ಮಕ್ಕಳು ಯಾವಾಗಲೂ ರಸ್ತೆ ಬದಿ ಸಿಗುವ ಚೈನೀಸ್ ಅಡುಗೆಗಳಿಗೆ ಹಠ ಹಿಡಿಯೋದು ಸಹಜ. ಆದರೆ ಆ ಆಹಾರಗಳ ಸ್ವಚ್ಛತೆ ಬಗ್ಗೆ ಸವಾಲು ಮೂಡುವುದೂ ಸತ್ಯ. ಮನೆಯಲ್ಲಿಯೂ ಚೈನೀಸ್ ಆಹಾರಗಳನ್ನು ತಯಾರಿಸಬಾರದು ಎಂದೇನಿಲ್ಲ. ನಾವು ಈಗಾಗಲೇ ಚೈನೀಸ್ ಅಡುಗೆಗಳ ಹಲವಾರು ರೆಸಿಪಿಗಳನ್ನು ತಿಳಿಸಿಕೊಟ್ಟಿದ್ದೇವೆ. ಇಂದು ಕೂಡಾ ಒಂದು ಚೈನೀಸ್ ನಾನ್‌ವೆಜ್ ಅಡುಗೆ ಹೇಳಿಕೊಡುತ್ತೇವೆ. ಸೂಪರ್ ಟೇಸ್ಟ್ ಆಗಿರುವ ಆರೆಂಜ್ ಚಿಕನ್ (Orange Chicken) ರೆಸಿಪಿ ನೀವೊಮ್ಮೆ ಟ್ರೈ ಮಾಡಿ ಮಕ್ಕಳಿಗೆ ನೀಡಿ.
Advertisement
ಬೇಕಾಗುವ ಪದಾರ್ಥಗಳು:
ಚಿಕನ್ – ಅರ್ಧ ಕೆಜಿ (ಮೂಳೆಗಳಿಲ್ಲದ ಚರ್ಮ ರಹಿತ ತುಂಡುಗಳು)
ಮೊಟ್ಟೆ – 2
ಉಪ್ಪು – ರುಚಿಗೆ ತಕ್ಕಷ್ಟು
ಕರಿಮೆಣಸಿನ ಪುಡಿ – ಸ್ವಾದಕ್ಕನುಸಾರ
ಮೈದಾ ಹಿಟ್ಟು – ಅರ್ಧ ಕಪ್
ಕಾರ್ನ್ ಫ್ಲೋರ್ – ಅರ್ಧ ಕಪ್
ಎಣ್ಣೆ – ಹುರಿಯಲು ಬೇಕಾಗುವಷ್ಟು
ಬಿಳಿ ಎಳ್ಳು – 1 ಟೀಸ್ಪೂನ್
ಹೆಚ್ಚಿದ ಸ್ಪ್ರಿಂಗ್ ಆನಿಯನ್ – ಕಾಲು ಕಪ್
ಆರೆಂಜ್ ಸಾಸ್ ತಯಾರಿಸಲು:
ಎಣ್ಣೆ – 2 ಟೀಸ್ಪೂನ್
ತುರಿದ ಶುಂಠಿ – 2 ಟೀಸ್ಪೂನ್
ತುರಿದ ಬೆಳ್ಳುಳ್ಳಿ – 1 ಟೀಸ್ಪೂನ್
ಕಿತ್ತಳೆ ರಸ – 1 ಕಪ್
ಸೋಯಾ ಸಾಸ್ – ಕಾಲು ಕಪ್
ಕಂದು ಸಕ್ಕರೆ – ಅರ್ಧ ಕಪ್
ಕೆಂಪು ಮೆಣಸಿನ ಪುಡಿ – ಅರ್ಧ ಟೀಸ್ಪೂನ್
ವಿನೆಗರ್ – 2 ಟೀಸ್ಪೂನ್
ಎಳ್ಳೆಣ್ಣೆ – 1 ಟೀಸ್ಪೂನ್
ನೀರು – ಅರ್ಧ ಕಪ್
ಕಾರ್ನ್ ಫ್ಲೋರ್ – 2 ಟೀಸ್ಪೂನ್ ಇದನ್ನೂ ಓದಿ: ಹಂದಿ ಮಾಂಸ ಪ್ರಿಯರಿಗಾಗಿ ಹನಿ ಗಾರ್ಲಿಕ್ ಪೋರ್ಕ್ ಚಾಪ್ಸ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಬಟ್ಟಲಿನಲ್ಲಿ ಮೊಟ್ಟೆ ಒಡೆದು ಕಲಡಿ ಬದಿಗಿಡಿ.
