ಚಿತ್ರದುರ್ಗ: ವಿನಾಶದ ಅಂಚಿನಲ್ಲಿರುವ ಐತಿಹಾಸಿಕ ಪ್ರವಾಸಿ ತಾಣ, ಚಿತ್ರದುರ್ಗದ 7 ಸುತ್ತಿನ ಕೋಟೆಯನ್ನು ರಕ್ಷಿಸಿ ವಿಶ್ವಪರಂಪರೆ ತಾಣಗಳ ಪಟ್ಟಿಗೆ ಸೇರಿಸುವಂತೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ.
ವಿಶ್ವದಲ್ಲಿ ಎಲ್ಲೂ ಈ ರೀತಿಯ 7 ಸುತ್ತಿನ ಕೋಟೆ ಇಲ್ಲ. ಅದ್ದರಿಂದ ಈ ಕೋಟೆಗೆ ನಿತ್ಯವೂ ಸಾವಿರಾರು ಜನ ಪ್ರವಾಸಿಗರು ಬರುತ್ತಾರೆ. ಈ ಕೋಟೆಯಲ್ಲಿರೋ ಸಾವಿರಾರು ದೇಗುಲಗಳು, ಬುರುಜು, ಬತ್ತೇರಿಗಳು, ಓಬವ್ವನ ಕಿಂಡಿ ಸೊಬಗನ್ನು ಸವಿದು ಆನಂದಿಸುತ್ತಾರೆ. ಹೀಗಾಗಿ ಈ ಐತಿಹಾಸಿಕ ತಾಣದಿಂದ ಪುರಾತತ್ವ ಇಲಾಖೆಗೆ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದೆ.
ವಿಶ್ವಪರಂಪರೆ ಪಟ್ಟಿಗೆ ಸೇರಿಸಬೇಕಾದ ಎಲ್ಲಾ ಅರ್ಹತೆಗಳು ಇದ್ದರೂ ಸಹ ಈ ಕೋಟೆಯನ್ನು ಇನ್ನೂ ವಿಶ್ವಪರಂಪರೆ ಪಟ್ಟಿಗೆ ಸೇರಿಸದೇ ಇರುವುದು ದುರದೃಷ್ಟಕರ. ಹೀಗಾಗಿ ಈ ಬಾರಿಯಾದರೂ ಈ ಐತಿಹಾಸಿಕ ಸ್ಮಾರಕವನ್ನು ವಿಶ್ವಪರಂಪರೆ ಪಟ್ಟಿಗೆ ಸೇರಿಸಬೇಕೆಂದು ಇತಿಹಾಸ ಸಂಶೋಧಕರು ಆಗ್ರಹಿಸಿದ್ದಾರೆ.
ಕೋಟೆಗೆ ನಿತ್ಯ ಪ್ರವಾಸಿಗರು ಬರುವುದರಿಂದ ರಕ್ಷಣೆ ಹಾಗು ಸ್ವಚ್ಛತೆಯ ಜವಾಬ್ದಾರಿಯನ್ನು ಪುರತತ್ವ ಇಲಾಖೆ ವಹಿಸಿಕೊಂಡಿದೆ. ಆದರೆ ಕೋಟೆಯ ಬುರುಜುಗಳು ಹಾಗು ಕೋಟೆಯ ತಡೆಗೋಡೆಗಳು ಬೀಳುವ ಸ್ಥಿತಿಗೆ ತಲುಪಿವೆ. ಆದರೆ ಇಲಾಖೆ ಮಾತ್ರ ಏನು ಆಗಿಲ್ಲವೆಂಬಂತೆ ಕಣ್ಮುಚ್ಚಿ ಕುಳಿತಿದೆ. ಹೀಗಾಗಿ ಕೂಡಲೇ ಕೋಟೆಯ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಂಡು ರಕ್ಷಿಸಬೇಕೆಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]