ಚಿತ್ರದುರ್ಗ: ಕೋಟೆನಾಡಿನ ಬಣಜಾರ ತಾಂಡದಲ್ಲಿ ಆಚರಿಸುವ ಗೋದ್ನಹಬ್ಬ (Godna Festival) ಯುವತಿಯರ ಬದುಕಿಗೆ ದಾರಿದೀಪವಾಗಿದೆ. ಮದುವೆಯಾಗದ ಯುವತಿಯರು ಸಾಂಪ್ರದಾಯಿಕವಾಗಿ ಆಚರಿಸುವ ವಿಶೇಷ ಸಂಸ್ಕೃತಿಯೊಂದು ಪೂರ್ವಜರ ಕಾಲದಿಂದಲು ಜೀವಂತವಾಗಿದೆ.
ತಲೆ ಮೇಲೆ ಬುಟ್ಟಿ ಹೊತ್ತು ಹೂ ತರಲು ಕಾಡಿಗೆ ಹೊರಟ ಯುವತಿಯರು. ರಸ್ತೆಯುದ್ದಕ್ಕೂ ಭರ್ಜರಿ ಸ್ಟೆಪ್ ಹಾಕುತ್ತಿರುವ ವನಿತೆಯರು. ಈ ದೃಶ್ಯಗಳು ಕಂಡುಬಂದಿದ್ದು ಚಿತ್ರದುರ್ಗ (Chitradurga) ತಾಲೂಕಿನ ಮದಕರಿಪುರ (Madakaripura) ತಾಂಡದಲ್ಲಿ. ಹೌದು, ಬಂಜಾರ ಸಮುದಾಯವು ಈ ಸಂಸ್ಕೃತಿಯನ್ನು ಪೂರ್ವಜರ ಕಾಲದಿಂದಲೂ ಆಚರಿಸುತ್ತಿದೆ. ಈ ಸಂಪ್ರದಾಯವನ್ನು ಪ್ರತಿವರ್ಷ ದೀಪಾವಳಿಯಂದು ಆಚರಿಸಲಿದ್ದು, ಮದುವೆ ವಯಸ್ಸಿಗೆ ಬಂದ ಯುವತಿಯರು ತವರು ಮನೆಯಲ್ಲಿ ಗೋದ್ನಹಬ್ಬದಲ್ಲಿ ಭಾಗಿಯಾಗೋದು ಇಲ್ಲಿನ ವಿಶೇಷ. ಅಲ್ಲದೇ ಗೋದ್ನಹಬ್ಬದಲ್ಲಿ ಒಮ್ಮೆ ಭಾಗಿಯಾದ ಯುವತಿ ಮುಂದಿನ ವರ್ಷ ತನ್ನ ಗಂಡನ ಮನೆಯಲ್ಲಿ ದೀಪಾವಳಿ ಆಚರಿಸುತ್ತಾಳೆ. ಗಂಡನ ಮನೆಯ ದೀಪ ಬೆಳಗಿಸಿ ಅವರ ಬದುಕಿಗೆ ಬೆಳಕಾಗುವಂತೆ ಸ್ವರ್ಗಾಸ್ತರಾದ ಹಿರಿಯರು ಆಶೀರ್ವದಿಸುವರೆಂಬ ನಂಬಿಕೆ ಇವರಲ್ಲಿದೆ. ಹೀಗಾಗಿ ಪ್ರತಿವರ್ಷ ದೀಪಾವಳಿಯಂದು ಎರಡು ದಿನಗಳ ಕಾಲ ಗೋದ್ನಾ ಹಬ್ಬವನ್ನು ಆಚರಿಸಲಾಗುತ್ತದೆ. ಇದನ್ನೂ ಓದಿ: ಹಳಿಯಲ್ಲಿದ್ದ ಕಸ ತೆರವುಗೊಳಿಸುತ್ತಿದ್ದ ವೇಳೆ ಎಕ್ಸ್‌ಪ್ರೆಸ್ ರೈಲು ಡಿಕ್ಕಿ – ನಾಲ್ವರು ಗುತ್ತಿಗೆ ಕಾರ್ಮಿಕರ ದುರ್ಮರಣ
ಇನ್ನು ಈ ಹಬ್ಬಕ್ಕೆ ಕಾಡಿನಿಂದ ಬಗೆಬಗೆಯ ಹೂಗಳನ್ನು ತರುತ್ತಾರೆ. ಆ ಗ್ರಾಮದ ಪ್ರತಿಯೊಬ್ಬರ ಮನೆಯಲ್ಲೂ ದೀಪ ಬೆಳಗಿಸಿ ಪೂಜಿಸುತ್ತಾರೆ. ಅಲ್ಲದೇ ತವರು ಮನೆಯಲ್ಲಿರುವ ಸ್ವತಂತ್ರವು, ಗಂಡನ ಮನೆಯಲ್ಲೇ ಸಿಗದೇ ಇರಬಹುದು. ಹೀಗಾಗಿ ಮದುವೆಗೂ ಮುನ್ನ ತವರಿನಲ್ಲಿ ಆಚರಿಸುವ ಗೋದ್ನಹಬ್ಬ ಜೀವನಪರ್ಯಂತ, ಆ ಯುವತಿಗೆ ಸವಿನೆನಪಾಗಿ ಉಳಿಯಲಿ ಎಂಬ ಉದ್ದೇಶದಿಂದ ದೀಪಾವಳಿ ಹಬ್ಬವನ್ನು ಈ ರೀತಿ ಆಚರಿಸುತ್ತಾರೆ. ಇದನ್ನೂ ಓದಿ: Bengaluru | ಸಾಫ್ಟ್‌ವೇರ್ ಹ್ಯಾಕ್ ಮಾಡಿ ಡೋರ್‌ಲಾಕ್ ಓಪನ್ – ಐಷಾರಾಮಿ ಕಾರುಗಳ್ಳರ ಬಂಧನ