ಬೀಜಿಂಗ್: ಓದೋ ವಯಸ್ಸಲ್ಲಿ ಪ್ರೀತಿ ಪ್ರೇಮ ಅಂದ್ರೆ ಭಾರತದಲ್ಲಿ ಪೋಷಕರು ಬೆಂಡೆತ್ತುತ್ತಾರೆ. ಶಾಲೆ- ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿಯೂ ಪ್ರೇಮಿಗಳನ್ನು ಕಂಡರೆ ಬಿಸಿ ಮುಟ್ಟಿಸುತ್ತಾರೆ. ಇನ್ನೂ ಮದುವೆ ಅಂದ್ರೆ ಬಿಡ್ತಾರಾ? ಆದ್ರೆ ಚೀನಾದಲ್ಲಿ (China) ಈ ಪರಿಸ್ಥಿತಿಗೆ ವಿರುದ್ಧವಾಗಿದೆ. ಈ ಹಿಂದೆ ವಿದ್ಯಾರ್ಥಿಗಳು ಪ್ರೀತಿಯಲ್ಲಿ ಬೀಳಲು ರಜೆ ನೀಡುವ ಕಾರ್ಯಕ್ರಮ ಅನುಷ್ಟಾನಕ್ಕೆ ತಂದಿದ್ದ ಚೀನಾ ಈಗ ಉತ್ತಮ ಸಂಗಾತಿಯನ್ನ ಹುಡುಕಿಕೊಂಡು ಮದುವೆಯಾಗೋದು (Marriage), ಮ್ಯಾಟ್ರಿಮೋನಿಗಳಂತಹ ಕಂಪನಿ ಸ್ಥಾಪಿಸಿ ಮದುವೆ ಮಾಡಿಸುವುದು ಹೇಗೆ? ಎಂಬುದನ್ನು ಕಾಲೇಜು ಹಂತದಲ್ಲೇ ಕಲಿಸಿಕೊಡುವ ಕಾರ್ಯಕ್ರಮವನ್ನ ಪರಿಚಯಿಸಿದೆ.ʼ
Advertisement
ಚೀನಾದಲ್ಲಿ ಯುವಸಮೂಹದ ಸಂಖ್ಯೆ ಇಳಿಕೆಯಾಗುತ್ತಿದ್ದು, ವೃದ್ಧರ ಸಂಖ್ಯೆ ಹೆಚ್ಚುತ್ತಿದೆ ಎಂದು ವರದಿಗಳಲ್ಲಿ ಉಲ್ಲೇಖವಾಗಿದೆ. ಇದರಿಂದಾಗಿ ಇತ್ತೀಚೆಗೆ ಚೀನಾ ತನ್ನ ಒಂದೇ ಮಕ್ಕಳ ನೀತಿಯನ್ನು ಸಡಿಲಗೊಳಿಸಿ, ಮೂರು ಮಕ್ಕಳನ್ನು ಹೊಂದಲು ಅನುಮತಿಸಿತ್ತು. ಆದಾಗ್ಯೂ ಜನಸಂಖ್ಯಾ ಕುಸಿತ ಕಳವಳಕಾರಿಯಾಗಿರುವುದರಿಂದ ಜನನ ಪ್ರಮಾಣ ಹೆಚ್ಚಿಸಲು ರಾಜಕೀಯ ಸಲಹೆಗಾರರು ಸರ್ಕಾರಕ್ಕೆ ತರಹೇವಾರಿ ಶಿಫಾರಸುಗಳನ್ನು ನೀಡುತ್ತಿದ್ದಾರೆ. ಹೀಗಾಗಿ ಚೀನಾ ಕಾಲೇಜು ಹಂತದಲ್ಲೇ ಮದುವೆ ಕಾರ್ಯಕ್ರಮಗಳ ಬಗ್ಗೆ ತಿಳಿಸಿಕೊಡಲು ಹೊಸ ಪ್ಲ್ಯಾನ್ ಮಾಡಿದೆ. ಇದನ್ನೂ ಓದಿ: Madhya Pradesh: ಧಾರ್ಮಿಕ ಕಾರ್ಯಕ್ರಮದಲ್ಲಿ ದೇವಸ್ಥಾನದ ಗೋಡೆ ಕುಸಿದು 9 ಮಕ್ಕಳ ದುರ್ಮರಣ
Advertisement
Advertisement
