ಆ್ಯಕ್ಷನ್ ಪ್ರಿನ್ಸ್ ಬರ್ತ್‌ಡೇಯಂದು ರಿಲೀಸ್ ಆಗಲಿದೆ ಚಿರು ಸರ್ಜಾ ನಟನೆಯ ಕೊನೆಯ ಸಿನಿಮಾ

Public TV
1 Min Read
chiru sarja

ನ್ನಡ ಚಿತ್ರರಂಗದ ಯುವ ಸಾಮ್ರಾಟ್ ಚಿರು ಸರ್ಜಾ (Chiranjeevi Sarja) ಅವರು ನಿಧನರಾಗಿ 3 ವರ್ಷವಾಗಿದೆ. ಅವರ ಅಗಲಿಕೆಯ ನೋವು ಸರ್ಜಾ ಕುಟುಂಬ ಮತ್ತು ಫ್ಯಾನ್ಸ್‌ಗೆ ಇನ್ನೂ ಕಾಡ್ತಿದೆ. ಹೀಗಿರುವಾಗ ಚಿರು ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ಹೀರೋ ಧ್ರುವ ಸರ್ಜಾ (Dhruva Sarja) ಹುಟ್ಟುಹಬ್ಬದಂದು (Birthday) ಚಿರು ಸರ್ಜಾ ನಟಿಸಿದ ಕೊನೆಯ ಸಿನಿಮಾ ರಾಜಮಾರ್ತಾಂಡ ಸಿನಿಮಾ ಬೆಳ್ಳಿತೆರೆಗೆ ಅಪ್ಪಳಿಸುತ್ತಿದೆ.

chiru sarjaಅಕ್ಟೋಬರ್ 6ರಂದು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹುಟ್ಟುಹಬ್ಬವಿದೆ. ತಮ್ಮನ ಹುಟ್ಟುಹಬ್ಬಂದು ಅಣ್ಣನ ಕೊನೆಯ ಸಿನಿಮಾ ಬಿಡುಗಡೆಗೆ ಸಿದ್ಧತೆಗಳು ನಡೆಯುತ್ತಿವೆ. ಚಿರಂಜೀವಿ ಸರ್ಜಾ ಕೊನೆಯ ಸಿನಿಮಾ ‘ರಾಜಮಾರ್ತಾಂಡ’ ಅಕ್ಟೋಬರ್ 6ರಂದು ಬಿಡುಗಡೆ ಮಾಡುವುದಕ್ಕೆ ನಿರ್ಮಾಪಕ ಹಾಗೂ ನಿರ್ದೇಶಕರು ನಿರ್ಧಾರ ಮಾಡಿದ್ದಾರೆ. ಇದನ್ನೂ ಓದಿ:ಇಂಟರ್‌ನೆಟ್ ಬೆಂಕಿ ಹಚ್ಚಿದ ಸಂಯುಕ್ತಾ ಹೆಗ್ಡೆ ಬಿಕಿನಿ ಫೋಟೋಸ್

dhruva sarjaಚಿರಂಜೀವಿ ಸರ್ಜಾ ಅಗಲುವ ಮುನ್ನ ‘ರಾಜಮಾರ್ತಾಂಡ’ ಸಿನಿಮಾದಲ್ಲಿ ನಟಿಸುತ್ತಿದ್ದರು. ಈ ಸಿನಿಮಾ ಶೂಟಿಂಗ್ ಮುಕ್ತಾಯವಾಗಿದ್ದರೂ, ಇನ್ನೂ ಪೋಸ್ಟ್ ಪ್ರೊಡಕ್ಷನ್ ಕೆಲಸ ಬಾಕಿಯಿತ್ತು. ಅಲ್ಲದೆ ಡಬ್ಬಿಂಗ್ ಕೂಡ ಆಗಿರಲಿಲ್ಲ. ಚಿರು ಅಗಲಿದ ಬಳಿಕ ಉಳಿಸಿ ಹೋದ ಕೆಲಸಗಳನ್ನು ತಾನು ಪೂರ್ಣಗೊಳಿಸುವುದಾಗಿ ಧ್ರುವ ಹೇಳಿದ್ದರು. ಅದರಂತೆಯೇ ಚಿರು ದೃಶ್ಯಗಳಿಗೆ ಧ್ರುವ ಸರ್ಜಾ ಡಬ್ಬಿಂಗ್ ಮಾಡಿಕೊಟ್ಟಿದ್ದರು. ಇದನ್ನೂ ಓದಿ:ಇಂಟರ್‌ನೆಟ್ ಬೆಂಕಿ ಹಚ್ಚಿದ ಸಂಯುಕ್ತಾ ಹೆಗ್ಡೆ ಬಿಕಿನಿ ಫೋಟೋಸ್

chiru sarja‘ರಾಜಮಾರ್ತಾಂಡ’ (Rajamartanda) ಒಂದು ಮಾಸ್ ಸಿನಿಮಾ. ಚಿರಂಜೀವಿ ಸರ್ಜಾ ಈ ಸಿನಿಮಾ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಧ್ರುವ ಸರ್ಜಾ ಧ್ವನಿಯಲ್ಲಿ ಚಿರು ನಟನೆಯನ್ನು ಕಣ್ತುಂಬಿಕೊಳ್ಳುವ ಅವಕಾಶ ಈಗ ಅಭಿಮಾನಿಗಳ ಪಾಲಿಗೆ ಒಲಿದು ಬಂದಿದೆ. ಚಿರುಗೆ ನಾಯಕಿಯರಾಗಿ ದೀಪ್ತಿ ಸಾತಿ, ಮೇಘಶ್ರೀ ನಟಿಸಿದ್ದಾರೆ.

ಈ ಸಿನಿಮಾದ ಮೂಲಕ ಚಿರು ಸರ್ಜಾ- ಮೇಘನಾ ರಾಜ್ (Meghana Raj) ಪುತ್ರ ರಾಯನ್ (Rayan) ಕೂಡ ಪರಿಚಯ ಆಗುತ್ತಿದ್ದಾರೆ. ಈ ಬಗ್ಗೆ ನಟಿ ಮೇಘನಾ ಅವರೇ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದರು.

Share This Article