ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಘಟನೆ ಸರ್ಕಾರದ ಪ್ರಾಯೋಜಿತ ಕೊಲೆ: ಅರಗ ಜ್ಞಾನೇಂದ್ರ

Public TV
2 Min Read
araga jnanendra

– ಸಿಎಂ, ಡಿಸಿಎಂ, ಗೃಹ ಸಚಿವರು ಕೂಡಲೇ ರಾಜೀನಾಮೆ ಕೊಡಬೇಕು

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ (Chinnaswamy Stampede) ಘಟನೆ ಸರ್ಕಾರದ ಪ್ರಾಯೋಜಿತ ಕೊಲೆ. ಸಿಎಂ, ಡಿಸಿಎಂ, ಗೃಹ ಸಚಿವರೇ ನೇರ ಹೊಣೆ. ಕೂಡಲೇ ಮೂವರೂ ರಾಜೀನಾಮೆ ಕೊಡಬೇಕು ಎಂದು ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ (Araga Jnanendra) ಆಗ್ರಹಿಸಿದರು.

ಘಟನೆ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಚಿನ್ನಸ್ವಾಮಿ ಘಟನೆಗೆ ರಾಜ್ಯ ಸರ್ಕಾರವೇ ಕಾರಣ. ಸಿಎಂ, ಡಿಸಿಎಂ, ಗೃಹ ಸಚಿವರು ಇದರ ಜವಾಬ್ದಾರಿ ತೆಗೆದುಕೊಳ್ಳಬೇಕು. ಈ ಮೂರೂ ಜನ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಆತುರದ ನಿರ್ಧಾರದಿಂದ ತಪ್ಪು ಮಾಡಿದ್ದೇವೆ, ತಡವಾಗಿ ವಿಜಯೋತ್ಸವ ಆಚರಣೆ ಮಾಡ್ಬೋದಿತ್ತು: ಇಕ್ಬಾಲ್ ಹುಸೇನ್

Chinnaswamy Stampede 1

ನಾನು ಗೃಹ ಸಚಿವ ಇದ್ದಾಗ ಪುನೀತ್ ರಾಜ್‌ಕುಮಾರ್ ನಿಧನರಾಗಿದ್ದಾಗ ನಾವು ಹೇಗೆ ನಿಭಾಯಿಸಿದ್ದೆವು. 20 ಲಕ್ಷ ಜನರನ್ನು ನಾವು ನಿಭಾಯಿಸಿದ್ದೆವು. ಇವರಿಂದ ಚಿನ್ನಸ್ವಾಮಿ ಪ್ರಕರಣ ನಿಭಾಯಿಸಲು ಆಗಿಲ್ಲ. ಪೊಲೀಸರು ಬೇಡ ಅಂದರೂ ಇವರು ಕಾರ್ಯಕ್ರಮ ಮಾಡಿದರು. ನಿಮ್ಮ ಮಕ್ಕಳು, ಮೊಮ್ಮಕ್ಕಳು ಫೋಟೋ ಸೆಷನ್‌ಗೆ ಈ ಕಾರ್ಯಕ್ರಮ ಮಾಡಿದ್ರಾ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ – ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಬಾಂಬ್‌

ಈ ಘಟನೆಗೂ ಪ್ರಯಾಗ್ ರಾಜ್ ಘಟನೆಗೂ ಹೋಲಿಕೆ ಸರಿಯಲ್ಲ. ಈ ಪ್ರಕರಣದಲ್ಲಿ ಎ1 ಸಿಎಂ, ಎ2 ಡಿಸಿಎಂ, ಎ3 ಗೃಹ ಸಚಿವರು. ಇದು ಸರ್ಕಾರದ ಪ್ರಯೋಜಿತ ಕೊಲೆ. 11 ಜನರನ್ನು ಈ ಸರ್ಕಾರ ಕೊಲೆ ಮಾಡಿದೆ. ಇವರ ತಪ್ಪು ಮುಚ್ಚಿಕೊಳ್ಳೋಕೆ ಪೊಲೀಸರನ್ನ ಅಮಾನತು ಮಾಡಿದ್ದೀರಾ. ಈ ಘಟನೆಗೆ ಸಿಎಂ, ಡಿಸಿಎಂ, ಗೃಹ ಸಚಿವರು ಬೆಲೆ ತೆರಬೇಕು. ವಿಪಕ್ಷವಾಗಿ ನಾವು ಮಾತಾಡಿದ್ರೆ ಅದನ್ನು ರಾಜಕೀಯ ಅಂತೀರಾ. ನೀವು ಮಾಡಿದ್ದೆಲ್ಲ ಸರಿ ಅಂತ ನಾವು ಬಿಡಬೇಕಾ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಗೋವಿಂದರಾಜ್ ವಿರುದ್ಧ ಕ್ರಮ – ಅಷ್ಟಾದ್ರೂ ಜ್ಞಾನೋದಯ ಆಗಿದ್ದಕ್ಕೆ ಸರ್ಕಾರಕ್ಕೆ ಅಭಿನಂದನೆ: ಹೆಚ್‍ಡಿಕೆ ವ್ಯಂಗ್ಯ

