ಚಿತ್ರದುರ್ಗ: ಸರ್ಕಾರಿ ಶಾಲೆಯ ಶಿಕ್ಷಕರ ಇಚ್ಛಾಶಕ್ತಿಯ ಫಲವಾಗಿ ದಾನಿಗಳ ನೆರವಿನಿಂದ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ವಿಮಾನಯಾನ ಭಾಗ್ಯ ದೊರೆತಿದೆ. ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಜನರಿಗೆ ಇದು ನಿಜಕ್ಕೂ ಅಚ್ಚರಿ ಸಂಗತಿ.
ಹೌದು. ಚಿತ್ರದುರ್ಗ (Chitradurga) ಜಿಲ್ಲೆಯ ಮಾರಬಘಟ್ಟ (Marabaghatta) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು 2 ದಿನಗಳ ಅಧ್ಯಯನ ಪ್ರವಾಸಕ್ಕಾಗಿ ವಿಮಾನಯಾನ ಮಾಡುತ್ತಿದ್ದಾರೆ. ಗುರುವಾರ ಮಧ್ಯಾಹ್ನ ಶಿವಮೊಗ್ಗ ವಿಮಾನ ನಿಲ್ದಾಣದಿಂದ (Shivamogga Airport) ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Bengaluru International Airport) ಪ್ರಯಾಣ ಬೆಳೆಸಿದ್ದಾರೆ.ಇದನ್ನೂ ಓದಿ: ಕದಂಬ ಕನ್ನಡ ಜಿಲ್ಲೆ, ಬನವಾಸಿ ತಾಲೂಕು ರಚನೆಗೆ ಒತ್ತಾಯಿಸಿ ಪ್ರತಿಭಟನೆ
- Advertisement -
- Advertisement -
ಸದ್ಗುರು ಆರ್ಯುವೇದ ಕಂಪನಿ ಮಾಲೀಕ ಡಿ.ಎಸ್.ಪ್ರದೀಪ್ ಶೆಟ್ಟಿ, ಮಾರಬಘಟ್ಟದ ಚನ್ನಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಶಾಂತಕುಮಾರ ಸೇರಿದಂತೆ ಮತ್ತಿತರ ದಾನಿಗಳ ಆರ್ಥಿಕ ನೆರವಿನಿಂದ ಶಾಲೆಯ ಶಿಕ್ಷಕ ಯೋಗರಾಜ್ ಪ್ರವಾಸವನ್ನು ಆಯೋಜಿಸಿದ್ದಾರೆ. ಸ್ಕೌಟ್ ಅಂಡ್ ಗೈಡ್ಸ್ ಸೇರಿರುವ ಶಾಲೆಯ 5 ರಿಂದ 7ನೇ ತರಗತಿವರಗೆ ವ್ಯಾಸಂಗ ಮಾಡುತ್ತಿರುವ 19 ಮಕ್ಕಳು, ಮೂವರು ಶಿಕ್ಷಕರು ಹಾಗೂ ಇಸಿಒ ವಿಮಾನದಲ್ಲಿ ಪ್ರಯಾಣಿಸಿದರು.
- Advertisement -
- Advertisement -
ಯೋಗರಾಜ್ ಅವರು ಮಕ್ಕಳನ್ನು ವಿಮಾನದಲ್ಲಿ ಪ್ರವಾಸ ಕರೆದೊಯ್ಯುವ ಕುರಿತು ಯೋಚಿಸಿ ಇತರ ಶಿಕ್ಷಕರೊಂದಿಗೆ ಚರ್ಚಿಸಿ ಅನುಷ್ಠಾನಗೊಳಿಸಲು ಮುಂದಾಗಿದ್ದಾರೆ. ಶಿಕ್ಷಕರ ಚಿಂತನೆಗೆ ದಾನಿಗಳಿಂದ ಉತ್ತಮ ಸ್ಪಂದನೆ ದೊರೆತು ಮಕ್ಕಳು ವಿಮಾನದಲ್ಲಿ ಹಾರಾಟ ನಟಡಸಲು ಅನುಕೂಲವಾಯಿತು.
ಎರಡು ದಿನಗಳ ಕಾಲ ಬೆಂಗಳೂರಿನ ವಿಧಾನಸೌಧ, ಹೈಕೋರ್ಟ್, ವಿಶ್ವೇಶ್ವರಯ್ಯ ಮ್ಯೂಸಿಯಂ, ನೆಹರೂ ತಾರಾಲಯ, ಬನ್ನೇರುಘಟ್ಟದ ಜೈವಿಕ ಉದ್ಯಾನವನ ಸೇರಿದಂತೆ ಅಧ್ಯಯನ ಪ್ರವಾಸ ನಡೆಸಲಿರುವ ಮಕ್ಕಳು ಶನಿವಾರ ರಾತ್ರಿ ಹಿಂತಿರುಗಲಿದ್ದಾರೆ. ಮಾರಬಘಟ್ಟದ ಉದ್ಯಮಿ ಪ್ರಭಾಕರ್ ಮಕ್ಕಳಿಗೆ ಎರಡು ದಿನದ ಊಟ, ವಸತಿಯ ಸೌಲಭ್ಯ ಕಲ್ಪಿಸಿದ್ದಾರೆ.
ಸುಮಾರು ಇಪ್ಪತ್ತು ವರ್ಷಗಳಿಂದಲೂ ತಾಲೂಕಿನಲ್ಲಿ ಸ್ಕೌಟ್ ಮತ್ತು ಗೈಡ್ಸ್ ನೇತೃತ್ವ ವಹಿಸಿರುವ ಶಿಕ್ಷಕ ಯೋಗರಾಜ್ ಪ್ರತಿ ಶಾಲೆಗೂ ಸ್ಕೌಟ್ ಮತ್ತು ಗೈಡ್ಸ್ ಪರಿಚಯಿಸುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶೈಕ್ಷಣಿಕವಾಗಿಯೂ ಮಕ್ಕಳಿಗೆ ಉತ್ತಮ ಸೌಲಭ್ಯಗಳನ್ನು ದೊರಕಿಸಿಕೊಟ್ಟು ಸರ್ಕಾರಿ ಶಾಲೆಯನ್ನು ಯಾವುದೇ ಖಾಸಗಿ ಶಾಲೆಗೆ ಕಡಿಮೆಯಿಲ್ಲದಂತೆ ನಿರ್ವಹಣೆ ಮಾಡುತ್ತಿದ್ದಾರೆ.ಇದನ್ನೂ ಓದಿ: ದರ್ಶನ್‌ಗೆ ಇಂದೂ ಸಿಗಲಿಲ್ಲ ಬೇಲ್ – ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