ಚಿರು ಸರ್ಜಾ ಅಭಿನಯದ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ಶಿವಾರ್ಜುನ ಇಂದು ತೆರೆಗಪ್ಪಳಿಸಿದೆ. ಕೊರೊನಾ ಭೀತಿಯ ನಡುವೆಯೂ ಚಿತ್ರಕ್ಕೆ ದೊಡ್ಡ ಮಟ್ಟದ ಓಪನಿಂಗ್ ಸಿಕ್ಕಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ಸಿನಿ ಪ್ರಿಯರನ್ನು ರಂಜಿಸುತ್ತಿರುವ ಯುವ ಸಾಮ್ರಾಟ್ ಚಿರು ಸರ್ಜಾ ಓನ್ಸ್ ಅಗೈನ್ ಶಿವಾರ್ಜುನ ಚಿತ್ರದ ಮೂಲಕ ಅಬ್ಬರಿಸಿದ್ದಾರೆ.
Advertisement
ಮಾಸ್ ಹಾಗೂ ಫ್ಯಾಮಿಲಿ ಎಂಟರ್ ಟೈನ್ಮೆಂಟ್ ಕಂಟೆಟ್‍ಗೆ ಪ್ರೇಕ್ಷಕ ಪ್ರಭು ಫಿದಾ ಆಗಿದ್ದಾನೆ. ನಾಯಕ ಶಿವು ಆಯುರ್ವೇಧಿಕ್ ಡಾಕ್ಟರ್ ಸಾಧು ಕೋಕಿಲ ಬಳಿ ಕೆಲಸಕ್ಕೆ ಸೇರಿ ಕೊಳ್ಳುತ್ತಾನೆ. ಆದ್ರೆ ಈ ಶಿವ ಯಾರು, ಈತನ ಹಿನ್ನೆಲೆ ಏನು ಅನ್ನೋದನ್ನ ನಿರ್ದೇಶಕರು ಪ್ರೇಕ್ಷಕರಿಗೆ ಕ್ಲೂ ಕೊಡದೆ ಮೊದಲಾರ್ಧ ಕ್ಯೂರಿಯಾಸಿಟಿ ಮೂಡಿಸುತ್ತಾರೆ. ಅಸಲಿ ಕಥೆ ಸೆಕೆಡ್ ಹಾಫ್ ನಲ್ಲಿದ್ದು, ಶಿವ ಯಾರು, ಆತ ತನ್ನ ಶತ್ರುಗಳನ್ನು ಹೇಗೆ ಬಗ್ಗು ಬಡಿಯುತ್ತಾನೆ ಅನ್ನೋದನ್ನ ಮಾಸ್ ಆಗಿ ಚಿತ್ರಿಸಿದ್ದಾರೆ ನಿರ್ದೇಶಕರು.
Advertisement
Advertisement
ಎರಡು ಊರುಗಳ ನಡುವೆ ನಡೆಯುವ ಕಥೆಯೇ ಶಿವಾರ್ಜುನ. ರಾಮದುರ್ಗ ಹಾಗೂ ರಾಯದುರ್ಗ ಎರಡು ಊರುಗಳ ನಡುವೆ ಇಡೀ ಚಿತ್ರ ನಡೆಯುತ್ತೆ. ಪ್ರತಿ ವರ್ಷ ಈ ಎರಡು ಊರುಗಳ ನಡುವೆ ಸ್ಪರ್ಧೆ ನಡೆಯುತ್ತಿರುತ್ತೆ. ಸಡನ್ ಆಗಿ ಒಂದು ವರ್ಷ ಈ ಸ್ಪರ್ಧೆ ನಿಂತು ಹೋಗುತ್ತೆ. ಎರಡು ಊರುಗಳ ನಡುವೆ ಕಾದಾಟ ಶುರುವಾಗುತ್ತೆ. ಇದಕ್ಕೆ ಕಾರಣ ಏನು ಈ ಸ್ಪರ್ಧೆಗೂ, ಕಾದಾಟಕ್ಕೂ ನಾಯಕ ಶಿವುಗೂ ಏನು ಕಾರಣ, ಸಂಬಂಧ ಏನು ಅನ್ನೋದನ್ನು ನೀವು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು. ಚಿರು ಸರ್ಜಾ ಈ ಹಿಂದಿನ ಸಿನಿಮಾಗಳಿಗೆ ಹೋಲಿಕೆ ಮಾಡಿದ್ರೆ ಹೆಚ್ಚು ಇಷ್ಟವಾಗುತ್ತಾರೆ. ಡಾನ್ಸ್ ಹಾಗೂ ಫೈಟಿಂಗ್ ನಲ್ಲಿ ತೆರೆ ಮೇಲೆ ಚಿರು ನೋಡೋಕೆ ಸಖತ್ ಥ್ರಿಲ್ ನೀಡ್ತಾರೆ.
