ChitradurgaCrimeDistrictsKarnatakaLatestMain Post

ಸಾಲದ ಹಣ ವಾಪಸ್ ಕೊಡುವುದಾಗಿ ನಂಬಿಸಿ ವ್ಯಕ್ತಿಯ ಹತ್ಯೆ

ಚಿತ್ರದುರ್ಗ: ಸಾಲದ ಹಣ ವಾಪಸ್ ಕೊಡುವುದಾಗಿ ಕರೆಸಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಮಹ್ಮದ್ ಅಜರ್(28) ಮೃತ ವ್ಯಕ್ತಿ. ಇವರು ಚಿತ್ರದುರ್ಗದ ಹೊರಪೇಟೆ ಬಡಾವಣೆಯ ನಿವಾಸಿಯಾಗಿದ್ದರು. ಜಿಲ್ಲೆಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಬಳಿ ಮಾರಕಾಸ್ತ್ರದಿಂದ ಹೊಡೆದು ಅಜರ್ ಅವರನ್ನು ಹತ್ಯೆಗೈದಿದ್ದಾರೆ.

POLICE JEEP

ಮುಬಾರಕ್, ಬಾಬು, ಪ್ರದೀಪ್ ಅವರು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೂವರು ಆರೋಪಿಗಳನ್ನು ನಗರ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಬೀದಿಯಲ್ಲಿ ಪೆನ್ನು ಮಾರ್ತಿದ್ದ ಬಾಲಕಿಗೆ ಐಫೋನ್ ಗಿಫ್ಟ್ ಕೊಟ್ರು ತೇಜ್ ಪ್ರತಾಪ್ ಯಾದವ್!

ಹಣದ ವ್ಯವಹಾರ ಹಿನ್ನೆಲೆಯಲ್ಲಿ ಈ ದುಷ್ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ. ಈ ಕುರಿತು ಚಿತ್ರದುರ್ಗ ನಗರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

Back to top button