ಬೀಜಿಂಗ್: ಸಾಮಾನ್ಯವಾಗಿ ಅಪ್ಪಿಕೊಳ್ಳುವುದು ಅಥವಾ ಆಲಿಂಗನ ಮಾಡಿಕೊಳ್ಳುವುದು ಎಂದರೆ ಇಬ್ಬರ ಮಧ್ಯೆ ಇರುವ ಉತ್ತಮ ಬಾಂಧವ್ಯವನ್ನು ತೋರಿಸುತ್ತದೆ. ಆದರೆ ಚೀನಾದಲ್ಲೊಂದು ಅಚ್ಚರಿಯ ಘಟನೆ ನಡೆದಿರುವುದಾಗಿ ವರದಿಯಾಗಿದೆ.
ಹೌದು. ಸಹೋದ್ಯೋಗಿ ನನ್ನನ್ನು ಬಿಗಿಯಾಗಿ ತಬ್ಬಿಕೊಂಡಿದ್ದರಿಂದ ನನ್ನ ಪಕ್ಕೆಲುಬುಗಳು ಮುರಿದು ಹೋಗಿವೆ ಎಂದು ಮಹಿಳೆಯೊಬ್ಬಳು ಮೊಕದ್ದಮೆ ಹೂಡಿದ್ದಾಳೆ. ಈ ಘಟನೆಯು ಮೇ 2021ರಲ್ಲಿ ಯುಯಾಂಗ್ ನಗರದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಕಚೇರಿಯಲ್ಲಿ ಮಹಿಳೆ ತನ್ನ ಸಹೋದ್ಯೋಗಿಯೊಂದಿಗೆ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದೆ. ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ – ಕೊಡಲಿಯಿಂದ ಪತ್ನಿ ಹತ್ಯೆಗೈದ ಪತಿ
Advertisement
Advertisement
ಮಾತನಾಡುತ್ತಿದ್ದ ಸಂದರ್ಭದಲ್ಲಿ ಸಹೋದ್ಯೋಗಿ ಮಹಿಳೆಯನ್ನು ಗಟ್ಟಿಯಾಗಿ ತಬ್ಬಿಕೊಂಡಿದ್ದಾನೆ. ಈ ವೇಳೆ ಮಹಿಳೆ ನೋವಿನಿಂದ ಕಿರುಚಾಡಿದ್ದಾಳೆ. ಇದಾದ ಒಂದೆರಡು ದಿನಗಳ ಬಳಿಕ ಮಹಿಳೆಗೆ ಎದೆನೋವು ಕಾಣಿಸಿಕೊಂಡಿದೆ. ಆದರೆ ಮಹಿಳೆ ಈ ವಿಚಾರವನ್ನು ಯಾರ ಜೊತೆನೂ ಹೇಳಿಕೊಳ್ಳದೆ ಎದೆಗೆ ಸ್ವಲ್ಪ ಬಿಸಿ ಎಣ್ಣೆ ಹಚ್ಚಿ ಮಲಗುತ್ತಿದ್ದಳು. ಆದರೆ ದಿನಗಳೆದಂತೆ ಆಕೆಗೆ ಎದೆನೋವು ಹೆಚ್ಚಾಗುತ್ತಾ ಹೋಯಿತು. ತೀವ್ರವಾದ ನೋವಿನಿಂದ ಬಳಲುತ್ತಿದ್ದ ಮಹಿಳೆ ವಾರದ ಬಳಿಕ ಆಸ್ಪತ್ರೆಗೆ ತೆರಳಿದಳು. ಆಗ ವೈದ್ಯರು ಆಕೆಯನ್ನು ಪರೀಕ್ಷೆ ಮಾಡಿ ಎಕ್ಸ್ ರೇ ತೆಗೆಯುವಂತೆ ಹೇಳಿದ್ದಾರೆ. ಅಂತೆಯೇ ಎಕ್ಸ್ ರೇ ತೆಗೆದಾಗ ಮೂರು ಪಕ್ಕೆಲುಬುಗಳು ಮುರಿದಿರುವುದು ಬಯಲಾಯಿತು.
Advertisement
Advertisement
ಬಲಭಾಗದಲ್ಲಿ ಎರಡು ಮತ್ತು ಎಡಭಾಗದಲ್ಲಿ ಒಂದು ಪಕ್ಕೆಲುಬಿಗೆ ಹಾನಿಗೊಳಗಾಗಿತ್ತು. ಈ ವಿಚಾರ ತಿಳಿಯುತ್ತಿದ್ದಂತೆಯೇ ಅವಳು ಕೆಲಸದಿಂದ ಬಿಡುವು ತೆಗೆದುಕೊಳ್ಳಬೇಕಾಯಿತು. ಅಲ್ಲದೆ ಈ ನೋವು ವಾಸಿಯಾಗಲು ಸಾಕಷ್ಟು ಖರ್ಚು ಕೂಡ ಮಾಡಬೇಕಾದ ಅನಿವಾರ್ಯತೆ ಎದುರಾಯಿತು. ಹೀಗಾಗಿ ಮಹಿಳೆ ತನ್ನ ಪತಿ ಜೊತೆ ಸಹೋದ್ಯೋಗಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾಳೆ. ಆದರೆ ಸಹೋದ್ಯೋಗಿ ಯಾವುದೇ ಒಪ್ಪಂದಕ್ಕೆ ಹೂ ಅನ್ನಲಿಲ್ಲ. ಅಲ್ಲದೆ ತನ್ನ ಸ್ನೇಹಪೂರ್ವಕ ‘ಅಪ್ಪುಗೆಯಿಂದ ಪಕ್ಕೆಲುಬು ಮುರಿದಿದೆ’ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದಾನೆ.
ಸಹೋದ್ಯೋಗಿಯ ಈ ಮಾತು ಕೇಳಿದ ಮಹಿಳೆ, ಕೊನೆಗೆ ಆತನ ವಿರುದ್ಧ ಮೊಕದ್ದಮೆ ಹೂಡಿದ್ದಾಳೆ. ಅಲ್ಲದೆ ತನ್ನ ಆರ್ಥಿಕ ನಷ್ಟಕ್ಕೆ ಪರಿಹಾರ ನೀಡುವಂತೆ ಕೇಳಿಕೊಂಡಿದ್ದಾಳೆ. ಇತ್ತ ನ್ಯಾಯಾಲಯ ಕೂಡ ಸಾಕ್ಷಿ ಕೇಳಿದ್ದರಿಂದ ಮಹಿಳೆಗೆ ಹಿನ್ನಡೆಯಾಗಿದೆ. ಆದರೆ ಸಹೋದ್ಯೋಗಿ ಮಹಿಳೆಗೆ 10,000 ಯುವಾನ್ (1,17,164 ರೂ.) ಪರಿಹಾರವಾಗಿ ಪಾವತಿಸಲು ಆದೇಶ ನೀಡಿದೆ.