ಮಕ್ಕಳ ಚಿತ್ರದ ಮುಹೂರ್ತಕ್ಕೆ ಸಾಕ್ಷಿಯಾದ ಚಿರಂಜೀವಿ, ಬೋನಿ ಕಪೂರ್

Public TV
2 Min Read
RC 16 4

ನಿನ್ನೆಯಷ್ಟೇ ರಾಮ್ ಚರಣ್ (Ram Charan) ಮತ್ತು ಜಾಹ್ನವಿ ಕಪೂರ್ (Jahnavi Kapoor) ಕಾಂಬಿನೇಷನ್ ನ ಹೊಸ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಈ ಮುಹೂರ್ತ ಸಮಾರಂಭಕ್ಕೆ ರಾಮ್ ಚರಣ್ ತಂದೆ ಚಿರಂಜೀವಿ (Chiranjeevi), ಜಾಹ್ನವಿ ಕಪೂರ್ ತಂದೆ ಬೋನಿ ಕಪೂರ್ (Boney Kapoor) ಸಾಕ್ಷಿಯಾಗಿದ್ದು ವಿಶೇಷವಾಗಿತ್ತು. ತಮ್ಮ ಮಕ್ಕಳಿಗೆ ಈ ಸಿನಿಮಾ ಸಾಕಷ್ಟು ಗೆಲುವು ತಂದು ಕೊಡಲಿ ಎಂದು ಇಬ್ಬರೂ ತಮ್ಮ ತಮ್ಮ ಮಕ್ಕಳಿಗೆ ಹಾರೈಸಿದ್ದಾರೆ.

RC 16 3

ತ್ರಿಬಲ್ ಆರ್ ಸಿನಿಮಾದ ಯಶಸ್ಸಿನ ಬಳಿಕ ರಾಮ್ ಚರಣ್ ಗ್ಲೋಬಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಸದ್ಯ ಚೆರ್ರಿ ಶಂಕರ್ ನಿರ್ದೇಶನದ ಗೇಮ್ ಚೇಂಜರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿರುವ ರಾಮ್ ಚರಣ್ ಬುಚ್ಚಿ ಬಾಬು ಜೊತೆ ಕೈ ಜೋಡಿಸಿದ್ದಾರೆ. ಈ ಚಿತ್ರಕ್ಕೆ RC 16 ಎಂದು ಟೈಟಲ್ ಇಡಲಾಗಿದೆ. ಈ ಹೊಸ ಸಿನಿಮಾದ ಮುಹೂರ್ತ ಸಮಾರಂಭ  ನಿನ್ನೆ ಹೈದ್ರಾಬಾದ್ ನಲ್ಲಿ ನೆರವೇರಿದೆ.

RC 16 2

ನಿರ್ಮಾಪಕ ಅಲ್ಲು ಅರವಿಂದ್ ಅವರು ಬೌಂಡ್ ಸ್ಕ್ರಿಪ್ಟ್ ಅನ್ನು ನಿರ್ದೇಶಕ ಬುಚ್ಚಿ ಬಾಬು ಸನಾ ಅವರಿಗೆ ಹಸ್ತಾಂತರಿಸಿದರು. ರಾಮ್ ಚರಣ್ ಅವರ ಗೇಮ್ ಚೇಂಜರ್ ಚಿತ್ರವನ್ನು ನಿರ್ದೇಶಿಸುತ್ತಿರುವ ಸ್ಟಾರ್ ನಿರ್ದೇಶಕ ಶಂಕರ್ ಅವರು ಬೋನಿ ಕಪೂರ್ ಮತ್ತು ಅನ್ಮೋಲ್ ಶರ್ಮಾ ಕ್ಯಾಮೆರಾ ಚಾಲನೆ ನೀಡಿದರು.  ಮೆಗಾ ಸ್ಟಾರ್ ಚಿರಂಜೀವಿ ಕ್ಲಾಪ್ ಬೋರ್ಡ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು.

RC 16 1

ಇದು ರಾಮ್‌ಚರಣ್ ನಟನೆಯ 16ನೇ ಸಿನಿಮಾ. ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ಬುಚ್ಚಿಬಾಬು ನಿರ್ದೇಶನದ ಇನ್ನು ಹೆಸರಿಡದ ಈ ಚಿತ್ರ ಭಾರೀ ನಿರೀಕ್ಷೆ ಮೂಡಿಸಿದೆ. ಚಿತ್ರದಲ್ಲಿ ರಾಮ್‌ಚರಣ್ ಜೋಡಿಯಾಗಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ. ಎ. ಆರ್ ರೆಹಮಾನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಆರ್.ರತ್ನವೇಲು ಛಾಯಾಗ್ರಹಣ, ಆಂಟೋನಿ ರುಬಿನ್ ಸಂಕಲನ ಚಿತ್ರಕ್ಕಿದೆ. ಚಂದ್ರಬೋಸ್, ಆನಂತಶ್ರೀರಾಮ್, ಬಾಲಾಜಿ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.

ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‌ನಲ್ಲಿ RC16 ಸಿನಿಮಾ ನಿರ್ಮಾಣವಾಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದು ವಿಶೇಷ.

Share This Article