‘ತತ್ಸಮ ತದ್ಭವ’ (Tatsama Tadbhava) ಸಿನಿಮಾ ಮೂಲಕ ನಟಿ ಮೇಘನಾ ರಾಜ್ (Meghana Raj) ಅವರು ಕಮ್‌ಬ್ಯಾಕ್ ಆಗಿದ್ದಾರೆ. ಚಿತ್ರದ ಮೊದಲ ಟೀಸರ್‌ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಇದರ ನಡುವೆ ಇತ್ತೀಚಿನ ಸಂದರ್ಶನದಲ್ಲಿ ಮೇಘನಾ ರಾಜ್ ಅವರು ಅಚ್ಚರಿಯ ಮಾಹಿತಿಯೊಂದನ್ನ ಬಿಚ್ಚಿಟ್ಟಿದ್ದಾರೆ. ಪತಿ ಚಿರು ಕೊನೆಯ ಸಿನಿಮಾದಲ್ಲಿ ರಾಯನ್ ರಾಜ್ ಸರ್ಜಾ ನಟಿಸಿದ್ದಾರಾ? ಎಂಬುದರ ಬಗ್ಗೆ ನಟಿ ಮಾತಾಡಿದ್ದಾರೆ.
ಮೇಘನಾ ರಾಜ್ ಅವರು ಎಂದೂ ಕಾಣಿಸಿಕೊಂಡಿರದ ಪಾತ್ರದಲ್ಲಿ ‘ತತ್ಸಮ ತದ್ಭವ’ ಸಿನಿಮಾದಲ್ಲಿ ನಟಿಸಿದ್ದಾರೆ. ಕಮ್ ಬ್ಯಾಕ್ ಸಿನಿಮಾ ಆಗಿರೋ ಕಾರಣ, ಸಿನಿಮಾ ಬಗ್ಗೆ ತುಂಬಾನೇ ಹೈಪ್ ಕ್ರಿಯೇಟ್ ಮಾಡಿದೆ. ಇದರ ಪತಿ ಚಿರು ಸರ್ಜಾ ನಟನೆಯ ‘ರಾಜ ಮಾರ್ತಾಂಡ’ ಸಿನಿಮಾ ಯಾಕೆ ತಡವಾಗುತ್ತಿದೆ ಎಂದು ನಟಿ ಹೇಳಿದ್ದಾರೆ.
ಪತಿ ಚಿರಂಜೀವಿ ಸರ್ಜಾ (Chiranjeevi Sarja) ಅವರು ಕೊನೆದಾಗಿ ನಟಿಸಿರುವ ಸಿನಿಮಾ ‘ರಾಜ ಮಾರ್ತಾಂಡ’ (Raja Marthanda) ಚಿತ್ರ. ಸರ್ಜಾ ಫ್ಯಾಮಿಲಿ ಭಾವನಾತ್ಮಕವಾಗಿ ಹತ್ತಿರವಾಗಿದೆ. ಧ್ರುವ ಸರ್ಜಾ ಚಿರು ಪಾತ್ರಕ್ಕೆ ಧ್ವನಿಯಾಗಿದ್ರೆ, ಪುತ್ರ ರಾಯನ್ ರಾಜ್ ಸರ್ಜಾ ಈ ಸಿನಿಮಾದ ಭಾಗವಾಗಿದ್ದಾರೆ. ರಾಯನ್ ಕೂಡ ತಂದೆಯ ಸಿನಿಮಾ ಮೂಲಕ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ಈ ಬಗ್ಗೆ ಮೇಘನಾ ರಾಜ್ ಅವರು ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ಮನೀಷ್ ಮಲ್ಹೋತ್ರಾ ನಿರ್ದೇಶನದಲ್ಲಿ ಮೀನಾ ಕುಮಾರಿ ಬಯೋಪಿಕ್- ಕೃತಿ ಸನೋನ್ ನಾಯಕಿ?
ಚಿರು- ಧ್ರುವಗೆ ಇಬ್ಬರ ಬಾಂಡಿಂಗ್ ತುಂಬಾನೇ ಚೆನ್ನಾಗಿತ್ತು. ಡಬ್ಬಿಂಗ್ ಮಾಡುವಾಗ ಧ್ರುವಗೆ ಸೀನ್ ನೋಡಿ ಡಬ್ ಮಾಡೋಕೆ ಕಷ್ಟವಾಗಿದೆ. ಸಿನಿಮಾ ಚೆನ್ನಾಗಿ ಬರಬೇಕು ಎಂಬ ಕಾರಣಕ್ಕೆ ಸಮಯ ತೆಗೆದುಕೊಂಡು ಕೆಲಸ ಮಾಡಿದ್ದಾರೆ. ಧ್ರುವ ಸರ್ಜಾ ಇನ್ನೂ ಎಳಸು ಅಷ್ಟು ಶಕ್ತಿ ಇಲ್ಲ. ರಾಯನ್- ಅವನಿಗೂ ವ್ಯತ್ಯಾಸವಿಲ್ಲ ಎಂದು ಮೇಘನಾ ರಾಜ್ ಹೇಳಿದ್ದಾರೆ. ಸಿನಿಮಾ ಪ್ರಚಾರದಿಂದ ಹಿಡಿದು ರಿಲೀಸ್ ಆಗುವವರೆಗೂ ನನ್ನದು ಮತ್ತು ನನ್ನ ಕುಟುಂಬದ ಬೆಂಬಲವಿರುತ್ತದೆ ಎಂದು ಹೇಳಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]