Connect with us

Bellary

ಅಪಘಾತದಲ್ಲಿ ಎರಡೂ ಕಾಲುಗಳು ಕಟ್ ಆದ್ರೂ ಆಸ್ಪತ್ರೆಗೆ ಸೇರಿಸದೇ ವಿಡಿಯೋ ಮಾಡಿದ್ರು!

Published

on

Share this

ಚಿತ್ರದುರ್ಗ: ಅಪಘಾತ ನಡೆದಾಗ ಗಾಯಗೊಂಡವರ ರಕ್ಷಣೆಗೆ ಧಾವಿಸಿ ಎಂದು ಮಾಧ್ಯಮಗಳಲ್ಲಿ ಸಾಕಷ್ಟು ಬಾರಿ ವರದಿಯಾದರೂ ಜನರಿಗೆ ಮಾತ್ರ ಇನ್ನೂ ಸಹಾಯ ಪ್ರಜ್ಞೆ ಬಂದಿಲ್ಲ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ.

ಅಪಘಾತದಿಂದಾಗಿ ತನ್ನ ಎರಡು ಕಾಲುಗಳನ್ನು ಕಳೆದುಕೊಂಡ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದರೂ ನೆರದಿದ್ದ ಜನ ಮಾತ್ರ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸದೇ ಮೊಬೈಲ್‍ಗಳಲ್ಲಿ ದೃಶ್ಯ ಸೆರೆಹಿಡಿದಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಆಗಿದ್ದೇನು?: ಫೆಬ್ರವರಿ 22 ರಂದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಅಶೋಕ ಸಿದ್ದಾಪುರ ಗ್ರಾಮದಲ್ಲಿ ಆಟೋಗೆ ಲಾರಿ ಡಿಕ್ಕಿ ಹೊಡೆದು ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, 11 ಜನರು ಗಾಯಗೊಂಡಿದ್ದರು.

ಆಟೋದಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಗನ್ನಿಗಮ್ಮನ ಹಳ್ಳಿಯ ನಿವಾಸಿ ರಮೇಶ್ (18) ಪ್ರಯಾಣಿಸುತ್ತಿದ್ದರು. ಲಾರಿ ಎರಡು ಕಾಲುಗಳ ಮೇಲೆ ಲಾರಿ ಹಾದು ಹೋಗಿದ್ದರಿಂದ ರಮೇಶ್ ಕಾಲು ತುಂಡಾಗಿತ್ತು. ಎರಡು ಗಂಟೆಗಳ ಚಿಕಿತ್ಸೆಗಾಗಿ ರಮೇಶ್ ಅಂಗಲಾಚಿದ್ರೂ ಸ್ಥಳೀಯರು ಸಹಾಯ ಹಸ್ತ ನೀಡದೇ ಮೂಕಪ್ರೇಕ್ಷಕರಾಗಿ ನಿಂತಿದ್ದರು.

ಕೊನೆಗೆ ಅಂಬುಲೆನ್ಸ್ ಮುಖಾಂತರ ರಾಂಪುರ ಗ್ರಾಮದ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ರಮೇಶ್ ಅವರನ್ನು ಬಳ್ಳಾರಿಯ ಆಸ್ಪತ್ರೆಗೆ ದಾಖಲಿಸದ್ರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಕಳೆದ ತಿಂಗಳು ಇಂಹುದೇ ಪ್ರಕರಣ ಕೊಪ್ಪಳ ಹಾಗೂ ಯಾದಗಿರಿಯಲ್ಲೂ ಪ್ರಕರಣಗಳು ನಡೆದಿತ್ತು.

https://youtu.be/AESbC8wVrcQ

Click to comment

Leave a Reply

Your email address will not be published. Required fields are marked *

Advertisement