ಬೆಂಗಳೂರು: ಹಿರಿಯೂರು ಬಳಿ ಬಸ್ ದುರಂತದಲ್ಲಿ ಪ್ರಾಣಪಾಯದಿಂದ ಪಾರಾದ ಗಗನಶ್ರೀ ಅವರಿಗೆ ಬೆಂಗಳೂರಿನ (Bengaluru) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು ಘಟನೆಯ ಭೀಕರತೆಯನ್ನ ಪಬ್ಲಿಕ್ ಟಿವಿಯ ಜೊತೆ ಹಂಚಿಕೊಂಡಿದ್ದಾರೆ.
ಮೇಲಿನ ಸೀಟ್‌ನಲ್ಲಿ ಮಲಗಿದ್ದ ನಾನು, ರಕ್ಷಿತಾ ಜಿಗಿದು ಹೊರ ಬಂದೆವು. ರಶ್ಮಿ ಒಳಗೆ ಸಿಲುಕಿದ್ದರು. ನಾವಿದ್ದ ಸೀಟ್ ಸಮೀಪ, ಮೂರನೇ ಸೀಟ್ ಸಮೀಪಕ್ಕೆ ಬೆಂಕಿ ವ್ಯಾಪಿಸಿತ್ತು. ಕೂಡಲೇ ನಾನು, ರಕ್ಷಿತಾ ಜಿಗಿದು ಹೊರ ಹಾರಿದೆವು. ರಶ್ಮಿ ಜಂಪ್ ಮಾಡ್ತಾರೆ ಎಂಬ ನಿರೀಕ್ಷೆಯಲ್ಲಿರುವಷ್ಟರಲ್ಲೇ ಬೆಂಕಿ ವ್ಯಾಪಿಸಿತ್ತು ಎಂದು ವಿವರಿಸಿದರು. ಇದನ್ನೂ ಓದಿ: Chitradurga Bus Accident | ಚಿಕಿತ್ಸೆ ಪಡೆಯುತ್ತಿದ್ದ ಬಸ್ ಚಾಲಕ ಸಾವು – ಮೃತರ ಸಂಖ್ಯೆ 7ಕ್ಕೆ ಏರಿಕೆ
ಜಂಪ್ ಮಾಡಿ ಕೆಳಗೆ ಬರುವಷ್ಟರಲ್ಲಿ ಬೆಂಕಿ ಹತ್ತಿಕೊಂಡಿತ್ತು. ಗೋಕರ್ಣಕ್ಕೆ ಹೋಗಿ ಕೊನೆಗೆ ರಶ್ಮಿ ಮನೆಗೆ ಹೋಗಿ ಅಲ್ಲಿ ಉಳಿದುಕೊಳ್ಳಬೇಕಿತ್ತು. ಬಸ್ ಮೇಲೆ ಗೂಡ್ಸ್ ಇದ್ದ ಕಾರಣ ಬೇಗ ಬೆಂಕಿ ವ್ಯಾಪಿಸಿತು. ರಶ್ಮಿ ಹೊರ ಬರಲು ದೇವರು ಸಮಯ ನೀಡಲಿಲ್ಲ ಎಂದು ದು:ಖ ಹೊರಹಾಕಿದರು.
ಗಗನಶ್ರೀ ಜೊತೆ ರಕ್ಷಿತಾ, ರಶ್ಮಿ ಇದ್ದರು. ಈ ದುರಂತದಲ್ಲಿ ರಶ್ಮಿ ಬೆಂಕಿಯಲ್ಲಿ ಸಿಲುಕಿ ಜೀವ ಬಿಟ್ಟಿದ್ದಾರೆ. ರಶ್ಮಿ ಮುರುಡೇಶ್ವರ ಸಮೀಪದ ಹಳ್ಳಿಯವರು. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ರಶ್ಮಿ, ರಕ್ಷಿತಾ, ಗಗನಶ್ರೀ ಕೆಲಸ ಮಾಡುತ್ತಿದ್ದರು. ರಜೆಯ ಹಿನ್ನಲೆಯಲ್ಲಿ ಮೂವರು ಗೋಕರ್ಣಗೆ ಹೋಗಿ ಬಳಿಕ ರಶ್ಮಿ ಮನೆಗೆ ಹೋಗಲು ಪ್ಲ್ಯಾನ್ ಮಾಡಿಕೊಂಡಿದ್ದರು. ಇದನ್ನೂ ಓದಿ: Chitradurga Bus Accident | ಮೃತರ ಬೋನ್ ಸ್ಯಾಂಪಲ್ ಸಂಗ್ರಹ – ಡಿಎನ್‌ಎ ವರದಿ ಬಳಿಕ ಶವ ಹಸ್ತಾಂತರ
ಗುರುವಾರ ಬೆಳಗ್ಗೆ ರಶ್ಮಿ, ಗಗನಶ್ರೀ, ರಕ್ಷಿತಾ ಪಾರಾಗಿದ್ದಾರೆ ಎಂಬ ಸುದ್ದಿ ಬಂದಿತ್ತು. ಆದರೆ ಸಂಜೆಯ ವೇಳೆಗೆ ರಶ್ಮಿ ಮೃತಪಟ್ಟ ವಿಚಾರ ದೃಢಪಟ್ಟಿತ್ತು.

