ಚಿತ್ರದುರ್ಗ: 2023ರ ರೈಲ್ವೆ ಬಜೆಟ್ (Budget)ನಲ್ಲಿ ಚಿತ್ರದುರ್ಗ – ಆಲಮಟ್ಟಿ ಹೊಸ ರೈಲು ಮಾರ್ಗಕ್ಕೆ (Railway Tracking) 8,431.44 ಕೋಟಿ ರೂ. ಅನುದಾನ ಕಲ್ಪಿಸುವಂತೆ ಸಂಸದ ಕರಡಿ ಸಂಗಣ್ಣ (Karadi Sanganna Amarappa) ಅವರು ಕೇಂದ್ರ ರೈಲ್ವೆ ಸಚಿವರಲ್ಲಿ ಮನವಿ ಮಾಡಿದ್ದಾರೆ.
Advertisement
2018ರಲ್ಲಿ ಕೇಂದ್ರ ಸರ್ಕಾರದಿಂದ (Central Government) ನೂತನ ರೈಲುಮಾರ್ಗ ಆಲಮಟ್ಟಿಯಿಂದ ಚಿತ್ರದುರ್ಗದವರೆಗೆ ಸುಮಾರು 279.94 ಕಿಮೀ ಉದ್ದದ ಹೊಸ ರೈಲು ಮಾರ್ಗದ ಸರ್ವೆ ಕಾರ್ಯಕ್ಕೆ ಆದೇಶ ನೀಡಲಾಗಿತ್ತು. ಅದರಂತೆ ಹುಬ್ಬಳ್ಳಿ ನೈರುತ್ಯ ರೈಲ್ವೆ ವಿಭಾಗದ ಮುಖ್ಯ ಇಂಜಿನಿಯರ್ 8,431.44 ಕೋಟಿ ರೂ.ಗಳಿಗೆ ಅಂದಾಜು ಮೊತ್ತದ ಯೋಜನೆ ತಯಾರಿಸಿ ರೈಲ್ವೆ ಮಂಡಳಿಗೆ ಅನುಮೋದನೆಗಾಗಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ನಮ್ಮ ಪಕ್ಷದಲ್ಲಿ ಅಸಮಾಧಾನ ಇರೋದು ನಿಜ- JDS ಎಂಎಲ್‌ಸಿ ಅಚ್ಚರಿ ಹೇಳಿಕೆ
Advertisement
ಈ ರೈಲು ಮಾರ್ಗವು ಕೂಡಲಸಂಗಮ, ಹುನಗುಂದ, ಕುಷ್ಟಗಿ, ಬೇವೂರ ಇರಕಲಗಡ, ಕೊಪ್ಪಳ, ಹಿರೇಸಿಂಧೋಗಿ, ಕಾತರಕಿ, ತಮ್ರಹಳ್ಳಿ, ಆನಂದದೇವನಹಳ್ಳಿ, ಹಗರಿಬೊಮ್ಮನಹಳ್ಳಿ ಮಾರ್ಗವಾಗಿ ಚಿತ್ರದುರ್ಗ ಸಂಪರ್ಕಿಸಲಿದೆ. ಹಾಗಾಗಿ ಈ ಯೋಜನೆಗೆ 2023-2024ನೇ ಬಜೆಟ್‌ನಲ್ಲಿ ಅನುದಾನ ಕಲ್ಪಿಸುವಂತೆ ಕೋರಿದ್ದಾರೆ.