ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದ (Chitradurga) ಪ್ರಮುಖ ಮಳೆಯಾಶ್ರಿತ ಬೆಳೆ ಅಂದರೆ ಅದು ಮೆಕ್ಕೆಜೋಳ. ಆದರೆ ಈ ಬಾರಿ ಮೆಕ್ಕೆಜೋಳ (Maize) ಬೆಳೆದ ರೈತರ ಬದುಕು ಬೀದಿಗೆ ಬಂದಿದೆ.
ಚಿತ್ರದುರ್ಗದ ಪ್ರಮುಖ ಬೆಳೆ ಮೆಕ್ಕೆಜೋಳ. ಹೀಗಾಗಿ ಈ ಭಾಗದ ಮೆಕ್ಕೆಜೋಳ ಹೊರರಾಜ್ಯಗಳಿಗೂ ರಫ್ತಾಗಲಿದ್ದು, ಇಲ್ಲಿನ ರೈತರು (Farmers) 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆದಿದ್ದಾರೆ. ಅಲ್ಲದೇ ಈ ಬಾರಿ ಸಕಾಲಕ್ಕೆ ಮಳೆಯಾದ ಪರಿಣಾಮ ಉತ್ತಮ ಇಳುವರಿ ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಬೆಲೆ ನೆಲಕ್ಕೆ ಕುಸಿದಿದ್ದು, ಕೇಂದ್ರಸರ್ಕಾರ ಘೋಷಿಸಿರುವ 2,400 ರೂ. ಬೆಂಬಲ ಬೆಲೆ ನಾಮಕಾವಸ್ಥೆಗೆ ಸೀಮಿತವಾಗಿದೆ. ಹೀಗಾಗಿ ಅಪಾರ ಲಾಭದ ನಿರೀಕ್ಷೆಯಲ್ಲಿದ್ದ ಮೆಕ್ಕೆಜೋಳ ಬೆಳೆಗಾರರು ಸಾಲದ ಸುಳಿಗೆ ಸಿಲುಕಿ ವಿಲವಿಲ ಒದ್ದಾಡುವಂತಾಗಿದೆ. ಇದರಿಂದಾಗಿ ಕಂಗಾಲಾದ ಅನ್ನದಾತರು, ಡಿಸಿ ಕಚೇರಿ ಬಳಿ ಪ್ರತಿಭಟಿಸಿ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮನೆಗೆ ಮದ್ಯ – ಸದನದಲ್ಲಿ ಸ್ವಾರಸ್ಯಕರ ಚರ್ಚೆ
ಇನ್ನು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ, ಹೊಸದುರ್ಗ ಹಾಗೂ ಹಿರಿಯೂರು ತಾಲೂಕಿನ ರೈತರು ಹೆಚ್ಚಾಗೆ ಮೆಕ್ಕೆಜೋಳ ಬೆಳೆಯುತ್ತಾರೆ. ಆದರೆ ರೈತರು ಬೆಳೆದಿರುವ ಮೆಕ್ಕೆಜೋಳ ಖರೀದಿ ಮಾತ್ರ ಆಗ್ತಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆಯೊಂದಿಗೆ, ರಾಜ್ಯಸರ್ಕಾರವು ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಬೇಕು. ಸಣ್ಣ ರೈತರು ಬೆಳೆದ ಸಂಪೂರ್ಣ ಮೆಕ್ಕೆಜೋಳವನ್ನು ಖರೀದಿಸಿ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು. ಈ ಕುರಿತು ಬೆಳಗಾವಿ ಅಧಿವೇಶನದಲ್ಲಿ ಚಿತ್ರದುರ್ಗ ಜಿಲ್ಲೆಯ ಐವರು ಶಾಸಕರು ಹಾಗು ಉಸ್ತುವಾರಿ ಸಚಿವ ಸುಧಾಕರ್ ಧ್ವನಿಯೆತ್ತಿ ಮಾತನಾಡುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮೆಕ್ಕೆಜೋಳದ ರಾಶಿಗೆ ಬೆಂಕಿ – ಲಕ್ಷಾಂತರ ರೂ. ಬೆಳೆ ಹಾನಿ

