ತೆಲುಗು ನಟ ಪದ್ಮಶ್ರೀ ಅಲ್ಲು ರಾಮಲಿಂಗಯ್ಯ ಅವರ ಪತ್ನಿ ಮತ್ತು ಜನಪ್ರಿಯ ನಟ ಅಲ್ಲು ಅರ್ಜುನ್ (Allu Arjun) ಅವರ ಅಜ್ಜಿ ಮೌಂಟ್ ಅಲ್ಲು ಕನಕರತ್ನಂ (94) ಆ.30 ರಂದು ನಿಧನರಾದರು. ಅವರ ಕೊನೆ ಆಸೆಯಂತೆ ಕಣ್ಣುಗಳನ್ನು ದಾನ ಮಾಡಲಾಗಿದ್ದು, ಇದಕ್ಕೆ ಅಳಿಯ ಮೆಗಾಸ್ಟಾರ್ ಚಿರಂಜೀವಿ (Chiranjeevi) ಸಕಲ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ಅತ್ತೆಯ ನಿಧನಕ್ಕೆ ಸಂತಾಪ ಸೂಚಿಸಿರುವ ಚಿರಂಜೀವಿಯವರು, ಅಲ್ಲು ರಾಮಲಿಂಗಯ್ಯ ಅವರ ಪತ್ನಿ ಕನಕರತ್ನಮ್ಮ ಅವರ ನಿಧನವು ಅತ್ಯಂತ ದುಃಖಕರ ವಿಚಾರವಾಗಿದೆ. ಅವರು ನಮ್ಮ ಕುಟುಂಬಗಳಿಗೆ ತೋರಿಸಿದ ಪ್ರೀತಿ, ಧೈರ್ಯ ಮತ್ತು ಜೀವನ ಮೌಲ್ಯಗಳು ನಮಗೆ ಶಾಶ್ವತವಾಗಿ ಸ್ಫೂರ್ತಿಯಾಗಿರುತ್ತವೆ. ಅವರ ಪವಿತ್ರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಅನುಶ್ರೀ ಕಲ್ಯಾಣದಲ್ಲಿ ರಾರಾಜಿಸಿದ ಅಪ್ಪು ಫೋಟೋ
ಅಜ್ಜಿ ನಿಧನರಾದಾ ಸಮಯದಲ್ಲಿ ಅಲ್ಲು ಅರ್ಜುನ್ ಮುಂಬೈನಲ್ಲಿದ್ದರು. ಈ ಸುದ್ದಿ ಕೇಳಿದ ನಂತರ ಅವರು ಮನೆಗೆ ವಾಪಸ್ ಆಗಿದ್ದಾರೆ. ಇನ್ನೂ ರಾಮ್ ಚರಣ್ ಕೂಡ ಸಿನಿಮಾ ಚಿತ್ರೀಕರಣಕ್ಕಾಗಿ ಮೈಸೂರಿಗೆ ಬಂದಿದ್ದರು. ಇಲ್ಲಿಂದ ವಾಪಸ್ ಹೈದರಾಬಾದ್‌ಗೆ ತೆರಳಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಏಕಾಂಗಿ ನಿರೂಪಣೆ ಬಳಿಕ ಹೊಸ ಮನ್ವಂತರಕ್ಕೆ ಕಾಲಿಟ್ಟ ಆ್ಯಂಕರ್ ಅನುಶ್ರೀ