ಕಾಲಿವುಡ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿರುವ ವಿಕ್ರಮ್ ಸಿನಿಮಾ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ಇದೀಗ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಕಮಲ್ ಹಾಸನ್ ಸಿನಿಮಾದ ಗೆಲುವನ್ನು ಮೆಗಾಸ್ಟಾರ್ ಚಿರಂಜೀವಿ ಸಂಭ್ರಮಿಸಿದ್ದಾರೆ. ಈ ಸಕ್ಸಸ್ ಖುಷಿಯಲ್ಲಿ ಸಲ್ಮಾನ್ ಖಾನ್ ಕೂಡ ಸಾಥ್ ನೀಡಿದ್ದಾರೆ.

Thank you @KChiruTweets gaaru. Was nice reminiscing our time together under KB. It was nice chatting up our mutual friend @BeingSalmanKhan bhai as well. Great evening. Thanks to all in your family who took care of us. https://t.co/jG2kTmsPPt
— Kamal Haasan (@ikamalhaasan) June 12, 2022
ಸಕ್ಸಸ್‌ನ ಖುಷಿಯ ಕ್ಷಣಗಳನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ಸಿನಿಮಾವನ್ನು ಮೆಗಾಸ್ಟಾರ್ ಚಿರಂಜೀವಿ ಹಾಡಿ ಹೊಗಳಿದ್ದಾರೆ. ಗೆಳೆಯ ಕಮಲ್ ಹಾಸನ್ ಯಶಸ್ಸನ್ನು ಸಂಭ್ರಮಿಸಿದ್ದಾರೆ. ಈ ವೇಳೆ ಸಾಥ್ ನೀಡಿರೋ ಚಿರಂಜೀವಿಗೆ ಕಮಲ್ ಹಾಸನ್ ಧನ್ಯವಾದ ತಿಳಿಸಿದ್ದಾರೆ. ಸಿನಿಮಾರಂಗದಲ್ಲಿ ಒಬ್ಬರ ಯಶಸ್ಸನ್ನ ಮತ್ತೊಬ್ಬ ಸ್ಟಾರ್ ಸಂಭ್ರಮಿಸೋದು ನೋಡಿ ಫ್ಯಾನ್ಸ್ ಕೂಡ ಥ್ರಿಲ್ ಆಗಿದ್ದಾರೆ.

