ಚಿತ್ರದುರ್ಗ: ಏಷ್ಯಾದಲ್ಲೇ ಅತಿಹೆಚ್ಚು ಜನ ಸೇರುವ ಎರಡನೇ ಶೋಭಾಯಾತ್ರೆ ಖ್ಯಾತಿಯ ಚಿತ್ರದುರ್ಗದ (Chitradurga) ಹಿಂದೂ ಮಹಾಗಣಪತಿ (Hindu Mahaganapathi) ಕಾಣಿಕೆ ಹುಂಡಿಯಲ್ಲಿ 15 ಲಕ್ಷ ರೂ. ಸಂಗ್ರಹ ಆಗಿದೆ.
ಚಿತ್ರದುರ್ಗದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದಿಂದ ಹಿಂದೂ ಮಹಾಗಣಪತಿ ಉತ್ಸವ ಹಿನ್ನೆಲೆ ಸತತ 18 ದಿನಗಳ ಕಾಲ ಜೈನಧಾಮದಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಹಿಂದೂ ಮಹಾಗಣಪತಿ ಕಾಣಿಕೆ ಹುಂಡಿಯನ್ನು ಇಂದು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಎಣಿಕೆ ಮಾಡಿದ್ದು, ಕಾಣಿಕೆ ಪೆಟ್ಟಿಗೆಯಲ್ಲಿ 12.50 ಲಕ್ಷ ರೂ. ನೋಟುಗಳು ಹಾಗೂ 2.50 ಲಕ್ಷ ರೂ. ಚಿಲ್ಲರೆ ಹಣ ಸಂಗ್ರಹವಾಗಿದೆ. ಇದನ್ನೂ ಓದಿ: ವ್ಯಾಪಾರ ಮಾತುಕತೆಗೆ ಮತ್ತೆ ವೇದಿಕೆ ಸಿದ್ದ- ಇಂದು ಭಾರತಕ್ಕೆ ಬರುತ್ತಿದ್ದಾರೆ ಅಮೆರಿಕ ಪ್ರತಿನಿಧಿ
ಇಂದು ಹಿಂದೂ ಮಹಾಗಣಪತಿ ಸಮಿತಿಯಿಂದ ಕಾಣಿಕೆ ಹುಂಡಿಯ ಹಣ ಎಣಿಕೆ ಕಾರ್ಯ ನಡೆದಿದ್ದು, ಕಾಣಿಕೆ ಪೆಟ್ಟಿಗೆಯ ಹಣವನ್ನು ಭಕ್ತರು ಹರಾಜು ಕೂಗಿ ಪಡೆಯಲಿದ್ದಾರೆ. ಪ್ರತಿ ವರ್ಷದಂತೆ ಕಾಣಿಕೆ ಹುಂಡಿಯನ್ನು ಸಾಂಪ್ರದಾಯಿಕವಾಗಿ ಹರಾಜು ಹಾಕಲಿದ್ದು, ಅದನ್ನು ಹರಾಜಿನಲ್ಲಿ ನ ಭಕ್ತರಿಗೆ ನೀಡಲಾಗುವುದು. ಇದನ್ನೂ ಓದಿ: ಬೆಂಗಳೂರಿನ ಈ ಪ್ರದೇಶದಲ್ಲಿ ನಾಳೆ, ನಾಡಿದ್ದು ವಿದ್ಯುತ್ ವ್ಯತ್ಯಯ – ನಿಮ್ಮ ಏರಿಯಾ ಇದ್ಯಾ?
ಇನ್ನೂ ಸತತ 18 ದಿನಗಳ ಕಾಲವೂ ನಿರಂತರವಾಗಿ ನಡೆದ ಪೂಜಾ ಕೈಂಕಾರ್ಯದಲ್ಲಿ ಲಕ್ಷಾಂತರ ಜನ ಭಕ್ತರು ದರ್ಶನ ಪಡೆದಿದ್ದು, ಸೆ.13ರಂದು ನಡೆದ ಶೋಭಾಯಾತ್ರೆಯಲ್ಲಿ ಲಕ್ಷಾಂತರ ಜನ ಭಾಗಿಯಾಗಿದ್ದರು. ಹೀಗಾಗಿ ಗಣಪತಿ ಕಾಣಿಕೆ ಹುಂಡಿಯಲ್ಲಿ ಸಹ ಅಪಾರ ಹಣ ಸಂಗ್ರಹವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿ, ಯುವಜನರಲ್ಲಿ ನಾಯಕತ್ವ ಗುಣ ಬೆಳೆಸಲು ‘ನನ್ನ ಮತ ನನ್ನ ಹಕ್ಕು’ ಕಾರ್ಯಕ್ರಮ: ಡಿಕೆಶಿ