ಸಕಾರಾತ್ಮಕ ಮದುವೆ ಮತ್ತು ಕುಟುಂಬ ಸಂಸ್ಕೃತಿಯನ್ನು ಉತ್ತೇಜಿಸುವ ಪ್ರಯತ್ನದ ಭಾಗವಾಗಿ ಚೀನಾದ ಕೇಂದ್ರೀಯ ವಿಶ್ವವಿದ್ಯಾನಿಲಯವು ಹೊಸ ಪದವಿ ಪೂರ್ವ ಕಾರ್ಯಕ್ರಮವೊಂದನ್ನು ಪರಿಚಯಿಸಿದೆ, ʻಮದುವೆ ಸೇವೆಗಳು ಮತ್ತು ನಿರ್ವಹಣೆʼ ಹೆಸರಿನ ಕಾರ್ಯಕ್ರಮ ಇದಾಗಿದೆ. ಕುಸಿಯುತ್ತಿರುವ ಜನನ ದರಕ್ಕೆ ವಿವಾಹ ಪ್ರಮಾಣ ಕಡಿಮೆಯಾಗುತ್ತಿರುವುದು ಕಾರಣ ಎಂಬುದುನ್ನು ಮನಗಂಡಿರುವ ಚೀನಾ ಕಾಲೇಜು ಹಂತದಲ್ಲೇ ಮದುವೆ ಕಾರ್ಯಕ್ರಮಗಳ ಬಗ್ಗೆ ಪರಿಚಯಿಸಲು ಮುಂದಾಗಿದೆ.
Advertisement
ಇದೇ ಸೆಪ್ಟಂಬರ್‌ನಿಂದ ಬೀಜಿಂಗ್ ಸಂಸ್ಥೆಯಲ್ಲಿ ಈ ಪದವಿ ಪೂರ್ವ ಕೋರ್ಸ್ ಪ್ರಾರಂಭವಾಗಲಿದೆ. ವಿವಾಹ ಸಂಬಂಧಿತ ಯೋಜನೆಗಳು, ಸಂಸ್ಕೃತಿ ಅಭಿವೃದ್ಧಿಪಡಿಸಲು ವೃತ್ತಿಪರರನ್ನು ಬೆಳೆಸುವ ಉದ್ದೇಶ ಇದಾಗಿದೆ. ಈ ಕೋರ್ಸ್ ಗಳಿಗೆ ಹೆಚ್ಚಿನ ವಿದ್ಯಾರ್ಥಿಗಳನ್ನು ನೇಮಿಸಿಕೊಳ್ಳುವುದಾಗಿ ವಿಶ್ವವಿದ್ಯಾನಿಲಯದ ಉಪಾಧ್ಯಕ್ಷ ಝಾವೊ ಹಾಂಗ್‌ಗಾಂಗ್ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ: Dengue Alert: ಒಂದು ವರ್ಷದೊಳಗಿನ 10 ಮಕ್ಕಳಿಗೆ ಡೆಂಗ್ಯೂ – ಪ್ರಕರಣಗಳ ಸಂಖ್ಯೆ 19 ಸಾವಿರಕ್ಕೆ ಏರಿಕೆ
ಏನಿದು ಕೋರ್ಸ್?
* ಈ ಕೋರ್ಟ್ ಮದುವೆ ಸಂಬಂಧಿತ ಉದ್ಯಮ (ಮ್ಯಾಟ್ರಿಮೋನಿ ಮಾದರಿ) ಹಾಗೂ ಕೌಟುಂಬಿಕ ಸಂಸ್ಕೃತಿಯನ್ನು ಅಭಿವೃದ್ಧಿ ಪಡಿಸುವ ಉದ್ದೇಶ ಹೊಂದಿದೆ.
* ಕೌಟುಂಬಿಕ ಸಮಾಲೋಚನೆ, ಉನ್ನತ ಮಟ್ಟದ ವಿವಾಹ ಯೋಜನೆ ಮತ್ತು ಮ್ಯಾಚ್‌ಮೇಕಿಂಗ್ ಅಭಿವೃದ್ಧಿಯಂತಹ ವಿಷಯಗಳನ್ನು ಒಳಗೊಂಡಿರುತ್ತದೆ.
* ಮ್ಯಾಚ್‌ಮೇಕಿಂಗ್ ಏಜೆನ್ಸಿಗಳು, ವಿವಾಹ ಸೇವಾ ಕಂಪನಿಗಳು ಮತ್ತು ಮದುವೆ, ಕುಟುಂಬ ಸಮಾಲೋಚನೆ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ ಹೊಂದಲು ಸಾಧ್ಯವಾಗುತ್ತದೆ ಎಂದು ವರದಿಯಾಗಿದೆ.