ಬೆಂಗಳೂರು: ಚಿರಂಜೀವಿ ಸರ್ಜಾ ಇದೀಗ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವುದು ಗೊತ್ತಿರೋ ವಿಚಾರವೇ. ಆ ಸಾಲಿನಲ್ಲಿ ಖ್ಯಾತ ನಿರ್ಮಾಪಕ ತರುಣ್ ಶಿವಪ್ಪ ನಿರ್ಮಾಣ ಮಾಡಿರೋ ‘ಖಾಕಿ’ ಚಿತ್ರ ತುಂಬಾನೇ ಕುತೂಹಲಕ್ಕೆ ಕಾರಣವಾಗಿದೆ. ಖಾಕಿ ಎಂಬ ಶೀರ್ಷಿಕೆಗೆ ಪವರ್ ಆಫ್ ಕಾಮನ್ ಮ್ಯಾನ್ ಎಂಬ ಟ್ಯಾಗ್ ಲೈನ್ ಇರೋದರಿಂದ ಈ ಸಿನಿಮಾ ಕಥೆಯೇನೆಂಬ ಬಗ್ಗೆ ಆರಂಭದಿಂದಲೇ ಚರ್ಚೆಗಳು ಶುರುವಾಗಿವೆ. ತರುಣ್ ಶಿವಪ್ಪ ಭಿನ್ನ ಕಥೆಗಳ ಅದ್ಧೂರಿಯಾದ ಚಿತ್ರಗಳ ನಿರ್ಮಾಣಕ್ಕೆ ಹೆಸರಾಗಿರುವವರು. ಅದಕ್ಕೆ ತಕ್ಕುದಾಗಿಯೇ ರೂಪುಗೊಂಡಿರೋ ಖಾಕಿ ಚಿತ್ರದ ಟೀಸರ್ ಬಿಡುಗಡೆಗೆ ಮುಹೂರ್ತ ಫಿಕ್ಸಾಗಿದೆ.
Advertisement
ಅಕ್ಟೋಬರ್ ಮೂವತ್ತು ಅಂದರೆ, ಇದೇ ಬುಧವಾರ ಖಾಕಿ ಟೀಸರ್ ಲಾಂಚ್ ಆಗಲಿದೆ. ಈ ಚಿತ್ರವನ್ನು ನವೀನ್ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ಇದು ನವೀನ್ ಪಾಲಿಗೆ ಮೊದಲ ಚಿತ್ರ. ಆದರೆ ಅವರು ಈ ಮೂಲಕ ಪಕ್ಕಾ ಮಾಸ್ ಕಥಾನಕವೊಂದನ್ನು ಪ್ರೇಕ್ಷಕರ ಮುಂದಿಡಲು ತಯಾರಾಗಿದ್ದಾರೆ. ಖಾಕಿ ಎಂಬ ಹೆಸರು ಕೇಳಿದಾಕ್ಷಣವೇ ಈ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಪೊಲೀಸ್ ಗೆಟಪ್ಪಿನಲ್ಲಿ ಮಿಂಚಿರಬಹುದೆನ್ನಿಸುತ್ತೆ. ಆದರೆ ಅವರಿಲ್ಲಿ ದಿ ಪವರ್ ಆಫ್ ಕಾಮನ್ ಮ್ಯಾನ್ ಎಂಬ ಟ್ಯಾಗ್‍ಲೈನಿಗೆ ತಕ್ಕುದಾದ ಪಾತ್ರದಲ್ಲಿ ನಟಿಸಿದ್ದಾರೆ. ಒಂದು ಮೂಲದ ಪ್ರಕಾರ ಅವರು ಈ ಚಿತ್ರದಲ್ಲಿ ಕೇಬಲ್ ಆಪರೇಟರ್ ಆಗಿ ಕಾಣಿಸಿಕೊಂಡಿದ್ದಾರಂತೆ. ಈ ವಿಚಾರ ಕೇಳಿ ನಿಮ್ಮೊಳಗೊಂದು ಅಚ್ಚರಿ ಮೂಡಿಕೊಂಡರೆ, ಅದು ಮತ್ತಷ್ಟು ಮಿರುಗಿಸವಂಥಾ ವಿಚಾರಗಳೇ ಈ ಸಿನಿಮಾದಲ್ಲಿ ಅಡಕವಾಗಿವೆಯಂತೆ.
Advertisement
Advertisement
ಓರ್ವ ನಟನಾಗಿ ಚಿರಂಜೀವಿ ಸರ್ಜಾ ಅವರದ್ದು ವಿಶಿಷ್ಟವಾದ ಯಾನ. ಈವರೆಗೂ ಥರ ಥರದ ಪಾತ್ರಗಳಲ್ಲಿ ಕಂಗೊಳಿಸಿರೋ ಅವರು ಈ ಹಿಂದೆ ಸಿಂಗ ಚಿತ್ರದ ಮೂಲಕ ಪಕ್ಕಾ ಮಾಸ್ ಅವತಾರದಲ್ಲಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಆದರೆ ಖಾಕಿ ಚಿತ್ರದಲ್ಲಿ ಅದೆಲ್ಲವನ್ನೂ ಮೀರಿಸುವಂಥಾ ಮಾಸ್ ಸನ್ನಿವೇಶಗಳಿವೆಯಂತೆ. ಕಥೆಯ ವಿಚಾರದಲ್ಲಿಯೂ ತೀರಾ ಭಿನ್ನವಾಗಿರೋ ಖಾಕಿ ಚಿರು ಪಾಲಿಗೆ ಮತ್ತೊಂದು ಗೆಲುವು ದಕ್ಕಿಸಿಕೊಡಲಿರೋದು ಗ್ಯಾರೆಂಟಿ ಎಂಬಂಥಾ ವಾತಾವರಣವಿದೆ. ಈ ಹಿಂದೆ ಮಾಸ್ ಲೀಡರ್, ವಿಕ್ಟರಿ 2 ಚಿತ್ರಗಳ ಮೂಲಕ ಯಶಸ್ವಿ ನಿರ್ಮಾಪಕರೆನ್ನಿಸಿಕೊಂಡಿರುವವರು ತರುಣ್ ಶಿವಪ್ಪ. ಅವರು ಬಲು ಆಸ್ಥೆಯಿಂದಲೇ ಖಾಕಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರೀಕರಣ ಮುಗಿಸಿಕೊಂಡಿರೋ ಖಾಕಿ ಬಿಡುಗಡೆಯ ಹಂತದಲ್ಲಿದೆ. ಈ ಕ್ಷಣಗಳನ್ನು ಇನ್ನು ದಿನದೊಪ್ಪತ್ತಿನಲ್ಲಿಯೇ ಟೀಸರ್ ಮತ್ತಷ್ಟು ಕಳೆಗಟ್ಟುವಂತೆ ಮಾಡಲಿದೆ.