ಚಿತ್ರದುರ್ಗ: ಹಾಸಿಗೆಗಳು ಖಾಲಿ ಇರುವುದಿಲ್ಲ. ಹೀಗಾಗಿ ಏನೇ ಆದ್ರೂ ನಮ್ಮ ಆಸ್ಪತ್ರೆಗೆ ಬರಲೇಬೇಡಿ. ಬೇರೆ ಎಲ್ಲಾದ್ರೂ ಕರ್ಕೊಂಡು ಹೋಗಿ ಅನ್ನೋ ಮುನ್ನೆಚ್ಚರಿಕಾ ಸಂದೇಶವಿರೋ ಬೋರ್ಡ್ ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ಹಾಕಲಾಗಿದೆ.
Advertisement
ನೂರು ಹಾಸಿಗೆಗಳಿರುವ ಈ ಆಸ್ಪತ್ರೆಗೆ ದಿನನಿತ್ಯ 20ಕ್ಕೂ ಅಧಿಕ ಗರ್ಭಿಣಿಯರು ಬರ್ತಾರೆ. ಆದ್ರೆ ಅವರಲ್ಲಿ ದಾಖಲಾತಿಗೆ ಅವಕಾಶ ಸಿಕ್ಕರೆ ಅವರೇ ಪುಣ್ಯವಂತರು. ಸಹಜ ಹೆರಿಗೆಯಾದರೆ 2 ದಿನ ಮತ್ತು ಸಿಸೇರಿಯನ್ ಆದ್ರೆ ಒಂದು ವಾರ ಆಸ್ಪತ್ರೆಯಲ್ಲೇ ಉಳಿಯುವುದು ಅನಿವಾರ್ಯ. ಹೆರಿಗೆಗೆ ಬರುವವರ ಸಂಖ್ಯೆ ಹೆಚ್ಚಾಗಿರೋದ್ರಿಂದ ನೂರು ಬೆಡ್ ಸಾಕಾಗ್ತಿಲ್ಲ.
Advertisement
Advertisement
ಅತ್ತ ಚಾಮರಾಜನಗರದ ಸರ್ಕಾರಿ ಆಸ್ಪತ್ರೆಯ ಹೆರಿಗೆ ವಾರ್ಡ್‍ನಲ್ಲಿರೋದು ಕೇವಲ ಎಂಟೇ ಬೆಡ್. ಆಸ್ಪತ್ರೆಗೆ ಬರುವ ಗರ್ಭಿಣಿಯರ ಸಂಖ್ಯೆ ಹೆಚ್ಚಾದರೂ ಬೆಡ್ ಮತ್ತು ಅಗತ್ಯ ಸಿಬ್ಬಂದಿಯ ಸೇವೆಯಲ್ಲಿ ಹೆಚ್ಚಳವಾಗಿಲ್ಲ. ಸ್ವಚ್ಛ ಕುಡಿಯುವ ನೀರಿನ ಪೂರೈಕೆ ಇಲ್ಲದೇ ಸ್ವಚ್ಛತೆಯೂ ಇಲ್ಲದೇ ಸರ್ಕಾರಿ ಆಸ್ಪತ್ರೆ ಗಬ್ಬು ನಾರುತ್ತಿದೆ. ನೂರಾರು ಕಿಲೋ ಮೀಟರ್ ದೂರದಿಂದ ಬರುವ ಮಂದಿಗೆ ಈ ಆಸ್ಪತ್ರೆಯೇ ಅನಿವಾರ್ಯವಾಗಿರೋದ್ರಿಂದ ಹೊಂದಿಕೊಂಡು ಹೋಗ್ತಿದ್ದಾರೆ.
Advertisement