ಅಮೆರಿಕದ ಅಣ್ವಸ್ತ್ರ ತಾಣದ ಮೇಲೆ ಚೀನಾದ ಬೇಹುಗಾರಿಕಾ ಬಲೂನು ಹಾರಾಟ

Public TV
1 Min Read
spy balloon

ವಾಷಿಂಗ್ಟನ್: ಶಂಕಿತ ಚೀನಾದ (China) ಬೇಹುಗಾರಿಕಾ ಬಲೂನು (Spy Balloon) ಒಂದು ಅಮೆರಿಕದ (America) ವಾಯುಪ್ರದೇಶದಲ್ಲಿ ಹಾರಾಡುತ್ತಿರುವುದು ಕಂಡುಬಂದಿರುವುದಾಗಿ ವರದಿಯಾಗಿದೆ. ಅಮೆರಿಕದ ಅಣ್ವಸ್ತ್ರ ತಾಣಗಳ ಮೇಲೆ ಈ ಬಲೂನು ಹಾರಾಡಿರುವುದು ಪತ್ತೆಯಗಿದ್ದು, ಚೀನಾ ಅಮೆರಿಕ ಮೇಲೆ ಬೇಹುಗಾರಿಕೆ ನಡೆಸುತ್ತಿರುವ ಆರೋಪ ಕೇಳಿಬಂದಿದೆ.

ಮಾಲ್ಮ್‌ಸ್ಟ್ರೋಮ್ ಏರ್ ಫೋರ್ಸ್ ಬೇಸ್‌ನಲ್ಲಿರುವ ರಾಷ್ಟ್ರದ 3 ಪರಮಾಣು ಕ್ಷಿಪಣಿ ಉಡಾವಣಾ ಸೌಲಭ್ಯಗಳಲ್ಲಿ ಒಂದಾದ ಮೊಂಟಾನಾದಲ್ಲಿ ಬಲೂನು ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ. ಬಲೂನು ಪತ್ತೆಯಾಗುತ್ತಲೇ ಅದನ್ನು ಹೊಡೆದುರುಳಿಸಲು ಮೊದಲಿಗೆ ನಿರ್ಧರಿಸಲಾಗಿತ್ತು. ಆದರೆ ಈ ಕ್ರಮದಿಂದ ಆ ಪ್ರದೇಶದಲ್ಲಿರುವ ಜನರಿಗೆ ಹಾನಿಯಾಗುವ ಭೀತಿಯೂ ವ್ಯಕ್ತವಾಗಿದೆ.

America spy balloon

ವಾಯುಪ್ರದೇಶದಲ್ಲಿ ಸಂಚರಿಸುತ್ತಿರುವ, ಜನರಿಗೆ ಅಪಾಯವಾಗುವ ಭೀತಿಯನ್ನು ಹುಟ್ಟಿಸುತ್ತಿರುವ ಬಲೂನ್ ಮೇಲೆ ಕಣ್ಣಿಡಲಾಗಿದೆ. ಈ ಹಿಂದೆಯೂ ಇಂತಹ ಬಲೂನುಗಳನ್ನು ಗುರುತಿಸಲಾಗಿದೆ. ರಾಷ್ಟ್ರದ ಭದ್ರತೆಗೆ ಸಂಬಂಧಪಟ್ಟಂತೆ ಸೂಕ್ಷ್ಮ ಮಾಹಿತಿಗಳನ್ನು ಈ ಬೇಹುಗಾರಿಕಾ ತಂತ್ರ ಸಂಗ್ರಹಿಸದಂತೆ ತಡೆಯಲು ಅಮೆರಿಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಯುದ್ಧ ವಿಮಾನಗಳನ್ನು ಕಳುಹಿಸುತ್ತೇವೆ – ಉಕ್ರೇನ್ ಬೆಂಬಲಕ್ಕೆ ನಿಂತ ಬ್ರಿಟನ್

ಅಧಿಕಾರಿಗಳು ಶಂಕಿತ ಬೇಹುಗಾರಿಕಾ ಬಲೂನಿನ ಗಾತ್ರವನ್ನು ನಿರ್ದಿಷ್ಟವಾಗಿ ತಿಳಿಸಿಲ್ಲ. ಮೂಲಗಳ ಪ್ರಕಾರ ಅದು ದೊಡ್ಡ ಗಾತ್ರದ್ದಾಗಿದ್ದು, ವಾಣಿಜ್ಯ ವಾಯು ಸಂಚಾರ ವ್ಯಾಪ್ತಿಗಿಂತಲೂ ಎತ್ತರದಲ್ಲಿ ಹಾರಾಡುತ್ತಿದೆ ಎನ್ನಲಾಗಿದೆ. ಒಂದು ವೇಳೆ ಬಲೂನ್ ಅನ್ನು ಹೊಡೆಯಲು ಮುಂದಾದರೆ ಅದರಿಂದ ಭೂಪ್ರದೇಶದಲ್ಲಿರುವ ಜನರಿಗೆ ಹಾನಿಯಾಗಬಹುದೇ ಅಥವಾ ಎಷ್ಟರ ಮಟ್ಟಿಗೆ ಹಾನಿಯಾಗಬಹುದು ಎಂಬುದು ಸ್ಪಷ್ಟವಾಗಿಲ್ಲ. ಇದನ್ನೂ ಓದಿ: ಬೆಂಗಳೂರಿನಲ್ಲಿ ಜಿ20 ಶೃಂಗಸಭೆ – ತಾಜ್ ವೆಸ್ಟ್ ಎಂಡ್ ಆವರಣದ ಮೇಲೆ No Fly Zone ಜಾರಿ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *