ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಚಿತ್ರದುರ್ಗಕ್ಕೆ ಬಂದಿದ್ದ ಹೆಲಿಕಾಪ್ಟರ್ ನಿಂದ ಟ್ರಂಕ್ ಒಂದನ್ನು ಕಾರಿನಲ್ಲಿ ಸಾಗಿಸಿದ್ದು ಈಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಯಾವುದೇ ಭದ್ರತೆಯನ್ನು ಪರಿಶೀಲನೆ ನಡೆಸದೇ ಟ್ರಂಕನ್ನು ಮೋದಿ ಹೆಲಿಕಾಪ್ಟರ್ ನಿಂದ ಕಾರಿನಲ್ಲಿ ಇರಿಸುತ್ತಿರುವ ವಿಡಿಯೋವನ್ನು ಕಾಂಗ್ರೆಸ್ ಬಿಡುಗಡೆ ಮಾಡಿ ಪ್ರಶ್ನೆ ಮಾಡಿದೆ.
Advertisement
Advertisement
ಪ್ರಧಾನಿ ನರೇಂದ್ರ ಮೋದಿ ಅವರ ರಕ್ಷಣೆಗೆ ಬೆಂಗಾವಲಾಗಿ ನಿಂತಿದ್ದ ಕಾರುಗಳ ಸಾಲಿನಲ್ಲಿ ಇಲ್ಲದ ಕಾರಿಗೆ ಈ ದೊಡ್ಡ ಬಾಕ್ಸ್ ಶಿಫ್ಟ್ ಆಗಿದ್ದು ಏಕೆ? ಬಾಕ್ಸನ್ನು ತೆಗೆದುಕೊಂಡು ಹೋಗಿದ್ದು ಯಾರು? ಆ ಕಾರು ಯಾರಿಗೆ ಸೇರಿದ್ದು? ಪರಿಶೀಲನೆ ನಡೆಸದೆ ಏನನ್ನು ತೆಗೆದುಕೊಂಡು ಹೋಗಲಾಗಿದೆ ಎಂಬ ಪ್ರಶ್ನೆಗಳನ್ನು ಕಾಂಗ್ರೆಸ್ ಮುಂದಿಟ್ಟಿದೆ.
Advertisement
ವಿಡಿಯೋದಲ್ಲಿ ಏನಿದೆ?
ಚಿತ್ರದುರ್ಗಕ್ಕೆ ಆಗಮಿಸಿದ್ದ ಮೋದಿ ಅವರ ಹೆಲಿಕಾಪ್ಟರ್ ನಲ್ಲಿ ದೊಡ್ಡ ಬಾಕ್ಸ್ ಒಂದನ್ನು ತರಲಾಗಿತ್ತು. ಈ ವೇಳೆ ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತಿದಂತೆ ಅಲ್ಪ ದೂರದಲ್ಲಿ ನಿಂತಿದ್ದ ಇನ್ನೋವಾ ಕಾರಿಗೆ ಬಾಕ್ಸ್ ಅನ್ನು ತರಾತುರಿಯಲ್ಲಿ ಶಿಫ್ಟ್ ಮಾಡಲಾಗಿತ್ತು. ರಕ್ಷಣಾ ಪಡೆ ಸಿಬ್ಬಂದಿ ಬಾಕ್ಸ್ ಅನ್ನು ಕ್ಷಣಾರ್ಧದಲ್ಲಿ ತೆಗೆದು ಕಾರಿಗೆ ತುಂಬಿಸಿದ್ದರು. ಅಲ್ಲದೆ ಪರಿಶೀಲನೆ ಮಾಡದೆ ಕಾರನ್ನು ಅಲ್ಲಿಂದ ತೆರಳಲು ಅನುಮತಿ ನೀಡಲಾಗಿತ್ತು.
Advertisement
ಇನ್ನೋವಾ ಕಾರು ಮೋದಿಯ ಬೆಂಗಾವಲು ವಾಹನದ ಸಾಲಿನಲ್ಲಿ ಇರಲಿಲ್ಲ. ಆದರೂ ಅದು ಹೇಗೆ ಅಲ್ಲಿಗೆ ಆಗಮಿಸಿತು. ಆ ಕಾರಿನ ಮಾಲೀಕರು ಯಾರು? ಅಲ್ಲದೇ ಯಾವ ಸೆಕ್ಯೂರಿಟಿ ಪರಿಶೀಲನೆ ಇಲ್ಲದೇ ತರಾತುರಿಯಲ್ಲಿ ತೆಗೆದುಕೊಂಡು ಹೋಗಿದ್ದು ಏಕೆ ಎಂಬ ಪ್ರಶ್ನೆಗಳನ್ನು ಕಾಂಗ್ರೆಸ್ ಮುಂದಿಟ್ಟಿದೆ.
Suspicious box was offloaded from the PM's helicopter in Chitradurga, Karnataka today.
It was rushed to a waiting Innova, which then sped away
The question is,
Why was the box not part of security protocol?
Why wasn't the Innova part of PM's convoy? Whose car was it?
(1/n) pic.twitter.com/lJWVPC5neb
— Srivatsa (@srivatsayb) April 13, 2019