ರಾಜ್ಯಪಾಲರು, ಸಿಎಂ,ಡಿಸಿಎಂ ಇದ್ದ ಕಾರ್ಯಕ್ರಮದಲ್ಲಿ ಪ್ರೊಟೋಕಾಲ್ ಇರಲಿಲ್ಲ. ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಇವರು ಬ್ಯುಸಿ ಆಗಿದ್ದರು. ಘಟನೆ ಆದ ಕೂಡಲೇ ಇವರು ರಾಜೀನಾಮೆ ಕೊಟ್ಟು ಜನರ ಕ್ಷಮೆ ಕೇಳಬೇಕಿತ್ತು. ಅಧಿಕಾರಿಗಳು ಬಂದೋಬಸ್ತ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರೂ ಇವರು ಕಾರ್ಯಕ್ರಮ ಮಾಡಿದ್ದಾರೆ ಎಂದು ಆರೋಪ ಮಾಡಿದರು. ಇದನ್ನೂ ಓದಿ: ಬೆಂಗಳೂರು | ಕಾಲ್ತುಳಿತದಲ್ಲಿ 11 ಜನ ಸಾವು ಪ್ರಕರಣ – ಸಿಎಂ ವಿರುದ್ಧ ರಾಜ್ಯಪಾಲರಿಗೆ ದೂರು

ಪಹಲ್ಗಾಮ್ ಘಟನೆ ಬಗ್ಗೆ ಭದ್ರತಾ ಲೋಪ ಎಂದಿದ್ದರು. ಅದಕ್ಕೂ ಇದಕ್ಕೂ ಹೋಲಿಗೆ ಮಾಡಬಾರದಿತ್ತು. ಕಾರ್ಯಕ್ರಮ ಮುಂದೂಡುವ ಅವಕಾಶ ಇತ್ತು. ಕಾರ್ಯಕ್ರಮಕ್ಕೆ ನೀವೆ ಕರೆದಿದ್ದು. ಡಿಕೆ ಶಿವಕುಮಾರ್ ಗೃಹ ಇಲಾಖೆಯ ಮಂತ್ರಿಯನ್ನ ನಿರ್ಲಕ್ಷ್ಯ ಮಾಡಿದ್ದಾರೆ. ಅವರವರ ರಾಜಕೀಯಕ್ಕೆ ಜನ ಬಲಿಯಾಗಿದ್ದಾರೆ. ಬೆಂಗಳೂರಲ್ಲಿ ನನ್ನನ್ನ ಕೇಳದೆ ಏನು ಮಾಡಬಾರದು ಎಂಬ ಮನಸ್ಥಿತಿ ಡಿಕೆ ಶಿವಕುಮಾರ್ ಅವರದ್ದು. ಚಿನ್ನಸ್ವಾಮಿ ಘಟನೆ ತನಿಖೆಗೆ ನ್ಯಾ.ಕುನ್ಹಾ ನೇಮಕಕ್ಕೂ ವಿರೋಧ ಮಾಡಿದ ಅವರು, ಕುನ್ಹಾ ಒಬ್ಬರೇ ಅಲ್ಲಾ ನಿವೃತ್ತ ನ್ಯಾಯಾಧೀಶರು ಇರೋದು. ಬಹಳ ಜನ ರಿಟೈರ್ಡ್ ಜಡ್ಜ್ ಇದ್ದಾರೆ. ಹಾಲಿ ಜಡ್ಜ್ರಿಂದ ಪ್ರಕರಣ ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಬೆಂಗಳೂರು ಕಾಲ್ತುಳಿದಲ್ಲಿ RCB ಅಭಿಮಾನಿ ಸಾವು – ಮಗನ ಸಮಾಧಿ ಮೇಲೆ ಮಲಗಿ ತಂದೆ ಗೋಳಾಟ

Share This Article