ಇನ್‍ಸ್ಟಾ ಖಾತೆಯಿಂದ ಪತಿಯ ಹೆಸರು ಕೈಬಿಟ್ಟ ನಟ ಚಿರಂಜೀವಿ ಪುತ್ರಿ ಶ್ರೀಜಾ

Public TV
2 Min Read
kalyaan dhev

ಹೈದರಾಬಾದ್: ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಕಿರಿಯ ಪುತ್ರಿ ಶ್ರೀಜಾ, ತಮ್ಮ ಪತಿಯ ಹೆಸರನ್ನು ಇನ್‍ಸ್ಟಾಗ್ರಾಮ್ ಖಾತೆಯಿಂದ ಕೈಬಿಟ್ಟಿದ್ದಾರೆ. ಇವರ ನಡೆ ಸಾಕಷ್ಟು ಅನುಮಾನ ಮೂಡಿಸಿದೆ.

ಶ್ರೀಜಾ ಕಲ್ಯಾಣ್ ಎಂದು ಇದ್ದ ಹೆಸರನ್ನು ಶ್ರೀಜಾ ಕೊನಿಡೇಲಾ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಬದಲಿಸಿಕೊಂಡಿದ್ದು, ನಟ ಕಲ್ಯಾಣ್ ದೇವ್ ಅವರನ್ನು ಅನ್‍ಫಾಲೋ ಮಾಡಿದ್ದಾರೆ. ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂದು ಟಾಲಿವುಡ್ ಅಂಗಳದಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿದೆ.

 

View this post on Instagram

 

A post shared by Kalyaan Dhev (@kalyaan_dhev)

ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದ ಶ್ರೀಜಾ, ಸಿರೀಶ್ ಎಂಬವರ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು. ಪಾಲಕರ ಒಪ್ಪಿಗೆ ಇಲ್ಲದೆ ಶ್ರೀಜಾ ಮದುವೆಯಾಗಿದ್ದರು. ಒಟ್ಟಿನಲ್ಲಿ ಸಿರೀಶ್‍ರನ್ನು ಚಿರಂಜೀವಿ ಕುಟುಂಬ ತುಂಬ ತಿರಸ್ಕಾರದಿಂದ ನೋಡಿತ್ತು. 2008ರಲ್ಲಿ ಶ್ರೀಜಾ ಹೆಣ್ಣು ಮಗುವಿಗೆ ಜನ್ಮ ನೀಡಿದಾಗ ಆಸ್ಪತ್ರೆಗೆ ಚಿರಂಜೀವಿ ಪತ್ನಿ, ರಾಮ್ ಚರಣ್ ತೇಜ ಮಾತ್ರ ಭೇಟಿ ನೀಡಿದ್ದರು. ಒಟ್ಟಿನಲ್ಲಿ ಶ್ರೀಜಾ, ಸಿರೀಶ್ ಬಾಳಿನಲ್ಲಿ ಏನಾಯ್ತೋ ಏನೋ, ಅವರಿಬ್ಬರೂ ದೂರ ದೂರವಾದರು. 2011ರಲ್ಲಿ ದೌರ್ಜನ್ಯ ಕೇಸ್ ದಾಖಲಿಸುವುದರ ಜೊತೆಗೆ ವಿಚ್ಛೇದನ ಕೂಡ ಪಡೆದುಕೊಂಡಿದ್ದರು.

 

View this post on Instagram

 

A post shared by Sreeja (@sreejakonidela)

ಕುಟುಂಬದ ಒಪ್ಪಿಗೆಯ ಮೇರೆಗೆ 2016ರಲ್ಲಿ ಕಲ್ಯಾಣ್ ಅವರನ್ನು ಶ್ರೀಜಾ ಎರಡನೇ ಬಾರಿಗೆ ಮದುವೆಯಾದರು. 2018ರಲ್ಲಿ ಈ ಜೋಡಿಗೆ ಮಗಳು ಹುಟ್ಟಿದ್ದಳು. ಕಲ್ಯಾಣ್ ಜೊತೆಗಿನ ಖುಷಿಯ ಕ್ಷಣಗಳನ್ನು ಶ್ರೀಜಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು. ಈಗ ಶ್ರೀಜಾ ಪತಿಯ ಹೆಸರನ್ನು ಸಮಾಜಿಕ ಜಾಲತಾಣಗಳ ಖಾತೆಯಿಂದ ಕೈ ಬಿಟ್ಟಿರುವುದು ಅನುಮಾನ ಮೂಡಿಸಿದೆ. ಈ ಅನುಮಾನಕ್ಕೆ ಶ್ರೀಜಾ ದಂಪತಿ ಸ್ಪಷ್ಟನೆ ನೀಡಬೇಕಿದೆ.

 

View this post on Instagram

 

A post shared by Sreeja (@sreejakonidela)

ನಟಿ ಸಮಂತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಅಕ್ಕಿನೇನಿ ಹೆಸರನ್ನು ತೆಗೆದು ಹಾಕಿದ್ದರೋ ಆಗಲೇ, ಏನೋ ಸಮಸ್ಯೆಯಾಗಿದೆ ಅಂತ ಅನುಮಾನ ಬಂದಿತ್ತು, ಅದರಂತೆಯೇ ಮೆಗಾಸ್ಟಾರ್ ಚಿರಂಜೀವಿ ಕಿರಿಯ ಪುತ್ರಿ ಶ್ರೀಜಾ ಮಾಡುತ್ತಾರಾ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *