ಇಸ್ಲಾಮಾಬಾದ್: ಚೀನಾದ ಯುದ್ಧನೌಕೆಗಳು (Chinese Warships), ಜಲಾಂತರ್ಗಾಮಿಗಳು ಮತ್ತು ಸೇನಾ ಬೆಂಬಲ ವ್ಯವಸ್ಥೆಯು ಪಾಕಿಸ್ತಾನದ ಕರಾಚಿ ಬಂದರಿನಲ್ಲಿ (Karachi Port) ಬೀಡಿಬಿಟ್ಟಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.
Vessel YANGCHENGHU a suspected PLA NAVY TYPE 926 Submarine Support Vessel, is currently approaching Karachi, it was tracked from China’s Hainan Naval base & is likely en-route to Pakistan for the upcoming China-Pakistan Joint Naval Drills pic.twitter.com/04vJQY4reF
— Damien Symon (@detresfa_) November 8, 2023
Advertisement
ಮಿಲಿಟರಿ ತರಬೇತಿ ನೆಪದಲ್ಲಿ ಚೀನಾ ತನ್ನ ಜಲಾಂತರ್ಗಾಮಿ ಮತ್ತು ಯುದ್ಧನೌಕೆಗಳನ್ನು ಪಾಕಿಸ್ತಾನದ ಕರಾಚಿ ಬಂದರಲ್ಲಿ ಬೀಡುಬಿಟ್ಟಿದೆ. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೆ ಸಂಬಂಧಿಸಿದ ಸೆಟಲೈಟ್ (ಉಪಗ್ರಹ) ಆಧಾರಿತ ಚಿತ್ರಗಳನ್ನು ಜಾಲತಾಣದಲ್ಲಿ ಹರಿದಾಡುತ್ತಿವೆ. ಸದ್ಯ ಭಾರತ-ಚೀನಾ (India-China) ನಡುವೆ ಅರುಣಾಚಲ ಪ್ರದೇಶದ ಗಡಿವಿವಾದದ ನಡುವೆ ಕರಾಚಿಯಲ್ಲಿ ಚೀನಾದ ಯುದ್ಧನೌಕೆಗಳು ಕಂಡುಬಂದಿರುವುದು ಅನುಮಾನ ಮೂಡಿಸಿದೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ದೀಪದಿಂದ ಎಣ್ಣೆ ಕದ್ದ ಮಕ್ಕಳು; ವೀಡಿಯೋ ಹಂಚಿಕೊಂಡ ಅಖಿಲೇಶ್ ಯಾದವ್
Advertisement
Advertisement
ಸೀ ಗಾರ್ಡಿಯನ್ -3 (Sea Guardian-3) ಸೇನಾ ಎಕ್ಸರ್‌ಸೈಸ್, ಹಿಂದೂ ಮಹಾಸಾಗರದಲ್ಲಿ ಚೀನಾ ತನ್ನ ಕಡಲ ಅಸ್ತಿತ್ವವನ್ನು ಗಮನಾರ್ಹವಾಗಿ ವಿಸ್ತರಿಸಿದ ಸಮಯದಲ್ಲಿ ಬಂದಿವೆ. ಇದು ಆಫ್ರಿಕಾದ ಹಾರ್ನ್‌ನಲ್ಲಿರುವ ಜಿಬೌಟಿಯಲ್ಲಿ ಪ್ರಮುಖ ನೆಲೆಯ ನಿರ್ಮಾಣವನ್ನೂ ಒಳಗೊಂಡಿದೆ. ಜೊತೆಗೆ ಪಾಕಿಸ್ತಾನ ನೌಕಾಪಡೆಗೆ ಇತ್ತೀಚೆಗೆ 4 ಟೈಪ್-054 A/P ಫ್ರಿಗೇಟ್‌ಗಳನ್ನು ಪ್ರಾದೇಶಿಕ ನೌಕಾಪಡೆಗಳಿಗೆ ಮಾರಾಟ ಮಾಡಿದ್ದೂ ಸಹ ಇದರಲ್ಲೇ ಸೇರಿದೆ.