Advertisement
ಪಾಪ್ ಕಾರ್ನ್ ಮಂಕಿ ಟೈಗರ್, ಲವ್ ಮೊಕ್ಟೈಲ್ ಚಿತ್ರದ ಮೂಲಕ ಸ್ಯಾಂಡಲ್‍ವುಡ್ ನಲ್ಲಿ ಗಮನ ಸೆಳೆದಿರುವ ಅಮೃತ ಐಯ್ಯಂಗಾರ್ ಈ ಚಿತ್ರದ ಮೂಲಕ ಪ್ರೇಕ್ಷಕರಿಗೆ ಸಖತ್ ಇಷ್ಟವಾಗುತ್ತಾರೆ ಜೊತೆಗೆ ಭರವಸೆಯ ನಾಯಕಿಯಾಗಿ ಹೊರಹೊಮ್ಮಿದ್ದಾರೆ. ತಾರಾ, ಕಿಶೋರ್ ಅಭಿನಯದ ಬಗ್ಗೆ ಮಾತನಾಡುವ ಹಾಗಿಲ್ಲ. ವಿಶೇಷ ಅಂದ್ರೆ ಈ ಚಿತ್ರದ ಮೂಲಕ ನಟಿ ತಾರಾ ಪುತ್ರ ಶ್ರೀಕೃಷ್ಣ ಬಾಲನಟನಾಗಿ ಪಾದಾರ್ಪಣೆ ಮಾಡಿದ್ದು, ಚಿತ್ರದಲ್ಲಿ ಶ್ರೀಕೃಷ್ಣನ ಮುದ್ದಾದ ನಟನೆ ನೋಡಲು ಖುಷಿಯಾಗುತ್ತೆ.
ಸೂರಗ್ ಕೋಕಿಲ ಮ್ಯೂಸಿಕ್ ಚಿತ್ರದ ಸಂದರ್ಭ, ಸನ್ನೀವೇಶಕ್ಕೆ ತಕ್ಕ ಹಾಗೆ ಮೂಡಿಬಂದಿದ್ದು ಸ್ಯಾಂಡಲ್‍ವುಡ್‍ಗೆ ಮತ್ತೊಬ್ಬ ಭರವಸೆಯ ಯುವ ಸಂಗೀತ ನಿರ್ದೇಶಕ ಸಿಕ್ಕಿದ್ರು ಅಂದ್ರೆ ತಪ್ಪಾಗೊಲ್ಲ. ಸಾಹಸ ದೃಶ್ಯಗಳು ಮಾಸ್ ಪ್ರಿಯರ ಮನ ಸೆಳೆಯುತ್ತೆ. ರೆಗ್ಯೂಲರ್ ಸಿನಿಮಾ ಕಥೆಯೇ ಚಿತ್ರದಲ್ಲಿದ್ರು ಕೂಡ ನಿರ್ದೇಶಕರು ನೀಡಿರುವ ಹೊಸ ಸ್ಪರ್ಶ ನೋಡುಗರಿಗೆ ಇಷ್ಟವಾಗುತ್ತೆ. ಫ್ಯಾಮಿಲಿ ಎಂಟರ್ ಟೈನ್ಮೆಂಟ್ ಚಿತ್ರದಲ್ಲಿರೋದ್ರಿಂದ ಇಡೀ ಫ್ಯಾಮಿಲಿ ಕುಳಿತು ಎಂಜಾಯ್ ಮಾಡಬಹುದು.
ಚಿತ್ರ: ಶಿವಾರ್ಜುನ
ನಿರ್ದೇಶನ: ಶಿವ ತೇಜಸ್
ನಿರ್ಮಾಪಕ: ಶಿವಾರ್ಜುನ್
ಸಂಗೀತ ನಿರ್ದೇಶನ: ಸುರಾಗ್ ಕೋಕಿಲ
ಛಾಯಾಗ್ರಹಣ: ವೇಣು
ತಾರಾಬಳಗ: ಚಿರಂಜೀವಿ ಸರ್ಜಾ, ಅಮೃತ ಐಯ್ಯಂಗರ್, ರವಿಕಿಶನ್, ಸಾಧಕೋಕಿಲ, ತಾರಾ, ಕಿಶೋರ್.
ರೇಟಿಂಗ್: 3.5/5