ಚಿತ್ರದುರ್ಗ: ಕೌಟಿಂಬಿಕ ಕಲಹದಂತಹ ಕ್ಷುಲ್ಲಕ ಕಾರಣಕ್ಕೆ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವಿಚಾರವನ್ನು ಸಂಬಂಧಿಕರಿಗೆ ತಿಳಿಸಲು ಹೋದ ಪತ್ನಿ ಮತ್ತು 2 ವರ್ಷದ ಮಗುವಿಗೆ ಅಪಘಾತವಾಗಿರುವ ಘಟನೆ ಚಿತ್ರದುರ್ಗ ನಗರದ ಕೆಳಗೋಟೆ ಬಡಾವಣೆಯಲ್ಲಿ ನಡೆದಿದೆ.
ಖಜಾನೆ ಇಲಾಖೆಯ ಮುಖ್ಯ ಲೆಕ್ಕಿಗ ನಾರಾಯಣಪ್ಪ (35) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ಅವರ ಪತ್ನಿ ರಮ್ಯ ಸಂಬಂಧಿಕರಿಗೆ ತಿಳಿಸಲು ತಮ್ಮ 2 ವರ್ಷದ ಮಗು ಆದ್ಯ ಜೊತೆ ಹೋದಾಗ ಅವರಿಗೆ ಅಪಘಾತ ಸಂಭವಿಸಿದೆ.
ಸಂಬಂಧಿಕರ ಮನೆಗೆ ಹೋಗುತ್ತಿದ್ದ ರಮ್ಯ ಮತ್ತು ಮಗುವಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮಗು ಆದ್ಯ ಸ್ಥಳದಲ್ಲೇ ಮೃತಪಟ್ಟಿದೆ. ರಮ್ಯ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.