ಬೀಜಿಂಗ್: ವೈನ್ ತಯಾರಿಸಲು ಆನ್‍ಲೈನ್‍ನಲ್ಲಿ ಖರೀದಿಸಿದ್ದ ಹಾವು ಕಚ್ಚಿ ಮಹಿಳೆ ಸಾವನ್ನಪ್ಪಿದ್ದ ಘಟನೆ ಚೀನಾದಲ್ಲಿ ನಡೆದಿದೆ.
21 ವರ್ಷದ ಮಹಿಳೆ ಆ ಹಾವನ್ನು ಇ-ಕಾಮರ್ಸ್ ಕಂಪನಿಯ ಜುಹಾನ್ ಜುಹಾನ್‍ನಿಂದ ಖರೀದಿಸಿದ್ದಳು. ಹಾವಿನ ವಿಷದಿಂದ ಮಹಿಳೆ ವೈನ್ ಮಾಡಲು ನಿರ್ಧರಿಸಿದ್ದಳು. ಹಾಗಾಗಿ ಆನ್‍ಲೈನ್‍ನಲ್ಲಿ ಹಾವನ್ನು ಆರ್ಡರ್ ಮಾಡಿದ್ದಳು. ಬಳಿಕ ಕೊರಿಯರ್ ಮೂಲಕ ಮಹಿಳೆಯ ಮನೆ ಬಾಗಿಲಿಗೆ ಹಾವು ಬಂದಿದೆ. ಈ ಬಾಕ್ಸ್ ನಲ್ಲಿ ವಿಷಪೂರಿತ ಹಾವು ಇರುವ ಬಗ್ಗೆ ಕೊರಿಯರ್ ನವರಿಗೂ ಗೊತ್ತಿರಲಿಲ್ಲ.
Advertisement
ಹಾವಿನ ವಿಷದಿಂದ ವೈನ್ ಮಾಡುವ ಆಸೆ ಹೊಂದಿದ್ದ ಮಹಿಳೆಗೆ ವಿಷಕಾರಿ ಹಾವು ಕಚ್ಚಿದೆ. ಬಳಿಕ ಆ ಹಾವು ಮಹಿಳೆಯ ಮನೆಯ ಹತ್ತಿರ ಪತ್ತೆಯಾಗಿದೆ. ಕಚ್ಚಿದ ಬಳಿಕ ಹಾವು ಅದು ಕಾಡಿನತ್ತ ಹೋಗಿದೆ ಎಂದು ವರದಿಯಾಗಿದೆ.
Advertisement
ನನ್ನ ಮಗಳು ಪಾರಂಪರಿಕವಾಗಿ ಔಷಧಿಯ ವೈನ್ ತಯಾರಿಸಲು ನಿರ್ಧರಿಸಿದ್ದಳು. ಈ ಔಷಧಿಯನ್ನು ಸ್ನೇಕ್ ವೈನ್ ಎಂದು ಕರೆಯುತ್ತಾರೆ. ಹಲವು ಕಾಯಿಲೆಗಳನ್ನು ಗುಣಪಡಿಸುವ ಸಾಮಥ್ರ್ಯ ಇರುವ ಕಾರಣ ಸ್ನೇಕ್ ವೈನ್ ತಯಾರಿಸಲು ಮುಂದಾಗಿದ್ದಳು ಎಂದು ಮೃತ ಮಹಿಳೆಯ ತಾಯಿ ಹೇಳಿದ್ದಾರೆ.