* ಇನ್ನೊಂದು ಬಟ್ಟಲಿನಲ್ಲಿ ಉಪ್ಪು, ಕರಿಮೆಣಸಿನ ಪುಡಿ, ಮೈದಾ ಹಿಟ್ಟು, ಕಾರ್ನ್ ಫ್ಲೋರ್ ಹಾಕಿ ಮಿಶ್ರಣ ಮಾಡಿ ಪಕ್ಕಕ್ಕಿಡಿ.
* ಈಗ ಒಂದು ಪ್ಯಾನ್‌ಗೆ ಎಣ್ಣೆ ಹಾಕಿ, ಬಿಸಿ ಮಾಡಿಕೊಳ್ಳಿ.
* ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿದ ಚಿಕನ್ ಅನ್ನು ಒಂದೊಂದೇ ಮೊಟ್ಟೆಯಲ್ಲಿ ಅದ್ದಿ, ಬಳಿಕ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ. ಬಳಿಕ ಬಿಸಿ ಮಾಡಿದ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ.
* ಚಿಕನ್ ತುಂಡುಗಳು ಬೇಯುವವರೆಗೆ ಹಾಗೂ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ 5 ನಿಮಿಷ ಫ್ರೈ ಮಾಡಿ, ಬಳಿಕ ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್‌ನಲ್ಲಿ ಹರಡಿ. ಎಲ್ಲಾ ಚಿಕನ್ ತುಂಡುಗಳನ್ನೂ ಹೀಗೇ ಪುನರಾವರ್ತಿಸಿ.
* ಈಗ ಒಂದು ಪ್ಯಾನ್ ತೆಗೆದುಕೊಂಡು, ಅದರಲ್ಲಿ 2 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ 1 ನಿಮಿಷ ಹುರಿದುಕೊಳ್ಳಿ.
* ಬಳಿಕ ಕಿತ್ತಳೆ ರಸ, ಸೋಯಾ ಸಾಸ್, ಕಂದು ಸಕ್ಕರೆ, ಕೆಂಪು ಮೆಣಸಿನ ಪುಡಿ, ವಿನೆಗರ್, ಎಳ್ಳೆಣ್ಣೆ ಸೇರಿಸಿ, ಕುದಿಸಿ.
* ಈಗ ಸಣ್ಣ ಬೌಲ್ ತೆಗೆದುಕೊಂಡು ಅದರಲ್ಲಿ ಕಾರ್ನ್ ಫ್ಲೋರ್ ಹಾಗೂ ಅರ್ಧ ಕಪ್ ನೀರು ಸೇರಿಸಿ, ಮಿಶ್ರಣ ಮಾಡಿ. ಈ ಮಿಶ್ರಣವನ್ನು ಪ್ಯಾನ್‌ಗೆ ಸೇರಿಸಿ, 2-3 ನಿಮಿಷ ಬೇಯಿಸಿ.
* ಸಾಸ್ ದಪ್ಪವಾಗುತ್ತಾ ಬಂದಂತೆ ಫ್ರೈ ಮಾಡಿ ಇಟ್ಟಿದ್ದ ಚಿಕನ್ ತುಂಡುಗಳನ್ನು ಸೇರಿಸಿ, ಮಿಶ್ರಣ ಮಾಡಿ.
* ಈಗ ಸ್ಪ್ರಿಂಗ್ ಆನಿಯನ್ ಹಾಗೂ ಬಿಳಿ ಎಳ್ಳನ್ನು ಸೇರಿಸಿ, ಮಿಶ್ರಣ ಮಾಡಿ.
* ಇದೀಗ ಚೈನೀಸ್ ಸ್ಟೈಲ್‌ನ ಆರೆಂಜ್ ಚಿಕನ್ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನು ಮಕ್ಕಳಂತೂ ಇಷ್ಟಪಟ್ಟು ತಿನ್ನುತ್ತಾರೆ. ಇದನ್ನೂ ಓದಿ: ಚಹಾ ಸಮಯದಲ್ಲಿ ಆನಂದಿಸಿ ರುಚಿರುಚಿಯಾದ ಚಿಕನ್ ಬಾಲ್ಸ್