ಚಿತ್ರದುರ್ಗ: ಬರದನಾಡಲ್ಲಿ ಕೆರೆ ತುಂಬಿದರೆ ರೈತರ ಮೊಗದಲ್ಲಿ ಮಂದಹಾಸ ಮೂಡುತ್ತದೆ. ಆದರೆ ಚಿತ್ರದುರ್ಗ (Chitradurga) ಜಿಲ್ಲೆ ಹೊಳಲ್ಕೆರೆ (Holalkere) ತಾಲೂಕಿನ ಎಂಎ ಹಟ್ಟಿ ಹಾಗು ಹಂಪನೂರು ಗ್ರಾಮಗಳ ಕೆರೆಗಳು ಭರ್ತಿಯಾಗಿ ರೈತರನ್ನು ಭಾರೀ ಸಂಕಷ್ಟಕ್ಕೆ ಸಿಲುಕಿಸಿವೆ. ರೈತರ ಕೈಗೆ ಬಂದ ಬೆಳೆಗಳು ಬಾಯಿಗೆ ಬಾರದ ಸ್ಥಿತಿ ಬಂದೊದಗಿದೆ.
ನಿರಂತರ ಮಳೆಯಿಂದಾಗಿ ಎಂಎ ಹಟ್ಟಿ ಕೆರೆ ಭರ್ತಿಯಾಗಿದೆ. ಹಂಪನೂರು ಕೆರೆ ಕೋಡಿ ಬಿದ್ದಿದೆ. ಹೀಗಾಗಿ ರೈತರಿಗೆ ಒಂದೆಡೆ ಸಂತಸವಾಗಿದೆ. ಆದರೆ ಮತ್ತೊಂದೆಡೆ ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿಗಾಗಿ 16 ಎಕರೆ ಕೆರೆಯಂಗಳವನ್ನು ವಶಪಡಿಸಿಕೊಂಡಿದ್ದು, ಸರಾಗವಾಗಿ ಹರಿಯುತಿದ್ದ ಕೆರೆಕೋಡಿ ನೀರಿಗೆ ಎಂಎಹಟ್ಟಿ ಬಳಿ ಗ್ರಾಮಸ್ಥರು ತಡೆ ಹಾಕಿದ್ದಾರೆ. ಅಡ್ಡಲಾಗಿ ಮರಳಿನ ಚೀಲಗಳನ್ನು ಇಡಲಾಗಿದೆ. ಇದರಿಂದಾಗಿ ಎಂಎಹಟ್ಟಿ ಕೆರೆ ಕೋಡಿಯ ನೀರು ಸರಾಗವಾಗಿ ಹರಿಯದೇ ಅಕ್ಕಪಕ್ಕದ ಜಮೀನುಗಳಿಗೆ ನುಗ್ಗಿ ಭಾರೀ ಅವಾಂತರ ಸೃಷ್ಟಿಸಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಕಟ್ಟಾ ಬೆಂಬಲಿಗ, ಮುಡಾ ಮಾಜಿ ಆಯುಕ್ತ ಡಿ.ಬಿ ನಟೇಶ್ ಮನೆ ಮೇಲೂ ಇಡಿ ದಾಳಿ!