Advertisement
ಕಳೆದ ವರ್ಷದ ಹಿಂದೂ ಮಹಾಸಾಗರದಲ್ಲಿ ಹಲವಾರು ಚೀನಿ ಕಣ್ಗಾವಲು ಮತ್ತು ಸಾಗರ ಸಮೀಕ್ಷೆ ಹಡಗುಗಳು ಪತ್ತೆಯಾಗಿದ್ದವು. ಈ ತಿಂಗಳ ಆರಂಭದಲ್ಲಿ, ಚೀನಾದ ಸಾಗರ ಸಂಶೋಧನಾ ಹಡಗು, ಶಿಯಾನ್ 6 ಕೊಲಂಬೊದಲ್ಲಿ ಬಂದಿಳಿದಿತ್ತು. ಆದರೀಗ ವ್ಯಾಪಕವಾದ ಜಲಾಂತರ್ಗಾಮಿ ಕಾರ್ಯಾಚರಣೆಗಳನ್ನ ಸಕ್ರಿಯಗೊಳಿಸಲು ಬಂಗಾಳ ಕೊಲ್ಲಿ ಸೇರಿದಂತೆ ಹಿಂದೂ ಮಹಾಸಾಗರವನ್ನೂ ಚೀನಾ ಬಳಸಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಸೇನೆ ಗಡಿಯಲ್ಲಿ ಹಿಮಾಲಯದಂತೆ ಅಚಲವಾಗಿ ನಿಂತಿರುವವರೆಗೂ ಭಾರತ ಸುರಕ್ಷಿತ: ಮೋದಿ
ಕರಾಚಿಯಲ್ಲಿ ಬೀಡು ಬಿಟ್ಟಿರುವ ಯುದ್ಧ ಸಾಧನಗಳ ಪೈಕಿ ಚೀನಾದ ಟೈಪ್-039 ಡೀಸೆಲ್-ಎಲೆಕ್ಟ್ರಿಕ್ ಜಲಾಂತರ್ಗಾಮಿ ನೌಕೆ ಕೂಡ ಇದೆ. ಈ ಜಲಾಂತರ್ಗಾಮಿ ನೌಕೆಯು ನೌಕಾ ರಹಸ್ಯಗಳನ್ನು ನಿಕಟವಾಗಿ ಊಹಿಸಬಲ್ಲದು. ಅರಬ್ಬಿ ಸಮುದ್ರದಲ್ಲಿ ಹಡಗುಗಳ ಉಪಸ್ಥಿತಿಯು, ತಮ್ಮ ಹೋಮ್‌ಪೋರ್ಟ್‌ಗಳಿಂದ ಹಲವಾರು ಸಾವಿರ ಕಿಮೀ ದೂರದಲ್ಲಿರುವ ನೌಕಾ ಆಸ್ತಿಗಳನ್ನು ನಿಯಂತ್ರಿಸಲು, ಬೀಜಿಂಗ್‌ನ ವಿಶ್ವಾಸ ವೃದ್ಧಿಸಲು ಈ ಜಲಾಂತರ್ಗಾಮಿ ಕಾರಣವಾಗಿದೆ. 2013ರಿಂದೀಚೆಗೆ ಚೀನಾ ಸೇನೆಯು 8 ಬಾರಿ ಹಿಂದೂ ಮಹಾಸಾಗರದಲ್ಲಿ ಜಲಾಂತರ್ಗಾಮಿಗಳನ್ನು ನಿಯೋಜಿಸಿದೆ ಎಂದು ವರದಿಯಾಗಿದೆ.
2015ರ ಏಪ್ರಿಲ್‌ನಲ್ಲಿ ಪಾಕಿಸ್ತಾನ ಸರ್ಕಾರವು 5 ಶತಕೋಟಿ ಡಾಲರ್ ಮೌಲ್ಯದ ಒಪ್ಪಂದಕ್ಕೆ ಟೈಪ್-039 ಜಲಾಂತರ್ಗಾಮಿ ನೌಕೆಗಳ 8 ರೂಪಾಂತರಗಳನ್ನು ಖರೀದಿಸಲು ಒಪ್ಪಿಕೊಂಡಿತ್ತು. ಸದ್ಯ 4 ಜಲಾಂತರ್ಗಾಮಿ ನೌಕೆಗಳನ್ನು ಕರಾಚಿ ಶಿಪ್‌ಯಾರ್ಡ್ ಮತ್ತು ಇಂಜಿನಿಯರಿಂಗ್ ವರ್ಕ್ಸ್ ನಿರ್ಮಿಸುವ ಸಾಧ್ಯತೆಗಳಿವೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಹೋಟೆಲಿನಲ್ಲಿ ನಾಲ್ವರು ಕಾಮುಕರಿಂದ ಗ್ಯಾಂಗ್‌ರೇಪ್ – ಸಹಾಯಕ್ಕಾಗಿ ಕಣ್ಣೀರಿಟ್ಟ ಸಂತ್ರಸ್ತೆ, ಐವರು ಅರೆಸ್ಟ್