ಮಂಗಳೂರು: ನಗರದಲ್ಲಿ ಕೊರೋನಾ ವೈರಸ್ ಬಗ್ಗೆ ಹೈಅಲರ್ಟ್ ಘೋಷಣೆ ಮಾಡಿರುವ ಜಿಲ್ಲಾಡಳಿತ ಎಲ್ಲಾ ರೀತಿಯ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಜಿಲ್ಲೆಗೆ ಈ ವೈರಲ್ ಹರಡದಂತೆ ಕ್ರಮಕೈಗೊಳ್ಳಲಾಗಿದೆ. ಹೀಗಾಗಿ ಮಂಗಳೂರು ನಗರ ಪ್ರವೇಶಿಸಬೇಕಿದ್ದ ಚೀನಾ ಪ್ರವಾಸಿಗರಿಗೆ ನಗರ ಪ್ರವೇಶಿಸದಂತೆ ಅಧಿಕಾರಿಗಳು ನಿಷೇಧಿಸಿದ್ದಾರೆ.
Advertisement
ವಿದೇಶದಿಂದ ಮಂಗಳೂರಿಗೆ ಆಗಮಿಸಿದ್ದ 1,800 ವಿದೇಶಿ ಪ್ರವಾಸಿಗರಿದ್ದ ಕೋಸ್ಟಾ ವಿಕ್ಟೋರಿಯಾ ಎಂಬ ಹಡಗು ಮಂಗಳೂರಿನ ಪಣಂಬೂರಿನಲ್ಲಿರುವ ಎನ್ಎಂಪಿಟಿ ಬಂದರಿಗೆ ಬಂದಿತ್ತು. ಈ ಪ್ರವಾಸಿಗರ ಪೈಕಿ ಮೂವರು ಚೀನಿ ಪ್ರವಾಸಿಗರನ್ನು ಬಿಟ್ಟು ಉಳಿದ ಪ್ರವಾಸಿಗರಿಗೆ ನವ ಮಂಗಳೂರು ಬಂದರಿನಲ್ಲಿ ಹಡಗಿನಿಂದ ಇಳಿಯಲು ಅನುಮತಿ ನೀಡಲಾಗಿತ್ತು.
Advertisement
Advertisement
ಬಳಿಕ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಗೆ ನವ ಮಂಗಳೂರು ಬಂದರು ಅಧಿಕಾರಿಗಳು ಮಾಹಿತಿ ನೀಡಿದ್ದು, ಸಚಿವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ, ಆರೋಗ್ಯಾಧಿಕಾರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಜಿಲ್ಲೆಗೆ ಚೀನೀ ಪ್ರವಾಸಿಗರು ಪ್ರವೇಶಿಸದಂತೆ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಇದನ್ನೂ ಓದಿ: 10 ದಿನದಲ್ಲಿ 1 ಸಾವಿರ ಬೆಡ್ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಗೊಂಡಿದ್ದು ಹೇಗೆ? ಚೀನಾದ ಜೈವಿಕ ಅಸ್ತ್ರ ಕೊರೋನಾ?
Advertisement