ಎನಿಸಿದ್ದ ಡಾ. ಅರುಣ್ ಅವರ ಸ್ಥಾನಕ್ಕೆ ಬಂದಿರುವ ರಾಧಿಕಾ ಅವರ ಮೇಲೆ ಭಾರೀ ಜವಾಬ್ದಾರಿ ಸಹ ಇದೆ. ಆದರೆ ಕಾಂಗ್ರೆಸ್ ನಾಯಕರೊಬ್ಬರ ಸಂಬಂಧಿ ಎಂದು ಜಿಲ್ಲೆಗೆ ಬಂದಿರುವ ಎಸ್.ಪಿ ರಾಧಿಕಾ ಅವರು ಹೇಗೆ ಎಲ್ಲಾ ಮ್ಯಾನೇಜ್ ಮಾಡ್ತಾರೆಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.