- Advertisement -
- Advertisement -
ಕೆರೆಹಿಂಬಂದಿಯ ಜಮೀನುಗಳಲ್ಲಿ ಸತತ ಎರಡು ತಿಂಗಳಿಂದ ನೀರು ನಿಂತು ನೂರಾರು ಎಕರೆಯಲ್ಲಿ ಬೆಳೆದ ಅಡಿಕೆ ಕಟಾವಿಗೆ ಅಡ್ಡಿಯಾಗಿದೆ. ಇನ್ನು ಲಕ್ಷಾಂತರ ರೂ. ಬಂಡವಾಳ ಹೂಡಿ ಬೆಳೆದ ಮೆಕ್ಕೆಜೋಳವನ್ನು ಮಾರುಕಟ್ಟೆಗೆ ಸಾಗಿಸಲಾಗದೇ ರೈತರು ಕಂಗಾಲಾಗಿದ್ದಾರೆ. ಜೊತೆಗೆ ರೈತರ ಕೈಗೆ ಬಂದ ಫಲವತ್ತಾದ ತೋಟ ಹೆಚ್ಚಿನ ಶೀತದಿಂದ ಹಾಳಾಗುವ, ಅಡಿಕೆ ಕೊಳೆರೋಗಕ್ಕೆ ತುತ್ತಾಗುವ ಆತಂಕ ನಿರ್ಮಾಣವಾಗಿದೆ. ಮೆಕ್ಕೆಜೋಳ ಸಹ ಕಟಾವು ಮಾಡಲಾಗದೇ ನೀರಲ್ಲೇ ಕೊಳೆಯುತ್ತಿದೆ. ಹೀಗಾಗಿ ಅನ್ನದಾತರ ಸ್ಥಿತಿ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಬಿಜೆಪಿಗೆ 160-170 ಸೀಟ್ ಖಚಿತ, ಬಹುಮತ ನಿಶ್ಚಿತ – ರಮೇಶ್ ಜಾರಕಿಹೊಳಿ
- Advertisement -
ಇನ್ನು ಈ ಬಗ್ಹೆ ಹಲವು ಬಾರಿ ಸಂಬಂಧಪಟ್ಟ ಚಿತ್ರದುರ್ಗ ತಹಶೀಲ್ದಾರ್ ಹಾಗು ಹೆದ್ದಾರಿ ಪ್ರಾಧಿಕಾರದ ಗಮನಕ್ಕ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಎಂಎ ಹಟ್ಟಿ ಗ್ರಾಮಸ್ಥರು ಕೋಡಿ ನೀರು ಹರಿಯಲು ಬಿಡುತ್ತಿಲ್ಲ. ಈ ಸಂಬಂಧ ಭರಮಸಾಗರ ಪೊಲೀಸ್ ಠಾಣೆಗೆ ದೂರು ಸಹ ನೀಡಲಾಗಿದೆ. ಕಟಾವಿಗೆ ಬಂದ ಬೆಳೆಗಳೆಲ್ಲಾ ನೀರು ಪಾಲಾಗಿ ರೈತರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಆದರೆ ಅಧಿಕಾರಿಗಳು ಹಾಗು ಜನಪ್ರತಿನಿಧಿಗಳು ಮಾತ್ರ ನಿದ್ರಾವಸ್ಥೆಯಲ್ಲಿದ್ದಾರೆಂದು ರೈತರು ಕಿಡಿಕಾರಿದ್ದು, ಕೂಡಲೇ ಈ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ ಹೆದ್ದಾರಿ ತಡೆ ನಡೆಸಲಾಗುವುದು ಎಂಬ ಎಚ್ಚರಿಕೆ ನೊಂದ ರೈತರಿಂದ ಕೇಳಿಬಂದಿದೆ. ಇದನ್ನೂ ಓದಿ: ಜಾನುವಾರು ಕಳ್ಳತನ ಮಾಡಿ ಜೀವನ ಸಾಗಿಸುತ್ತಿದ್ದ ಖದೀಮರ ಬಂಧನ
- Advertisement -
ಇಷ್ಟೆಲ್ಲಾ ಅವಾಂತರ ನಡೆದರೂ ಅಧಿಕಾರಿಗಳು ಇವರತ್ತ ಸುಳಿದಿಲ್ಲ. ಹಾಗೆಯೇ ಕೆರೆಕಟ್ಟೆ ನೀರು ಹಾಗೂ ಸಾರ್ವಜನಿಕರ ರಸ್ತೆಗೆ ಅಡ್ಡಿಪಡಿಸುವಂತಿಲ್ಲ ಎಂಬ ಕಾನೂನಿದ್ದರೂ ಸಹ ಕೆರೆಕೋಡಿ ನೀರಿಗೆ ಕಿಡಿಗೇಡಿಗಳು ಅಡ್ಡಿಪಡಿಸಿರೋದು ಮಾತ್ರ ವಿಪರ್ಯಾಸವೇ ಸರಿ. ಇದನ್ನೂ ಓದಿ: Raichur | ವಕ್ಫ್ ಆಸ್ತಿ ಒತ್ತುವರಿ ಮಾಡಿ ಲೇಔಟ್ ನಿರ್ಮಾಣ ಆರೋಪ – ಸೈಟ್ ಮಾರಾಟ ತಡೆಯುವಂತೆ ಆಗ್ರಹ